More

    ಬಾಲ್ಯದಲ್ಲಿಯೇ ನೈತಿಕ ಶಿಕ್ಷಣ ಬೋಧಿಸಿ

    ಕಂಪ್ಲಿ: ಅಕ್ಷರದೊಂದಿಗೆ ಸಂಸ್ಕಾರ ಮತ್ತು ಜೀವನ ಅನುಭವದ ಪಾಠ ಕೊಡುವ ಶಾಲೆಗಳ ಅಗತ್ಯವಿದೆ ಎಂದು ಹರಗಿನದೋಣಿ ಪಂಚವಣಿಗೆ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.

    ಮೆಟ್ರಿ ಗ್ರಾಮದ ವಿಶ್ವಾರಾಧ್ಯ ಗುರುಕುಲ ಶಿಕ್ಷಣ ಸಮಿತಿಯ ಶ್ರೀ ಎಚ್.ಎಂ.ಕಾಶಿನಾಥ ಶಾಸ್ತ್ರಿ ಸಂಸ್ಕೃತ ಮತ್ತು ವೇದಪಾಠ ಶಾಲೆ ಸಹಯೋಗದಲ್ಲಿ ಏರ್ಪಡಿಸಿದ್ದ ವೈದಿಕ ಸಂಸ್ಕಾರ ಶಿಬಿರದ ಸಮಾರೋಪದಲ್ಲಿ ಮಂಗಳವಾರ ಮಾತನಾಡಿದರು.

    ಮಕ್ಕಳು ಹೆಚ್ಚು ಅಂಕಗಳಿಸುವಂತೆ ಪ್ರೇರೇಪಿಸುವುದರೊಂದಿಗೆ ಸಂಸ್ಕಾರ, ಮಾನವೀಯ ಮೌಲ್ಯಗಳು, ಪ್ರಾಮಾಣಿಕತೆ, ಗುರುಹಿರಿಯರನ್ನು ಗೌರವಿಸುವ ಗುಣಗಳನ್ನು ಕಲಿಯುವಂತೆ ಪ್ರೋತ್ಸಾಹಿಸಬೇಕಿದೆ. ಸಂಸ್ಕಾರ ಕೊರತೆಯಿಂದ ಸಮಾಜದಲ್ಲಿ ಅಶಾಂತಿ ಮೂಡಲು ಕಾರಣವಾಗಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಗುಣಾತ್ಮಕ ಶಿಕ್ಷಣದೊಂದಿಗೆ ನೈತಿಕ ಶಿಕ್ಷಣವನ್ನು ಬೋಧಿಸಬೇಕಿದೆ ಎಂದರು.

    30 ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ವಿಶ್ವಾರಾಧ್ಯ ಗುರುಕುಲ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಂ.ಶಿವಮೂರ್ತಿ, ಕಾರ್ಯದರ್ಶಿ ಎಚ್.ಎಂ.ವಿಶ್ವೇಶ್ವರಯ್ಯ, ವೇದಪಾಠ ಶಾಲೆ ಗುರುಗಳಾದ ಎಚ್.ಎಂ.ದೊಡ್ಡಬಸಯ್ಯಶಾಸ್ತ್ರಿ, ಪ್ರಮುಖ ಓರ್ವಾಯಿ ರುದ್ರಗೌಡ, ಮುಖಂಡ ಎಚ್.ಶಿವಪುತ್ರಪ್ಪ, ಮುಖ್ಯಶಿಕ್ಷಕ ಡಿ.ಜಗದೀಶ, ಡಿ.ಬಸವ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts