More

    ಅಯೋಧ್ಯೆ ರಾಮನಿಗೆ ಮೀಸೆ ಇರಲಿ ಎಂದ ಹಿಂದುತ್ವ ಪ್ರತಿಪಾದಕ..

    ಲಖನೌ: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಪ್ರತಿಷ್ಠಾಪಿಸಲ್ಪಡುವ ಶ್ರೀರಾಮಚಂದ್ರ, ಲಕ್ಷ್ಮಣರ ಮೂರ್ತಿಗಳಿಗೆ ಮೀಸೆ ಇರಲಿ ಎಂದು ಹಿಂದುತ್ವ ಪ್ರತಿಪಾದಕ ಸಂಭಾಜಿ ಭಿಡೆ ಹೇಳಿದ್ದಾರೆ. ಅವರ ಹೇಳಿಕೆ ಈಗ ದೇಶದ ಗಮನಸೆಳೆದಿದ್ದು, ನಾನಾ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ.

    ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ನಾಳೆ ಭೂಮಿ ಪೂಜೆ ನಡೆಯಲಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಗಿಯಾಗುವ ನಿರೀಕ್ಷೆ ಇದೆ. ಶ್ರೀರಾಮಮಂದಿರ ಟ್ರಸ್ಟ್​ನ ಗೋವಿಂದಗಿರಿ ಜೀ ಮಹಾರಾಜ್ ಅವರ ಜತೆಗೆ ಮಾತನಾಡಿರುವುದಾಗಿ ಹೇಳಿರುವ ಭಿಡೆ, ಪ್ರಸ್ತಾವಿತ ಶ್ರೀರಾಮಮಂದಿರದ ಪರಿವಾರ ಸಮೇತ ಶ್ರೀರಾಮನ ವಿಗ್ರಹದಲ್ಲಿ ಮೀಸೆ ಇರಬೇಕು. ಅದೇ ರೀತಿ ಲಕ್ಷ್ಮಣ ಪ್ರತಿಮೆಯಲ್ಲೂ ಮೀಸೆ ಇರಬೇಕು ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.

    ಇದನ್ನೂ ಓದಿ: ರಾಮಲಲ್ಲಾಗೆ ಸಜ್ಜಾಗಿವೆ ವಿಶೇಷ ಉಡುಪುಗಳು; ಚಿನ್ನದ ದಾರದಲ್ಲಿ ಒಂಬತ್ತು ರತ್ನ ಪೋಣಿಸಿದ ಮಖ್ಮಲ್ ವಸ್ತ್ರ, ಹಸಿರು- ಕಿತ್ತಳೆ ಬಣ್ಣದ ಬಟ್ಟೆ

    ಒಂದೊಮ್ಮೆ ನೀವು ತಪ್ಪುಗಳನ್ನು(ಭಗವಾನ್ ರಾಮನ ಪ್ರತಿಮೆಯಲ್ಲಿ ಮೀಸೆ ಇಲ್ಲದೇ ಹೋದರೆ) ತಿದ್ದಿಕೊಳ್ಳದೇ ಹೋದರೆ, ನನ್ನಂಥ ರಾಮಭಕ್ತನಿಗೆ ಶ್ರೀರಾಮಮಂದಿರ ನಿರ್ಮಾಣವಾದರೂ ಅದರಿಂದ ಏನೂ ಉಪಯೋಗವಾಗದು ಎಂದು ಸುದ್ದಿಗಾಗರಿಗೆ ತಿಳಿಸಿದ್ದಾರೆ.

    ಸಂಭಾಜಿ ಭಿಡೆ ಶ್ರೀ ಶಿವ್​ಪ್ರತಿಷ್ಠಾನ್ ಹಿಂದುಸ್ಥಾನದ ಮುಖ್ಯಸ್ಥರಾಗಿದ್ದು, ಶ್ರೀರಾಮಮಂದಿರಕ್ಕೆ ಭೂಮಿಪೂಜೆ ಮಾಡುವ ಮೊದಲು ಛತ್ರಪತಿ ಶಿವಾಜಿ ಮಹಾರಾಜರ ಚಿತ್ರಕ್ಕೆ ಗೌರವ ಸಲ್ಲಿಸಬೇಕು. ಆಗಸ್ಟ್​ 5ರ ಕಾರ್ಯಕ್ರಮವನ್ನು ದೀಪಾವಳಿ, ದಸರಾ ಹಬ್ಬಗಳಂತೆ ಆಚರಿಸೋಣ ಎಂದು ಜನರಿಗೆ ಕರೆ ನೀಡಿದ್ದಾರೆ. (ಏಜೆನ್ಸೀಸ್)

    ಅರಣ್ಯ ರಕ್ಷಕರೇ ಸಂಕಷ್ಟದಲ್ಲಿರೋವಾಗ ಅರಣ್ಯ ರಕ್ಷಣೆ ಮಾಡಿ ಅನ್ನೋದಾದರೂ ಹೇಗೆ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts