More

    ಉತ್ತಮ ಶಿಕ್ಷಣ ಕೊಡಿಸಿ ವಿದ್ಯಾವಂತರನ್ನಾಗಿಸಿ

    ಹರಪನಹಳ್ಳಿ: ಕುಲಕಸುಬು ಕಲ್ಲು ಒಡೆಯುವುದನ್ನೇ ಮುಂದುವರಿಸುವ ಬದಲು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಪುರಸಭೆ ಸದಸ್ಯ ಎಂ.ವಿ.ಅಂಜನಪ್ಪ ತಿಳಿಸಿದರು.

    ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತ ಸೋಮವಾರ ಆಯೋಜಿಸಿದ್ದ ಶ್ರೀ ಸಿದ್ಧರಾಮೇಶ್ವರ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಪಾಲಕರು ಗಮನ ಹರಿಸಬೇಕು. ಬಡತನದಲ್ಲಿ ಕುಲಕಸುಬನ್ನು ಮುಂದುವರಿಸಿಕೊಂಡು ಹೋಗಲು ಕಲ್ಲು ಒಡೆಯವ ಕಾಯಕಕ್ಕೆ ಅಧಿಕಾರಿಗಳು ತೊಂದರೆ ನೀಡದೆ ಸಹಕಾರ ಕೊಡಬೇಕು. ಅವರ ಹೆಸರಿಗೆ ಕಲ್ಲು ಕ್ವಾರಿ ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.

    ಇದನ್ನು ಓದಿ: ಶಿಕ್ಷಣ ಪಡೆದು ಸವಾಲುಗಳ ಎದುರಿಸಿ

    ಸರ್ಕಾರ ಹಮ್ಮಿಕೊಂಡಿರುವ ಮಹನೀಯರ ಜಯಂತಿಗಳು ಕೇವಲ ಒಂದು ಜಾತಿಗೆ ಸೀಮಿತವಾಗುತ್ತಿರುವುದು ದುರದೃಷ್ಟಕರ. ಮಹನೀಯರ ತತ್ವ-ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡಾಗ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

    ಉಪನ್ಯಾಸಕ ತಿರುಮಲೇಶ ತಿಮ್ಮಪ್ಪ ಮಾತನಾಡಿದರು. ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬು ಕಾರ್ಯಕ್ರಮ ಉದ್ಘಾಟಿಸಿದರು. ಇಒ ಕೆ.ಆರ್.ಪ್ರಕಾಶ, ಪುರಸಭೆ ಸದಸ್ಯ ಲಾಟಿ ದಾದಾಪೀರ್, ಮಾಜಿ ಸದಸ್ಯ ಎಚ್.ವಸಂತ, ಸಮಾಜದ ಅಧ್ಯಕ್ಷ ಎಂ.ಬಿ.ಅಂಜನಪ್ಪ, ಮುಖಂಡರಾದ ಗುರುಸಿದ್ದಪ್ಪ, ಮಾಲತೇಶ ನೀಲಗುಂದ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts