More

    ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?

    ನವದೆಹಲಿ: ಶೈಕ್ಷಣಿಕ ಸಂಸ್ಥೆಗಳ ಮರು ಆರಂಭಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ. ಇದರಂತೆ ಸೆಪ್ಟೆಂಬರ್​ 1ರಿಂದ ನವೆಂಬರ್​ 14ರವರೆಗೆ ಹಂತಹಂತಗಳಲ್ಲಿ ಶಾಲಾ- ಕಾಲೇಜುಗಳನ್ನು ಆರಂಭಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ.

    ಶಿಕ್ಷಣ ಸಂಸ್ಥೆಗಳ ಆರಂಭದ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕಾರ್ಯದರ್ಶಿಗಳ ಗುಂಪು ಚರ್ಚೆ ನಡೆಸಿದೆ. ಇದನ್ನು ಕೇಂದ್ರ ಸಚಿವ ಡಾ. ಹರ್ಷವರ್ಧನ್​ ನೇತೃತ್ವದ ಕೋವಿಡ್​-19 ಕುರಿತಾದ ಸಚಿವರ ಗುಂಪಿಗೆ ಸಲ್ಲಿಸಿದೆ.

    ಆಗಸ್ಟ್​ 31ರ ನಂತರ ರಾಜ್ಯಗಳಿಗೆ ಸೂಚಿಸಲಾಗುವ ಅನ್​ಲಾಕ್​ 4.0 ಮಾರ್ಗಸೂಚಿಯನ್ವಯ ಇದನ್ನು ಮಾರ್ಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ರಾಜ್ಯ ಸರ್ಕಾರಗಳ ತೀರ್ಮಾನವೇ ಅಂತಿಮವಾಗಿರಲಿದೆ.

    ಇದನ್ನೂ ಓದಿ; ಆ.9ರಂದು ದೇಶಾದ್ಯಂತ ಮತ್ತೊಮ್ಮೆ ‘ಕ್ವಿಟ್‌ ಇಂಡಿಯಾ’ ಚಳವಳಿ- ಏಕೆ ಗೊತ್ತಾ?

    ಯಾವಾಗ ಮತ್ತು ಹೇಗೆ ಮಕ್ಕಳನ್ನು ತರಗತಿಗಳಿಗೆ ಕರೆತರಬೇಕು ಎಂಬ ನಿರ್ಧಾರವನ್ನು ರಾಜ್ಯ ಸರ್ಕಾರಗಳೇ ಕೈಗೊಳ್ಳಲಿವೆ. ಕೇಂದ್ರದಿಂದ ಅನುಮತಿ ನೀಡುವುದು ಅಥವಾ ನಿರ್ಬಂಧಗಳನ್ನು ಸಡಿಲಿಸಲಾಗುತ್ತದೆ. ಇದಕ್ಕೆ ಕೇಂದ್ರದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (SOP) ಪಾಲಿಸಬೇಕಾಗುತ್ತದೆ.

    ಶಾಲಾ-ಕಾಲಾಜುಗಳ ಆರಂಭಕ್ಕೆ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಶಿಕ್ಷಣ ಇಲಾಖೆ ಜುಲೈನಲ್ಲಿ ಸಮೀಕ್ಷೆಯೊಂದನ್ನು ನಡೆಸಿ ಸಿದ್ಧಪಡಿಸಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಸಿದ್ಧರಿಲ್ಲ ಎಂಬುದು ಕೂಡ ಈ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

    ಆದರೆ, ಶಾಲೆಯಿಂದ ಹೊರಗುಳಿಯುವುದರಿಂದ ಬಡಮಕ್ಕಳು ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಹಲವು ರಾಜ್ಯ ಸರ್ಕಾರಗಳು ಕೇಂದ್ರದ ಮುಂದೆ ವಾದ ಮಂಡಿಸಿವೆ. ಕೋವಿಡ್​ ಪ್ರಕರಣಗಳು ಕಡಿಮೆಯಿರುವ ರಾಜ್ಯಗಳು ಶಾಲಾರಂಭಕ್ಕೆ ಒಲವು ತೋರಿವೆ. ಅದರಲ್ಲೂ ಹಿರಿಯ ತರಗತಿಗಳನ್ನು ಮೊದಲು ಶುರು ಮಾಡಲಿಚ್ಛಿಸಿವೆ ಎಂದು ಕೇಂದ್ರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ; ಆ.10ರಂದು ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ

    ಮಾರ್ಗಸೂಚಿಯಲ್ಲೇನಿದೆ?: ಹಂತ ಹಂತವಾಗಿ ಶಾಲಾರಂಭಕ್ಕೆ ಯೋಜಿಸಲಾಗಿದೆ. ಮೊದಲ 15 ದಿನ 10-12ನೇ ತರಗತಿ ವಿದ್ಯಾರ್ಥಿಗಳು ಕ್ಲಾಸ್​ಗೆ ಹಾಜರಾಗಲಿದ್ದಾರೆ. ಒಂದೊಂದು ತರಗತಿ ವಿದ್ಯಾರ್ಥಿಗಳು ನಿಗದಿತ ದಿನದಂದು ಶಾಲೆಗೆ ಹಾಜರಾಗಲಿದ್ದಾರೆ. ಅದರಲ್ಲೂ ಆಯಾ ಸೆಕ್ಷನ್​ನ ಅರ್ಧದಷ್ಟು ವಿದ್ಯಾರ್ಥಿಗಳಷ್ಟೇ ಶಾಲೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ.

    ಶಿಫ್ಟ್​ನಲ್ಲಿ ತರಗತಿ: ಹಿಂದಿನಂತೆ ಪೂರ್ಣ ಅವಧಿಗೆ ಶಾಲೆ- ಕಾಲೇಜುಗಳು ತೆರೆದಿರುವುದಿಲ್ಲ. ವಿದ್ಯಾರ್ಥಿಗಳು 5-6 ತಾಸಿನ ಬದಲು 2-3 ತಾಸಷ್ಟೇ ಶಾಲೆಯಲ್ಲಿರಬೇಕು. ಅದರಲ್ಲೂ ಶಾಲೆಗಳು ಶಿಫ್ಟ್​ನಲ್ಲಿ ಕಾರ್ಯ ನಿರ್ವಹಿಸಲಿವೆ. ಅಂದರೆ, ಬೆಳಗ್ಗೆ 8ರಿಂದ 11 ಗಂಟೆಗೆ ಒಂದು ಶಿಫ್ಟ್​, ಮಧ್ಯಾಹ್ನ 12-3 ಗಂಟೆ ಮತ್ತೊಂದು ಶಿಫ್ಟ್​ ಇರಲಿದೆ.

    ಈ ನಡುವೆ ಮಧ್ಯಾಹ್ನದ ಊಟದ ಅವಧಿಯಲ್ಲಿ ಒಂದು ತಾಸು ಶಾಲೆಯಲ್ಲಿ ಸ್ಯಾನಿಟೈಸ್​ ಮಾಡಬೇಕಾಗುತ್ತದೆ. ಪ್ರತಿದಿನ ಒಟ್ಟು ಬೋಧಕರ ಪೈಕಿ ಶೇ.33 ಶಿಕ್ಷಕರನ್ನಷ್ಟೇ ಬಳಸಿಕೊಳ್ಳಬಹುದು. ಇಷ್ಟೇ ಪ್ರಮಾಣದ ವಿದ್ಯಾರ್ಥಿಗಳನ್ನು ಶಾಲೆಗೆ ಹಾಜರಾಗಲು ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.

    ಇದನ್ನೂ ಓದಿ; ಗಗನಯಾನ್​: ರಷ್ಯಾದಲ್ಲಿ ಭಾರತದ ಮೊದಲ ಗಗನಯಾತ್ರಿಗಳ ತರಬೇತಿ ಸಂಪೂರ್ಣ

    ಪ್ರಾಥಮಿಕ- ಪೂರ್ವ ಪ್ರಾಥಮಿಕ ತರಗತಿಯ ಮಕ್ಕಳಿಗೆ ಆನ್ಲೈನ್​ ಕ್ಲಾಸ್​ಗಳನ್ನು ಮುಂದುವರಿಸಲು ಉದ್ದೇಶಿಸಲಾಗಿದೆ. 10-12ನೇ ತರಗತಿಯ ಮಕ್ಕಳು ಶಾಲೆಗೆ ಹಾಜರಾಗುವುದು ಆರಂಭವಾದ ನಂತರ 6- 9ನೇ ಕ್ಲಾಸ್​ ಮಕ್ಕಳಿಗೆ ಅವಕಾಶವಿರಲಿದೆ. ಒಂದು ವೇಳೆ ಹೈಸ್ಕೂಲ್​ ಹಾಗೂ ಪ್ರಾಥಮಿಕ ಶಾಲೆಗಳು ಒಟ್ಟಿಗೆ ಇದ್ದರೆ, ಪ್ರಾಥಮಿಕ ಶಾಲೆ ಕೊಠಡಿಗಳನ್ನು ಪ್ರೌಢಶಾಲೆ ಮ್ಕಕಳಿಗಾಗಿ ಬಳಸಿಕೊಳ್ಳಬಹುದು.

    ಸ್ವಿಜರ್ಲೆಂಡ್​ ಸೇರಿ ಹಲವು ದೇಶಗಳಲ್ಲಿ ಶಾಲಾರಂಭಕ್ಕೆ ಕೈಗೊಳ್ಳಲಾಗಿರುವ ಕ್ರಮಗಳನ್ನು ಅಧ್ಯಯನ ಮಾಡಿದ್ದೇವೆ. ಅದರಂತೆ ಇಲ್ಲಿಯೂ ವ್ಯವಸ್ಥೆ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

    ಈಶಾನ್ಯ ರಾಜ್ಯಗಳು, ಹಿಮಾಚಲಪ್ರದೇಶ, ಉತ್ತರಾಖಂಡ್​ ಹಾಗೂ ಕೆಲ ಕೇಂದ್ರಾಡಳಿತ ಪ್ರದೇಶಗಳು ಶಾಲಾರಂಭಕ್ಕೆ ಸಿದ್ಧವಾದಂತಿವೆ. ಕೇಂದ್ರದ ಮಾರ್ಗಸೂಚಿ ಬಳಿಕ ರಾಜ್ಯಗಳು ಅಂತಿಮ ನಿರ್ಧಾರ ಕೈಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬೈರುತ್​ ಭಯಾನಕ ಸ್ಫೋಟಕ್ಕೆ ಕುಸಿದದ್ದು ಬರೀ ಕಟ್ಟಡಗಳಲ್ಲ…, ಇಡೀ ದೇಶದ ಆಹಾರ ಭದ್ರತೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts