More

  ಸಾಧನೆಗೆ ಪಾಲಕರ ಪ್ರೇರಣೆ

  ಕೋಲಾರ: ಯಾವುದೇ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಗುರಿ ಮುಖ್ಯ. ಸಾಧನೆಯ ಹಿಂದೆ ಗುರು, ಪಾಲಕರ ಪಾತ್ರ ಮಹತ್ವವಾದದ್ದು, ನನ್ನ ಸಾಧನೆಗೆ ಪಾಲಕರು ಪ್ರೇರಣೆಯಾಗಿದ್ದಾರೆ ಎಂದು ಯುಪಿಎಸ್ಸಿ 160ನೇ ರ‍್ಯಾಂಕ್ ವಿಜೇತ ನಾಗೇಂದ್ರ ಬಾಬು ಕುಮಾರ್ ಹೇಳಿದರು.

  ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಾಧಕರ ಸಮ್ಮಿಲನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನನ್ನನ್ನು ಓದಿಸಲು ಪಾಲಕರು ಬಹಳಷ್ಟು ಹಣಕಾಸಿನ ಸಮಸ್ಯೆ ಎದುರಿಸಿದ್ದಾರೆ. ಅವರ ಸಂಕಷ್ಟದ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಓದಿನಲ್ಲಿ ಹೆಚ್ಚು ಅಸಕ್ತಿ ಹೊಂದಿದ್ದೆ ಎಂದರು.

  ವೈದ್ಯರಾಗಬೇಕೆಂಬ ಆಸೆ ತಂದೆಯದ್ದಾಗಿತ್ತು. ಆದರೆ, ನನಗೆ ಐಎಎಸ್ ಆಗಬೇಕೆಂಬ ಆಸೆ ಇತ್ತು. ಪಿಯುಸಿ ಬಳಿಕ ಎಂಜಿನಿಯರ್ ಮುಗಿಸಿದೆ. ಆನಂತರ ಯುಪಿಎಸ್ಸಿಗೆ ತಯಾರಿ ನಡೆಸಲು ಮುಂದಾದೆ, ಆಗ ಡಿ.ಕೆ.ರವಿ ಕಾರ್ಯವೈಖರಿ ನನ್ನನ್ನು ಮತ್ತಷ್ಟು ಉತ್ತೇಜಿಸಿತು ಎಂದು ನೆನಪಿಸಿಕೊಂಡರು.

  ಚಾರಿತ್ರ್ಯ ಕಳೆದುಕೊಂಡರೆ ಎಲ್ಲವೂ ಕಳೆದುಕೊಂಡಂತೆ:
  ಯಾವುದೇ ಒಂದು ಒಳ್ಳೆ ಕೆಲಸಕ್ಕೆ ಸ್ವಲ್ಪ ಜನ ಸಹಕಾರ ನೀಡುತ್ತಾರೆ. ಕೆಲವರು ಕಾಲು ಎಳೆಯುತ್ತಾರೆ. ಅದನ್ನು ಸವಾಲಾಗಿ ಸ್ವೀಕರಿಸಬೇಕು. ಅವರನ್ನು ಶತ್ರು ಎಂದು ಪರಿಗಣಿಸಬಾರದು ಎಂದು ತಿಳಿಸಿದರು. ಹಣ ಕಳೆದುಕೊಂಡರೆ ಏನೂ ಸಮಸ್ಯೆ ಇಲ್ಲ. ಆರೋಗ್ಯ ಕಳೆದುಕೊಂಡರೆ ಏನೋ ಸ್ವಲ್ಪ ಕಳೆದುಕೊಂಡಂತೆ ಕಾಣುತ್ತದೆ. ಆದರೆ, ಜೀವನದಲ್ಲಿ ಚಾರಿತ್ರ‍್ಯ ಕಳೆದುಕೊಂಡರೆ ಎಲ್ಲರೂ ಕಳೆದುಕೊಂಡಂತೆ ಎಂದು ತತ್ವಜ್ಞಾನಿಯ ಮಾತು ನೆನಪಿಸಿಕೊಂಡು ಬದುಕುಬೇಕು ಎಂದು ನಾಗೇಂದ್ರಬಾಬು ಸಲಹೆ ನೀಡಿದರು.

  ಸಾಧನೆ ವಿದ್ಯಾರ್ಥಿಗಳಿಗೆ ಸೂರ್ತಿ:
  ಕಾಲೇಜಿನ ಅಧ್ಯಕ್ಷ ಎಂ.ಉದಯಕುಮಾರ್ ಮಾತನಾಡಿ, ಸಹ್ಯಾದ್ರಿ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿ ನಾಗೇಂದ್ರ ಬಾಬು ಕುಮಾರ್ 160ನೇ ರ‍್ಯಾಂಕ್ ಪಡೆದುಕೊಂಡು ಜಿಲ್ಲೆಗೆ ಕೀತಿ ತಂದಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಸೂರ್ತಿ ತುಂಬುವಂಥದ್ದು ಎಂದರು. ರಾಜಕಾರಣಿಗೆ ಐದು ವಷÀðಕ್ಕೊಮ್ಮೆ ಪರೀಕ್ಷೆ ಎದುರಾಗುತ್ತದೆ. ನವೀಕರಣ ಮಾಡಿಸಿಕೊಳ್ಳುತ್ತಿರಬೇಕು. ಆದರೆ, ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ 30 ರಿಂದ 40 ವರ್ವ ಸೇವೆ ಮಾಡಬಹುದು. ಜಿಲ್ಲೆಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಸಿಗಲಿ ಎಂದು ಆಶಿಸಿದರು. ಕೋವಿಡ್ ಬಳಿಕ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಸವಾಲು ಎದುರಾಯಿತು. ಆದರೆ, ಪಾಲಕರ ಸಹಕಾರದಿಂದ ಬೇಗನೇ ಚೇತರಿಸಿಕೊಂಡು ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು.

  See also  ವಿಕಲಚೇತನರಲ್ಲಿ ಸಾಧಿಸುವ ಅಪರೂಪದ ಕಲೆ ಅಡಗಿದೆ

  ಜಿಲ್ಲಾ ಪತ್ರಕರ್ತ ಕಾರ್ಯನಿರತ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಕುಡಿಯುವ ನೀರಿಗೂ ಪರಿತಪಿಸುವಂತ ಪರಿಸ್ಥಿತಿ ಎದುರಾಗಿದೆ. ರೈತರ ಪರಿಶ್ರಮಿಗಳು. ಬೇರೆ ಕಡೆ ಆತ್ಮಹತ್ಯೆ ಮಾಡಿಕೊಂಡರೂ ಇಲ್ಲಿ ಧೈರ್ಯದಿಂದ ಬದುಕುತ್ತಿದ್ದಾರೆ. ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು. ನಾಗೇಂದ್ರ ಅವರನ್ನು ವೈದ್ಯರನ್ನಾಗಿ ಮಾಡಬೇಕೆಂಬ ಆಸೆಯನ್ನು ತಂದೆ ಹೊಂದಿದ್ದರು. ಆದರೆ, ಮಗ ಈಗ ಇಡೀ ಸಮಾಜಕ್ಕೆ ಚಿಕಿತ್ಸೆ ನೀಡುವ ವೈದ್ಯರಾಗಿದ್ದಾರೆ ಎಂದರು.

  ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
  ಕಾಲೇಜಿನ ಕಾರ್ಯದರ್ಶಿ ಕುಲಕರ್ಣಿ, ಉಪಾಧ್ಯಕ್ಷ ಮಾರುತಿ, ಪ್ರಾಂಶುಪಾಲ ರವಿಕುಮಾರ್, ಬದರೀನಾಥ್, ಪಾಲಕರಾದ ಟಿ.ಎನ್.ನಾರಾಯಣಪ್ಪ, ಸುನಂದಮ್ಮ, ಚಿಕ್ಕಮ್ಮ ಪದ್ಮಾ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts