More

    ಗ್ರಾ.ಪಂ ಉಪಾಧ್ಯಕ್ಷನ ಹತ್ಯೆ; ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ತಿರುವು ಪಡೆಯಿತು ಪ್ರಕರಣ!

    ಧಾರವಾಡ: ಚಾಕುವಿನಿಂದ ಇರಿದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷನ ಕೊಲೆ ಮಾಡಿದ ಘಟನೆ ಧಾರವಾಡದ ಕೋಟೂರ ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.

    ನಡೆದಿದ್ದೇನು?: ಪ್ರವೀಣ್ ಕಮ್ಮಾರ (36) ಕೊಲೆಗೀಡಾದ ವ್ಯಕ್ತಿಯಾಗಿದ್ದು, ಕೋಟೂರ ಗ್ರಾಮ ಪಂಚಾಯತಿ ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಜತೆಗೆ ಬಿಜೆಪಿ ಯುವ ಮೋರ್ಚಾ ಮುಖಂಡರೂ ಆಗಿದ್ದರು. ಗ್ರಾಮದಲ್ಲಿ ನಿನ್ನೆ (ಏ.18) ರಾತ್ರಿ ನಡೆದಿದ್ದ ಉಡಚಮ್ಮ ದೇವಿ ಜಾತ್ರೆಗೆ ಪ್ರವೀಣ್ ಕಮ್ಮಾರ ತೆರಳಿದ್ದರು. ಈ ವೇಳೆ ಜಾತ್ರೆಯಲ್ಲಿ ಪ್ರಸಾದ ಕೊಡುವ ವೇಳೆ ಕೆಲವರ ಮಧ್ಯೆ ಜಗಳ ಏರ್ಪಟ್ಟಿತ್ತು. ಪ್ರವೀಣ್ ನಡುವೆ ಹೋಗಿ ಜಗಳ ಬಿಡಿಸಿ ಎಲ್ಲರನ್ನು ವಾಪಸ್ ಕಳುಹಿಸಿದ್ದರು. ಆದರೆ ಜಗಳ ಮಾಡಿದ್ದ ಒಂದು ಗುಂಪು ಪುನಃ ಆಗಮಿಸಿ ಜಗಳ ಬಿಡಿಸಿದ ಕಾರಣಕ್ಕೆ ಪ್ರವೀಣ್ಗೆ ಚಾಕು ಇರಿದಿದ್ದಾರೆ. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಪ್ರವೀಣ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆಬೆಳಗಿನ ಜಾವ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ರಾಘವೇಂದ್ರ ಎಂಬಾತ ಸೇರಿದಂತೆ ನಾಲ್ವರಿಂದ ಕೃತ್ಯಗರಗ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ಜೆಡಿಎಸ್ ಸೇರ್ಪಡೆಗೊಂಡ ಆಯನೂರು ಮಂಜುನಾಥ್

    ಪ್ರವೀಣ್​ ಕಮ್ಮಾರ್ ಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದಿದೆ. ಹತ್ಯೆಯ ಪ್ರಮುಖ ಆರೋಪಿ ರಾಘವೇಂದ್ರ ಪಟಾತ ಸೇರಿ ಮೂವರನ್ನು ಗರಗ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಘವೇಂದ್ರ ಪಟಾತ ಕೂಡ ಬಿಜೆಪಿ ಕಾರ್ಯಕರ್ತನಾಗಿದ್ದ. ಶಾಸಕ ಅಮೃತ ದೇಸಾಯಿ ಆಪ್ತನಾಗಿದ್ದ ರಾಘವೇಂದ್ರನನ್ನು ಧಾರವಾಡ ಗ್ರಾಮಾಂತರ ಜಿಲ್ಲೆಯ ಒಬಿಸಿ ಉಪಾಧ್ಯಕ್ಷನನ್ನಾಗಿ ನೇಮಕ ಮಾಡಲಾಗಿತ್ತು. ಕೆಲ ತಿಂಗಳ ಹಿಂದೆ ಬಿಜೆಪಿ ತೊರೆದು ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ನೇತೃತ್ವದ ಜನಜಾಗೃತಿ ಹೋರಾಟ ವೇದಿಕೆ ಸೇರಿದ್ದ. ಬಸವರಾಜ ಕೊರವರ ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ. ಬಿಜೆಪಿ ಟಿಕೆಟ್ ಸಿಗದಿರುವ ಹಿನ್ನೆಲೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರನಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಕೊಲೆ ಆರೋಪಿ ರಾಘವೇಂದ್ರ, ಬಸವರಾಜ ಕೊರವರ ನೇತೃತ್ವದ ಸಾಮಾಜಿಕ ಹೋರಾಟಗಳು ಮತ್ತು ಪ್ರಚಾರದಲ್ಲಿ ನಿರತನಾಗಿದ್ದ.

    ಇದನ್ನೂ ಓದಿ: ಕಂಠಪೂರ್ತಿ ಕುಡಿದ ದಂಪತಿ; ಬಾವಿಗೆ ಹಾರಿದ ಪತ್ನಿಯನ್ನು ರಕ್ಷಿಸಿ ಬಳಿಕ ಹತ್ಯೆಗೈದ ಪತಿ!

    ಕೋಟೂರು ಗ್ರಾಮದಲ್ಲಿ ಮಂಗಳವಾರ ನಡೆದ ಉಡಚಮ್ಮ ದೇವಿ ಜಾತ್ರೆಯಲ್ಲಿ ಪ್ರವೀಣ ಕಮ್ಮಾರ ಮತ್ತು ರಾಘವೇಂದ್ರ ಪಟಾತ ಮಧ್ಯೆ ಜಗಳ ನಡೆದಿತ್ತು. ಜಗಳ ಬಿಡಿಸಿದ್ದ ಪ್ರವೀಣನ ಮೇಲೆ ರಾಘವೇಂದ್ರ ಮತ್ತು ಇತರರ ಗುಂಪು ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಾಫಿ ಬೀಜಗಳಲ್ಲಿ ಅಡಗಿರುವ ವ್ಯಕ್ತಿಯ ಮುಖವನ್ನು 8 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts