More

    ವಾರದಲ್ಲಿ ಅಮೆರಿಕ, ಬ್ರೆಜಿಲ್​ ಮೀರಿಸಿದ ಭಾರತ; ಹೊಸ ಕರೊನಾ ಕೇಸ್​ಗಳಿಗೆ ಬೀಳುತ್ತಿಲ್ಲ ಕಡಿವಾಣ

    ನವದೆಹಲಿ: ಕಳೆದ 24 ತಾಸುಗಳಲ್ಲಿ ಭಾರತದಲ್ಲಿ ಪತ್ತೆಯಾದ ಹೊಸ ಪ್ರಕರಣಗಳ ಸಂಖ್ಯೆ 61,537. ಈ ಮೂಲಕ ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 20,88,611ಕ್ಕೆ ಏರಿದೆ. ಈ ಪೈಕಿ ಈವರೆಗೆ ಒಟ್ಟು 14.27 ಲಕ್ಷ ಜನರು ಕೋವಿಡ್​ನಿಂದ ಗುಣವಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    ಕಳೆದ ನಾಲ್ಕು ದಿನಗಳಿಂದ ಭಾರತದಲ್ಲಿ ಒಂದೇ ದಿನ ವರದಿಯಾಗುತ್ತಿರುವ ಹೊಸ ಕರೊನಾ ಪ್ರಕರಣಗಳ ಸಂಖ್ಯೆ ಜಗತ್ತಿನಲ್ಲಿಯೇ ಅತಿ ಹೆಚ್ಚು. ಈವರೆಗೆ 42 ಸಾವಿರ ಜನರು ಮೃತಪಟ್ಟಿದ್ದರೆ, ಕಳೆದ 24 ತಾಸುಗಳಲ್ಲಿ ಸಾವಿಗೀಡಾದವರ ಸಂಖ್ಯೆ 933.

    ಇದನ್ನೂ ಓದಿ; ಅಮೆರಿಕದ ಕಂಪನಿಗಿಂತ ಹತ್ತು ಪಟ್ಟು ಕಡಿಮೆ ಬೆಲೆಗೆ ಕರೊನಾ ಲಸಿಕೆ ನೀಡಲಿದೆ ಭಾರತೀಯ ಸಂಸ್ಥೆ 

    ಭಾರತದಲ್ಲಿ ನಿನ್ನೆ 62,538 ಹೊಸ ಕೇಸ್​ಗಳು ಕಂಡುಬಂದರೆ, ಗುರುವಾರ 52,509, ಬುಧವಾರ 52,509 ಹಾಗೂ ಮಂಗಳವಾರ 52,050 ಹೊಸ ಸೋಂಕಿತರು ಪತ್ತೆಯಾಗಿದ್ದರು. ಅದರಲ್ಲೂ ಕಳೆದೆರಡು ದಿನಗಳಿಂದ 60 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಕಳೆದ ಒಂದು ವಾರದಲ್ಲಿ ಭಾರತದಲ್ಲಿ 3.25 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದರೆ, ಇಡೀ ಜಗತ್ತಿನ ಪ್ರಕರಣಗಳ ಸಂಖ್ಯೆ 3.23 ಲಕ್ಷವಾಗಿತ್ತು.

    ಸದ್ಯ ಅಮೆರಿಕದಲ್ಲಿ 49 ಲಕ್ಷ ಪ್ರಕರಣಗಳಿದ್ದರೆ, ಬ್ರೆಜಿಲ್​ನಲ್ಲಿ 29 ಲಕ್ಷ ಸೋಂಕಿತರಿದ್ದಾರೆ. ನಂತರದ ಸ್ಥಾನದಲ್ಲಿ ಭಾರತವಿದೆ. ಪ್ರತಿದಿನ ದೇಶದಲ್ಲಿ ಕಂಡುಬರುತ್ತಿರುವ ಪ್ರಕರಣಗಳು ಜಗತ್ತಿನಲ್ಲಿಯೇ ಅತಿ ಹೆಚ್ಚು ಎನ್ನುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

    ಇದನ್ನೂ ಓದಿ; ಕರೊನಾ ಲಸಿಕೆ ಬೆಲೆ ನಿಗದಿ ಪಡಿಸಿದ ಅಮೆರಿಕದ ಮಾಡೆರ್ನಾ; ಬಡವರು ಕೊಳ್ಳೋದು ಕಷ್ಟ…! 

    ಸದ್ಯ ಭಾರತದಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಉತ್ತರಪ್ರದೇಶದಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿವೆ. ಜತೆಗೆ ಹೆಚ್ಚು ಸಾವಿನ ಕೇಸ್​ಗಳು ಈ ರಾಜ್ಯಗಳಿಂದಲೇ ವರದಿಯಾಗುತ್ತಿವೆ.

    ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts