More

    ಆದಾಯ ತೆರಿಗೆ ಇಲಾಖೆಗೆ ಇನ್ನು ಭೇಟಿಕೊಡಬೇಕಾಗಿಲ್ಲ…

    ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಥವಾ ಮೌಲ್ಯಮಾಪನ ಅಧಿಕಾರಿಯನ್ನು ಹುಡುಕಿಕೊಂಡು ಹೋಗುವ ಪರಿಪಾಠಕ್ಕೆ ಸದ್ಯದಲ್ಲೇ ಸಂಪೂರ್ಣ ತಡೆ ಬೀಳಲಿದೆ ಎಂದು ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಮತ್ತು ಗೋವಾ ಪ್ರಾದೇಶಿಕ ಮುಖ್ಯ ಪ್ರಧಾನ ಆಯುಕ್ತ ಪಿ. ಶ್ರೀಧರ್ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಕಾರಣದಿಂದಾಗಿ, ಎಲ್ಲ ಆದಾಯ ತೆರಿಗೆ ಪಾವತಿದಾರರು ನಿಶ್ಚಿಂತೆಯಿಂದ ತಮ್ಮ ಕಾಯಕದತ್ತ ಗಮನ ವಹಿಸಬಹುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಶೀಘ್ರದಲ್ಲಿ ಎಲ್ಲ ತೆರಿಗೆದಾರರ ಸೇರ್ಪಡೆ

    ಸದ್ಯ ಯೋಜನೆಯಲ್ಲಿ ಕೆಲವೇ ವಿಭಾಗಗಳ ಆದಾಯ ತೆರಿಗೆ ಪಾವತಿದಾರರನ್ನು ವ್ಯವಸ್ಥೆಗೆ ಸೇರ್ಪಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಎಲ್ಲ ತೆರಿಗೆದಾರರನ್ನೂ ಒಳಪಡುವಂತೆ ಮಾಡಲಾಗುತ್ತದೆ. ಇದರಿಂದ ಕಚೇರಿಗಳಲ್ಲಿ ಉಂಟಾಗುವ ಯಾವುದೇ ಅನಗತ್ಯ ವಿಳಂಬದ ಸಂಪೂರ್ಣ ಸಮಯದ ಉಳಿತಾಯವಾಗುತ್ತದೆ. ಪ್ರಾದೇಶಿಕ ಹಂತದ ನಿರ್ಣಯಗಳಲ್ಲಿ ಒಂದೊಂದು ಕಡೆ ಒಂದೊಂದು ನಿರ್ಣಯವನ್ನು ಕೈಗೊಳ್ಳಲಾಗುತ್ತಿದ್ದ ಪರಿಪಾಠ ಮುಕ್ತಾಯವಾಗುತ್ತದೆ. ದೇಶಾದ್ಯಂತ ಏಕರೂಪ ತೀರ್ವನಗಳು ಜಾರಿಯಾಗುತ್ತವೆ. ನಾಗರಿಕರು ತಮ್ಮ ಕಾರ್ಯ, ಉದ್ಯಮ, ಸೇವೆಗಳತ್ತ ಈ ಸಮಯ ವ್ಯಯಿಸಬಹುದು ಎಂದು ಶ್ರೀಧರ್ ತಿಳಿಸಿದರು.

    ಮೌಲ್ಯಮಾಪಕರ ಆಯ್ಕೆ ಯಾದೃಚ್ಛಿಕ: ಸಾಂಪ್ರದಾಯಿಕವಾಗಿ ಆದಾಯ ತೆರಿಗೆ ವಿವರ ಸಲ್ಲಿಸುವಾಗ ತೆರಿಗೆ ಪಾವತಿದಾರರು ಹಾಗೂ ತೆರಿಗೆ ಸಲಹೆಗಾರರು ಅಧಿಕಾರಿಗಳ ಜತೆಗೆ ಮಾತುಕತೆ ನಡೆಸುತ್ತಿದ್ದರು. ಈ ಪ್ರಕ್ರಿಯೆಯಲ್ಲಿ ಅನೇಕ ಲೋಪಗಳ ಜತೆಗೆ ಭ್ರಷ್ಟಾಚಾರ ಆರೋಪಗಳೂ ಕೇಳಿಬಂದಿದ್ದವು. ಈ ಕುರಿತು ಪ್ರತಿಕ್ರಿಯಿಸಿದ ಶ್ರೀಧರ್, ನೂತನ ವ್ಯವಸ್ಥೆಯಲ್ಲಿ ಮೌಲ್ಯಮಾಪಕರನ್ನು ಆಯ್ಕೆ ಮಾಡಲಾಗುತ್ತದೆ. ಮಾಹಿತಿ ತಂತ್ರಜ್ಞಾನ, ದತ್ತಾಂಶಗಳು ಹಾಗೂ ಕೃತಕ ಬುದಿಟಛಿಮತ್ತೆಗಳನ್ನು ಬಳಕೆ ಮಾಡಿಕೊಂಡು ಸ್ವಯಂಚಾಲಿತವಾಗಿ ಆದಾಯ ತೆರಿಗೆ ವಿವರ ಸಿದ್ಧವಾಗಿ ತೆರಿಗೆದಾರರಿಗೆ ಆನ್​ಲೈನ್ ಮೂಲಕವೇ ರವಾನೆಯಾಗುತ್ತದೆ. ಮನೆಯಲ್ಲಿ ಅಥವಾ ಕಚೇರಿಯಲ್ಲಿರುವ ಕಂಪ್ಯೂಟರ್ ಮೂಲಕ ಅದರ ಸಂಪೂರ್ಣತೆಯನ್ನು ಪರಿಶೀಲಿಸಬಹುದು ಎಂದು ತಿಳಿಸಿದರು.

    ಇದನ್ನೂ ಓದಿ: ಅಂಚೆ ಕಚೇರಿಗೆ ಚಿಕ್ಕ-ಚೊಕ್ಕ ಕಟ್ಟಡ

    ಆದಾಯ ವಿವರ ಸಲ್ಲಿಸಿದ ನಂತರ ಮೊದಲಿಗೆ ನಗರದ ಹಂತದಲ್ಲಿ, ನಂತರ ಮತ್ತೊಂದು ನಗರದಲ್ಲಿ, ಅಂತಿಮವಾಗಿ ಕೇಂದ್ರ ಮಟ್ಟದಲ್ಲಿ ಮೌಲ್ಯಮಾಪನವಾಗಿ ಅಂತಿಮ ಆದೇಶ ಹೊರಡಿಸಲಾಗುತ್ತದೆ. ಯಾವ ಹಂತದಲ್ಲಿ ಯಾವ ನಗರದಲ್ಲಿ ಮೌಲ್ಯಮಾಪನ ನಡೆಯುತ್ತಿದೆ, ತಮ್ಮ ಪ್ರಕರಣವನ್ನು ಯಾವ ಮೌಲ್ಯಮಾಪನ ಅಧಿಕಾರಿ ನಿರ್ವಹಣೆ ಮಾಡುತ್ತಿದ್ದಾರೆ ಎಂಬ ಸಣ್ಣ ಸುಳಿವೂ ತೆರಿಗೆದಾರರಿಗಾಗಲಿ, ತೆರಿಗೆ ಸಲಹೆಗಾರರಿಗಾಗಲಿ ತಿಳಿಯುವುದಿಲ್ಲ. ಮಾನವ ಹಸ್ತಕ್ಷೇಪ ಶೇ. 100 ತಪ್ಪಿ ಪಾರದರ್ಶಕತೆ ಮೂಡಲಿದೆ ಎಂದರು.

    ಕಡತ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗೆ ತೆರಿಗೆದಾರರ ಸಂಪೂರ್ಣ ವಿವರ ಲಭ್ಯವಿರುತ್ತದೆ. ಆದರೆ ಯಾವುದೇ ಸಂದರ್ಭದಲ್ಲಿ ಅಧಿಕಾರಿಗಳು ನೇರವಾಗಿ ತೆರಿಗೆದಾರರನ್ನು ಸಂಪರ್ಕ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಬೆಂಗಳೂರು ಆದಾಯ ತೆರಿಗೆ ಪ್ರಧಾನ ಆಯುಕ್ತ ಹರೇಶ್ವರ ಶರ್ಮಾ ತಿಳಿಸಿದರು.

    ಇದನ್ನೂ ಓದಿ: ರಾಮಲಲ್ಲಾಗೆ ಸಜ್ಜಾಗಿವೆ ವಿಶೇಷ ಉಡುಪುಗಳು; ಚಿನ್ನದ ದಾರದಲ್ಲಿ ಒಂಬತ್ತು ರತ್ನ ಪೋಣಿಸಿದ ಮಖ್ಮಲ್ ವಸ್ತ್ರ, ಹಸಿರು- ಕಿತ್ತಳೆ ಬಣ್ಣದ ಬಟ್ಟೆ

    58,319 ಪ್ರಕರಣಗಳಲ್ಲಿ 200 ತಿದ್ದುಪಡಿ: ಆದಾಯ ತೆರಿಗೆ ವಿವರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಸಾಕಷ್ಟು ಅನನುಕೂಲಗಳಿದ್ದವು. ಸ್ಥಳೀಯ ಅಧಿಕಾರಿಗಳ ಮನಸ್ಥಿತಿಗೆ ತಕ್ಕಂತೆ ಅನೇಕ ಬಾರಿ ವರದಿಯ ಮೌಲ್ಯಮಾಪನದ ಮೇಲೆ ಪರಿಣಾಮ ಬೀರುತ್ತಿತ್ತು. ಆದಾಯ ತೆರಿಗೆ ಪಾವತಿದಾರರು ಇಲಾಖೆಯ ವಿಳಾಸವನ್ನು ಹುಡುಕಿಕೊಂಡು ಹೋಗಬೇಕಿತ್ತು. ಇದನ್ನೆಲ್ಲ ತಪ್ಪಿಸಲು ಫೇಸ್​ಲೆಸ್ ಅಸೆಸ್​ವೆುಂಟ್ ಯೋಜನೆಯನ್ನು 2019ರ ಸೆ.12ಕ್ಕೆ ಕೇಂದ್ರ ಬಜೆಟ್​ನಲ್ಲಿ ಘೋಷಿಸಲಾಯಿತು. ಪ್ರಾಥಮಿಕ ಹಂತದಲ್ಲಿ ಯೋಜನೆ ಜಾರಿಗೆ ಬೆಂಗಳೂರು ಸೇರಿ ಕೆಲವೇ ನಗರಗಳನ್ನು ಆಯ್ಕೆ ಮಾಡಿಕೊಂಡು ಕೇವಲ 21 ದಿನದಲ್ಲಿ 2019ರ ಅ.7ಕ್ಕೆ ಪ್ರಾಯೋಗಿಕ ಚಾಲನೆ ನೀಡಲಾಯಿತು. ಇಲ್ಲಿಯವರೆಗೆ ಫೇಸ್​ಲೆಸ್ ಅಸೆಸ್​ವೆುಂಟ್ ಅವಧಿಯಲ್ಲಿ 58,319 ಪ್ರಕರಣಗಳಲ್ಲಿ ವರದಿ ಸಿದಟಛಿಪಡಿಸಲಾಗಿದ್ದು, 8,701 ಪ್ರಕರಣದಲ್ಲಿ ಯಾವುದೇ ತಿದ್ದುಪಡಿಗೆ ಬೇಡಿಕೆ ಬಂದಿಲ್ಲ. ಕೇವಲ 200 ಜನರು ಮಾತ್ರ ಕೆಲವು ಸೇರ್ಪಡೆಗಳನ್ನು ಸೂಚಿಸಿದ್ದಾರೆ. ಅಷ್ಟು ನಿಖರವಾಗಿ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀಧರ್ ತಿಳಿಸಿದರು.

    ಅಯೋಧ್ಯೆ ರಾಮನಿಗೆ ಮೀಸೆ ಇರಲಿ ಎಂದ ಹಿಂದುತ್ವ ಪ್ರತಿಪಾದಕ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts