More

    ಮಾನವೀಯ ಗುಣಗಳ ಭಾರತದ ಸಹೋದರರು ದಕ್ಷಿಣ ಆಫ್ರಿಕಾದಲ್ಲಿ ಕರೊನಾಗೆ ಬಲಿ: ಕಂಬನಿ ಮಿಡಿತ ಜಗತ್ತು

    ಕೇಪ್​ಟೌನ್:  ದಕ್ಷಿಣ ಆಫ್ರಿಕಾದ ಲೆನೇಶಿಯಾದಲ್ಲಿ ಸಮುದಾಯ ಸೇವೆ ಒದಗಿಸುವ ಹೆಸರಾಂತ ಸಂಘಟನೆಯ ಸ್ಥಾಪಕ ಸದಸ್ಯರೂ ಆಗಿದ್ದ ಇಬ್ಬರು ಭಾರತೀಯ ಮೂಲದ ಸಹೋದರರು ಕೋವಿಡ್​​​ಗೆ ಬಲಿಯಾಗಿದ್ದಾರೆ.
    ಸಾಬೆರಿ ಚಿಸ್ತಿ ಸೊಸೈಟಿಯ ಅಧ್ಯಕ್ಷರಾದ ಅಬ್ಬಾಸ್ ಸಯ್ಯದ್ ಮತ್ತು ಒಸ್ಮಾನ್ ಸಯೀದ್ ಶುಕ್ರವಾರ ಮತ್ತು ಶನಿವಾರ ನಿಧನರಾಗಿದ್ದು, ಅಕ್ಕಪಕ್ಕದಲ್ಲೇ ಸಮಾಧಿ ಮಾಡಲಾಯಿತು. ಈ ಸಹೋದರರ ನಿಧನಕ್ಕೆ ಭಾರತ ಸೇರಿ ಜಗತ್ತಿನಾದ್ಯಂತ ಸಂತಾಪ ಸೂಚಕ ನುಡಿಗಳು ಹರಿದುಬಂದವು. ಚಿಕ್ಕ ವಯಸ್ಸಿನಲ್ಲೇ ಅಬ್ಬಾಸ್ ಅಜ್ಮೀರ್ ಗೆ ಭೇಟಿ ನೀಡುವ ಮೂಲಕ ಸಮಾಜಮುಖಿ ಕಾರ್ಯಗಳಿಗೆ ನಾಂದಿ ಹಾಡಿದ್ದರು.

    ಇದನ್ನೂ ಓದಿ:  ಕೋವಿಡ್‌ಗಾಗಿ ₹3.7 ಲಕ್ಷ ಸಂಗ್ರಹ: ಐದು ವರ್ಷದ ಪುಟಾಣಿಯ ಸಾಹಸ ಇಲ್ಲಿದೆ ನೋಡಿ…

    ಅಜ್ಮೀರ್‌ನಿಂದ ಹಿಂದಿರುಗಿದ ನಂತರ, ಲೆನೇಶಿಯಾದ ತಮ್ಮ ಮನೆಯಲ್ಲಿ ಅವರು ಹಮ್ಮಿಕೊಂಡಿದ್ದ ಒಂದು ಸಣ್ಣ ಧಾರ್ಮಿಕ ಆಚರಣೆ ವರ್ಣಬೇಧ ಯುಗದಲ್ಲೂ ಎಲ್ಲ ಸಮುದಾಯಗಳಿಗೆ ವಿವಿಧ ದತ್ತಿ ಮತ್ತು ಕಲ್ಯಾಣ ಯೋಜನೆಗಳಿಗೆ ಹೊಸ ರೂಪ ತಂದುಕೊಟ್ಟಿತು ಎನ್ನಬಹುದು.
    ಅವರ ತಂದೆ, ಚಿಕ್ಕಪ್ಪ ಮತ್ತು ಚಿಕ್ಕಮ್ಮಂದಿರು ಆರಂಭಿಸಿದ ಸಾಮಾಜಿಕ ಸೇವೆಗಳನ್ನು ಮುಂದುವರಿಸಿಕೊಂಡು ಹೋಗಿದ್ದ ಆರು ಜನರ ಪೈಕಿ ಇಬ್ಬರು ಸಹೋದರರು ಆಹಾರ ವಿತರಣೆ, ಮಸೀದಿ, ಮದ್ರಸಾಗಳ ನಿರ್ಮಾಣ, ತಾವಿರುವ ಸ್ಥಳದಲ್ಲಿ ಸರ್ಕಾರಿ ಸೌಲಭ್ಯಗಳಿಲ್ಲದಾಗ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುವುದು ಇತ್ಯಾದಿ ಸಾಮಾಜಿಕ, ಧಾರ್ಮಿಕ ಕಾರ್ಯ ಮಾಡುತ್ತಿದ್ದರು.

    ಇದನ್ನೂ ಓದಿ:  ಅಯ್ಯೋ… ಈ ಕ್ರಿಕೆಟಿಗನ ಜತೆ ನನಗೆ ಸೆಲ್ಫಿ ಬೇಕಿತ್ತಾ ಎಂದಿದ್ದೇಕೆ ಅಭಿಮಾನಿ?

    “ಅವರ ಮನೆತನದ ಹಿರಿಯರಂತೆ, ಸಹೋದರರೀರ್ವರೂ ತಮ್ಮ ಜೀವನದುದ್ದಕ್ಕೂ ದಣಿವರಿಯದೆ ಸಮುದಾಯಕ್ಕೆ ಸಮರ್ಪಣಾಭಾವದಿಂದ ಸೇವೆ ಸಲ್ಲಿಸಿದರು. ಅವರ ನಗು ಮತ್ತು ಅವರ ಹೃದಯಸ್ಪರ್ಶಿ ಮಾತು ನೆನೆಯುತ್ತಿದ್ದಂತೆ ತೀವ್ರ ದುಃಖವಾಗುತ್ತದೆ” ಎಂದು ಲಖನೌದ ಧಾರ್ಮಿಕ ಮುಖಂಡರು ಸಂದೇಶದಲ್ಲಿ ತಿಳಿಸಿದ್ದಾರೆ.
    ಅವರು ಘನತೆ, ಪ್ರಾಮಾಣಿಕತೆ, ಸತ್ಯತೆ ಮತ್ತು ಸರಳತೆಯ ವ್ಯಕ್ತಿತ್ವದವರಾಗಿದ್ದರು ಎಂದು ಪಾಣಿಪತ್‌ ನ ಅವರ ಆಪ್ತರು ತಿಳಿಸಿದ್ದಾರೆ. 2009 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ 30 ವರ್ಷಗಳ ಹಿಂದೆ ಮುಚ್ಚಿದ ಪುರಾತನ ಮಸೀದಿಯನ್ನು ಪುನಃಸ್ಥಾಪಿಸಲು ಸಂಸ್ಥೆ ಹಣ ಸಂಗ್ರಹಣೆ ಮಾಡುವ ಮೂಲಕ ಸಹಾಯ ಮಾಡಿತ್ತು.

    ಅಮೆರಿಕಕ್ಕೆ ಬರಲಿದೆ ಚೀನಾದ ಡೆಂಜರ್‌ ಬೀಜ: ದೇಶದ ಜನತೆಗೆ ಅಲರ್ಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts