More

    ಮಣಿಪುರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಒತ್ತಾಯ

    ಸಿಂಧನೂರು: ಮಣಿಪುರದಲ್ಲಿ ಅತ್ಯಾಚಾರ, ಬೆತ್ತಲೆ ಮೆರವಣಿಗೆ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಬುಧವಾರ ಪ್ರತಿಭಟನೆ ನಡೆಸಿತು.


    ಕಳೆದ 3 ತಿಂಗಳಿನಿಂದ ನಡೆಯುತ್ತಿರುವ ಭೀಬಿತ್ಸ ಹಿಂಸಾಕಾಂಡಾ, ಬಿಜೆಪಿಯ ವಿಭಜನವಾದಿ ದ್ವೇಷ ರಾಜಕಾರಣಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಬಲಿಷ್ಠ ಮೈತೇಯಿ ಸಮುದಾಯ ಎತ್ತಿಕಟ್ಟಿ ದುರ್ಬಲ ಕುಕಿ ಬುಡಕಟ್ಟು ಸಮುದಾಯವನ್ನು ಹೊಸಕಿಹಾಕಲು ದಾಳಿ ನಡೆಸಲಾಗುತ್ತಿದೆ. ಶಸ್ತ್ರಾಸ್ತ್ರ ಲೂಟಿ ಮಾಡಿ, ಕುಕಿ ಬುಡಕಟ್ಟು ನೆಲೆಗಳನ್ನೆಲ್ಲಾ ಭಸ್ಮ ಮಾಡಲಾಗಿದೆ. ಸಾಮೂಹಿಕ ಅತ್ಯಾಚಾರ, ಮಹಿಳೆಯರನ್ನು ಬೆತ್ತಲಾಗಿಸಿ ಹಿಂಸಿಸುವುದು ಮಿತಿಮೀರಿವೆ ಎಂದು ಆಗ್ರಹಿಸಿದರು.

    ಇದನ್ನೂ ಓದಿ: ಮಣಿಪುರದಲ್ಲಿ ಶಾಂತಿ ಕಾಪಾಡುವಲ್ಲಿ ಬಿಜೆಪಿ ವಿಫಲ


    ಸುಪ್ರೀಂ ಕೋಟ್ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮಹಿಳೆಯರಿಗೆ ರಕ್ಷಣೆ ಕೊಡದಿರುವ ಬೀರೇನ್ ಸಿಂಗ್ ಸರ್ಕಾರವನ್ನು ವಜಾಗೊಳಿಸಬೇಕು. ಬಲಿಷ್ಠ ಮೈತೇಯಿಗಳನ್ನು ಎಸ್ಟಿಗೆ ಸೇರಿಸುವ ಶಿಫಾರಸನ್ನು ವಾಪಸ್ ಪಡೆಯಬೇಕು. ಕುಕಿ, ನಾಗಾ ಬುಡಕಟ್ಟಿನ ಜನರಿಗೆ ರಕ್ಷಣೆ ಒದಗಿಸಿ, ಆಸ್ತಿ-ಪಾಸ್ತಿ ನಷ್ಟ ಪರಿಹಾರ ಸರ್ಕಾರವೇ ಭರಿಸಬೇಕು. ಮೂಲಭೂತವಾದಿ ಲೀಪುಲ್ ಮತ್ತು ಅರಾಂಬೈ ತೆಂಗೋನ್ ಸಂಘಟನೆಗಳನ್ನು ನಿಷೇಧಿಸಬೇಕು. ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರು ನಿರ್ಲಕ್ಷೃವಹಿಸಿದ್ದು, ಇದರ ಹೊಣೆ ಅವರೇ ಹೊತ್ತುಕೊಳ್ಳಬೇಕೆಂದು ಪ್ರತಿಭಟನೆಕಾರರು ಎಚ್ಚರಿಸಿದರು.


    ಸಂಘಟನೆಯ ಪ್ರಮುಖರಾದ ಎಸ್.ದೇವೆಂದ್ರಗೌಡ, ಚಂದ್ರಶೇಖರ ಗೊರೇಬಾಳ, ಡಿ.ಎಚ್.ಕಂಬಳಿ, ನಾಗರಾಜ ಪೂಜಾರ, ಬಸವರಾಜ ಬಾದರ್ಲಿ, ಅಶೋಕ ನಂಜಲದಿನ್ನಿ, ಜಿಲಾನಿಪಾಷಾ, ಶರಣೇಗೌಡ ಕುರುಕುಂದ, ಬಿ.ಎನ್.ಯರದಿಹಾಳ, ಶಕುಂತಲಾ ಪಾಟೀಲ್, ಸರಸ್ವತಿ ಪಾಟೀಲ್, ಸುಮಿತ್ರಾ, ಸುಲೋಚನಾ, ಸಂಗೀತ ಸಾರಂಗಮಠ, ಗಿರಿಜಮ್ಮ, ಆದಿಲಕ್ಷ್ಮೀ, ನೇಹಾ ಸಮರಿನ್, ಬಾಬರಬೇಗ, ಹುಸೇನಸಾಬ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts