More

    ಪಿಯುನಲ್ಲಿ ಬಿಇಟಿಗೆ ಉತ್ತಮ ಫಲಿತಾಂಶ

    ಕೆ.ಎಂ.ದೊಡ್ಡಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಿಇಟಿಯಿಂದ ವಂಚಿತರಾಗದಂತೆ ಎಚ್ಚರ ವಹಿಸಲು ಭಾರತೀ ವಿದ್ಯಾಸಂಸ್ಥೆ ಸಿಇಟಿ ಕಾರ್ಯಗಾರ ಆಯೋಜಿಸುತ್ತ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದೆ ಎಂದು ಭಾರತೀ ಪಿಯು ಅಕಾಡೆಮಿ ಆಫ್ ಎಕ್ಸಲೆನ್ಸ್ ಪ್ರಾಂಶುಪಾಲ ಸಿ.ವಿ. ಮಲ್ಲಿಕಾರ್ಜುನ ತಿಳಿಸಿದರು.

    ಇಲ್ಲಿನ ಭಾರತೀ ಪಿಯು ಅಕಾಡೆಮಿ ಆಫ್ ಎಕ್ಸಲೆನ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲೇಜಿನಲ್ಲಿ ಹಳ್ಳಿಗಾಡಿನ ಮಕ್ಕಳೇ ಹೆಚ್ಚು ವ್ಯಾಸಂಗ ಮಾಡುತ್ತಿದ್ದು, ದ್ವಿತೀಯ ಪಿಯುನಲ್ಲಿ ಉತ್ತಮ ಲಿತಾಂಶ ಬಂದಿದೆ. ಇದು ಕಾಲೇಜಿನ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

    ಭಾರತೀ ವಿದ್ಯಾಸಂಸ್ಥೆಯ ಛೇರ‌್ಮನ್ ಮಧು ಜಿ.ಮಾದೇಗೌಡ ಅವರು ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು ಎಂಬ ಸದುದ್ದೇಶದಿಂದ ಸಿಇಟಿಯಲ್ಲಿ ಉತ್ತಮ ರ‌್ಯಾಂಕ್ ಪಡೆಯಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರಿನ ಯೂ.ಆರ್ ಅಕಾಡೆಮಿಯಿಂದ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಉತ್ತಮ ತರಬೇತಿ ನೀಡಲು ಸಹಕರಿಸಿದ್ದಾರೆ ಎಂದರು.

    ವಿಜ್ಞಾನದ ವಿದ್ಯಾರ್ಥಿಗಳನ್ನು ಪಿಯು ನಂತರ ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ, ಮೀನುಗಾರಿಕೆ ಮುಂತಾದ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ರ‌್ಯಾಂಕ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹಾಗಾಗಿ, ಸಿಇಟಿ ಹಾಗೂ ಯಾವುದೇ ಪರೀಕ್ಷೆಯನ್ನು ನಿರ್ಲಕ್ಷ್ಯ ಮಾಡದೆ ಆರಂಭದಿಂದಲೇ ಶ್ರದ್ಧೆ, ಪರಿಶ್ರಮದಿಂದ ಓದಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಬಳಿಕ ಉನ್ಯಾಸಕ ಪುಟ್ಟಸ್ವಾಮಿ ಮಾತನಾಡಿ, ಸಿಇಟಿ ಎಂದರೆ ಭಯ, ಆತಂಕಕ್ಕೆ ಒಳಗಾಗಬಾರದು. ಅದು ಕಠಿಣ ಪರೀಕ್ಷೆ ಅಲ್ಲ. ಉತ್ಸಾಹ, ಲವಲವಿಕೆಯಿಂದ ಸತತ ಅಭ್ಯಾಸ ನಡೆಸಬೇಕು. ಇದರಿಂದ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳಿಗೆ ಸುಲಭವಾಗಲಿದೆ ಎಂದರು.

    ಅತಿ ಅಂಕ ಗಳಿಸಿದ ಕಾಲೇಜಿನ ವಿದ್ಯಾರ್ಥಿನಿ ಎಚ್.ಡಿ.ಸ್ಪಂದನಾ ಮಾತನಾಡಿ, ವಿದ್ಯಾರ್ಥಿಗಳಾದ ನಾವು ಮೊದಲು ಪರೀಕ್ಷೆ ಭಯ ಬಿಡಬೇಕು. ನಮ್ಮ ಚಿತ್ತ ಓದುವತ್ತ ಇರಬೇಕು. ಶ್ರಮವಹಿಸಿ ಓದಿದರೆ ಸಿಇಟಿ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು. ಈ ನಿಟ್ಟಿನಲ್ಲಿ ಭಾರತೀ ವಿದ್ಯಾಸಂಸ್ಥೆ ನುರಿತ ಶಿಕ್ಷಕರಿಂದ ತರಬೇತಿ ನೀಡಿದ್ದು, ಸಂಸ್ಥೆಯ ಕಾಳಜಿಗೆ ನಾವು ಎಂದಿಗೂ ಋಣಿ ಎಂದರು. ಉನ್ಯಾಸಕರಾದ ಪಟ್ಟಸ್ವಾಮಿ, ಕುಮಾರಸ್ವಾಮಿ, ಅನಿತಾ, ದಿವ್ಯಾ, ವಿನೋದಾ, ಅನುರಾಧಾ, ಅರ್ಪೂವ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts