More

    21 ರಾಜ್ಯಗಳಲ್ಲಿ 1ನೇ ತರಗತಿ ಪ್ರವೇಶ ವಯೋಮಿತಿ 6 ವರ್ಷ ನಿಗದಿ!

    – ಕೇಂದ್ರದ ಶಿಕ್ಷಣ ಇಲಾಖೆ ಆದೇಶ ಪಾಲನೆಗೆ ದಕ್ಷಿಣ ರಾಜ್ಯಗಳಲ್ಲಿ ಇನ್ನೂ  ಒಪ್ಪಿಗೆ ನೀಡಿಲ್ಲ
    – ರಾಜ್ಯದಲ್ಲಿ 2025-26ನೇ ಸಾಲಿನಿಂದ ಅನುಷ್ಠಾನ ಮಾಡುವುದಾಗಿ ಶಿಕ್ಷಣ ಇಲಾಖೆ ಆದೇಶ

    ಬೆಂಗಳೂರು: ದೇಶದ 21 ರಾಜ್ಯಗಳಲ್ಲಿ 2023-24ನೇ ಶೈಕ್ಷಣಿಕ ವರ್ಷದಲ್ಲಿ ಮಕ್ಕಳನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳಲು 6 ವರ್ಷಗಳ ವಯೋಮಿತಿ ಮಾನದಂಡವನ್ನು ಅನುಷ್ಠಾನ ಮಾಡುತ್ತಿವೆ.

    ಕೇಂದ್ರದ ಶಿಕ್ಷಣ ಇಲಾಖೆಯು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ನೀತಿ-2020 ಅಡಿ ಮಕ್ಕಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲು ವಯೋಮಿತಿ 6 ವರ್ಷ ತುಂಬಿರಬೇಕು ಎಂಬ ಮಾರ್ಗಸೂಚಿಯನ್ನು ರೂಪಿಸಿದೆ. ಅದರಂತೆ, ಹೆಚ್ಚಿನ ರಾಜ್ಯಗಳು ಈ ನಿಯಮವನ್ನು ಅನುಷ್ಠಾನ ಮಾಡುತ್ತಿವೆ.

    ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ನಿಕೋಬಾರ್ ದ್ವೀಪಗಳು, ದಾದ್ರಾ ಮತ್ತು ನಗರ್ ಹವೇಲಿ, ಡಿಯು ಮತ್ತು ಡಾಮನ್, ಲಕ್ಷದ್ವೀಪ, ಚಂಡೀಗಡ ಹಾಗೂ ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಡ, ಜಾರ್ಖಂಡ್, ಮಹಾರಾಷ್ಟ್ರ, ಮಣಿಪುರ, ಮೇಘಾಲಯ ಮಿಜೋರಾಂ, ನಾಗಾಲ್ಯಾಂಡ್, ಒಡಿಸ್ಸಾ, ಪಂಜಾಬ್, ಸಿಕ್ಕಿಂ, ತ್ರಿಪುರ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ.ದೆಹಲಿ, ಗೋವಾ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಧ್ಯ ಪ್ರದೇಶ, ರಾಜಸ್ಥಾನ, ಪಾಂಡಿಚೆರಿ, ಉತ್ತರ ಪ್ರದೇಶ ಮತ್ತು ಉತ್ತರಾಖಾಂಡ್ ರಾಜ್ಯಗಳು ಕೇಂದ್ರದ ನಿರ್ದೇಶನವನ್ನು ಇನ್ನಷ್ಟೇ ಅನುಷ್ಠಾನ ಮಾಡಬೇಕಿದೆ.

    ಇದನ್ನೂ ಓದಿ: ಗ್ರಾ.ಪಂ ಉಪಾಧ್ಯಕ್ಷನ ಹತ್ಯೆ; ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ತಿರುವು ಪಡೆಯಿತು ಪ್ರಕರಣ!

    ದಕ್ಷಿಣ ರಾಜ್ಯಗಳಲ್ಲಿ ಒಪ್ಪಿಗೆ ಇಲ್ಲ:
    ದಕ್ಷಿಣ ರಾಜ್ಯಗಳಾದ ಕೇರಳ, ಆಂಧ್ರ ಪ್ರದೇಶ, ತೆಲಂತಾಣ ಮತ್ತು ತಮಿಳುನಾಡು ರಾಜ್ಯಗಳು ವಯೋಮಿತಿ ಮಾನದಂಡ ಅನುಷ್ಠಾನ ಮಾಡುವ ಕುರಿತಂತೆ ಇನ್ನೂ ಒಪ್ಪಿಗೆ ನೀಡಿಲ್ಲ. ಆದ್ದರಿಂದ ಕೇಂದ್ರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮತ್ತೊಮ್ಮೆ ಜ್ಞಾಪನಾ ಪತ್ರವನ್ನು ಕಳುಹಿಸಿದೆ. ಹರಿಯಾಣ ರಾಜ್ಯವು ಮುಂದಿನ ವರ್ಷದಿಂದ ಅನುಷ್ಠಾನ ಮಾಡುವ ಕುರಿತು ಖಚಿತ ಪಡಿಸಿದೆ ಎಂದು ತಿಳಿಸಿದೆ.

    ಕರ್ನಾಟಕದಲ್ಲಿ 2025-26ರಿಂದ ಅನುಷ್ಠಾನ:
    ಕರ್ನಾಟಕದಲ್ಲಿ ಸದ್ಯ 5.5 ವರ್ಷದಿಂದ 7 ವರ್ಷದೊಳಗಿನ ಮಕ್ಕಳನ್ನು ಒಂದನೇ ತರಗತಿಗೆ ಪ್ರವೇಶ ಕಲ್ಪಿಸುತ್ತಿದೆ. 2025-26ನೇ ಸಾಲಿನಿಂದ ಒಂದನೇ ತರಗತಿ ಪ್ರವೇಶ ವಯೋಮಿತಿಯನ್ನು 6 ವರ್ಷಕ್ಕೆ ನಿಗದಿ ಮಾಡಲಾಗುವುದಾಗಿ ಈ ಹಿಂದೆಯೇ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

    ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿ ಪ್ರವೇಶಕ್ಕೆ ಅನುಮತಿ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್​​!

    ಗ್ರಾ.ಪಂ ಉಪಾಧ್ಯಕ್ಷನ ಹತ್ಯೆ; ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ತಿರುವು ಪಡೆಯಿತು ಪ್ರಕರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts