More

    ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿ ಪ್ರವೇಶಕ್ಕೆ ಅನುಮತಿ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್​​!

    ಬೆಂಗಳೂರು: ಕೆಆರ್‌ಪಿಪಿ ಪಕ್ಷ ಸ್ಥಾಪಿಸಿ ರಾಜ್ಯ ವಿಧಾನಸಭೆ ಚುನಾವಣೆ ಅಖಾಡಕ್ಕೆ ಇಳಿದಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ. ಪತ್ನಿ ಅರುಣಾ ಪರ ಪ್ರಚಾರ ಮಾಡುವ ಲೆಕ್ಕಚಾರದಲ್ಲಿದ್ದ ರೆಡ್ಡಿಗೆ ಸುಪ್ರೀಂಕೋರ್ಟ್ ಬಳ್ಳಾರಿಗೆ ಪ್ರವೇಶವನ್ನು ನಿರಾಕರಿಸಿದೆ.

    ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಾಮೀನು ಷರತ್ತು ಸಡಿಲಿಸುವಂತೆ ಕೋರಿ ಗಾಲಿ ಜನಾರ್ದನರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ. ಜಾಮೀನು ಷರತ್ತುಗಳನ್ನು ಸಡಿಲಿಸುವಂತೆ ಕೋರಿ  ಜನಾರ್ದನ ರೆಡ್ಡಿ ಸಲ್ಲಿಸಿದ್ದ ಹೊಸ ಅರ್ಜಿಯನ್ನು ಪುರಸ್ಕರಿಸಲು ನ್ಯಾಯಮೂರ್ತಿಗಳಾದ ಎಂಆರ್ ಶಾ ಮತ್ತು ಸಿಟಿ ರವಿಕುಮಾರ್ ಅವರ ಪೀಠ ನಿರಾಕರಿಸಿದೆ.

    ಸುಪ್ರೀಂಕೋರ್ಟ್ ನಿರ್ಧಾರದಿಂದ ಜನಾರ್ದನ ರೆಡ್ಡಿಗೆ ಬಳ್ಳಾರಿ ಜಿಲ್ಲೆಯಲ್ಲಿ ಪತ್ನಿ ಅರುಣಾ ಸೇರಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡದಂತಹ ಪರಿಸ್ಥಿತಿಯಲ್ಲಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲೆ ಪ್ರವೇಶಿಸದಂತೆ ಈ ಹಿಂದೆ ಷರತ್ತು ವಿಧಿಸಿ ಜಾಮೀನು ನೀಡಿತ್ತು.

    ಇದನ್ನೂ ಓದಿ:  ಕಾಫಿ ಬೀಜಗಳಲ್ಲಿ ಅಡಗಿರುವ ವ್ಯಕ್ತಿಯ ಮುಖವನ್ನು 8 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ..?

    2015, ಜನವರಿ 20ರ ಜಾಮೀನು ಆದೇಶವನ್ನು ಮಾರ್ಪಡಿಸಿದ್ದ ನ್ಯಾಯಾಲಯ, ಕರ್ನಾಟಕದ ಮಾಜಿ ಸಚಿವ, ಗಣಿ ಉದ್ಯಮಿ ಮತ್ತು ಕೋಟ್ಯಾಂತರ ರೂಪಾಯಿಯ ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ ಗಾಲಿ ಜನಾರ್ದನ ರೆಡ್ಡಿಗೆ ಕರ್ನಾಟಕದ ಬಳ್ಳಾರಿ ಜಿಲ್ಲೆ ಮತ್ತು ಆಂಧ್ರಪ್ರದೇಶದ ಕಡಪ ಮತ್ತು ಅನಂತಪುರಂಗಳಿಗೆ ಭೇಟಿ ನೀಡಲು ಮತ್ತು ಉಳಿದುಕೊಳ್ಳಲು ಅವಕಾಶ ನೀಡಿತ್ತು. ಪ್ರಕರಣದ ವಿಚಾರಣೆ ಮುಗಿಯುವವರೆಗೆ ಅವರು ಬಳ್ಳಾರಿಯಲ್ಲಿ ಉಳಿಯುವಂತಿಲ್ಲ ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು.

    ಇದನ್ನೂ ಓದಿ:  ಕಂಠಪೂರ್ತಿ ಕುಡಿದ ದಂಪತಿ; ಬಾವಿಗೆ ಹಾರಿದ ಪತ್ನಿಯನ್ನು ರಕ್ಷಿಸಿ ಬಳಿಕ ಹತ್ಯೆಗೈದ ಪತಿ!
    ಅಲ್ಲದೆ, 2022ರ ನವೆಂಬರ್ 9ರಿಂದ ದೈನಂದಿನ ಆಧಾರದ ಮೇಲೆ ವಿಚಾರಣೆಯನ್ನು ನಡೆಸುವಂತೆ ಮತ್ತು 2022ರ ನವೆಂಬರ್ 9ರಿಂದ ಆರು ತಿಂಗಳ ಅವಧಿಯಲ್ಲಿ ತಪ್ಪದೆ ವಿಚಾರಣೆಯನ್ನು ಮುಕ್ತಾಯಗೊಳಿಸುವಂತೆ ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ರೆಡ್ಡಿ ಅವರನ್ನು ಸೆಪ್ಟೆಂಬರ್ 2011ರಲ್ಲಿ ಬಂಧಿಸಲಾಯಿತು ಮತ್ತು ಜನವರಿ 2015 ರಲ್ಲಿ ಜಾಮೀನು ನೀಡಲಾಯಿತು. ಜಾಮೀನು ನೀಡುವಾಗ ಸುಪ್ರೀಂ ಕೋರ್ಟ್ ಈ ಜಿಲ್ಲೆಗಳಿಗೆ ಭೇಟಿ ನೀಡದಂತೆ ಷರತ್ತು ವಿಧಿಸಿತ್ತು. ಬಳಿಕ ತಮಗೆ ವಿಧಿಸಿರುವ ಜಾಮೀನು ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಮೊಮ್ಮಗುವಿನ ಜನನ ಹಿನ್ನೆಲೆಯಲ್ಲಿ ಬಳ್ಳಾರಿಗೆ ಹೋಗಲು ಅವಕಾಶ ನೀಡಲಾಗಿತ್ತು. ಈ ಬಾರಿ ಅವಕಾಶ ನೀಡದ ಸುಪ್ರೀಂಕೋರ್ಟ್ ಚುನಾವಣೆ ಸಂದರ್ಭದಲ್ಲಿ ಗಾಲಿ ರೆಡ್ಡಿಗೆ ಹಿನ್ನಡೆಯಾಗಿದೆ.

    ಕಂಠಪೂರ್ತಿ ಕುಡಿದ ದಂಪತಿ; ಬಾವಿಗೆ ಹಾರಿದ ಪತ್ನಿಯನ್ನು ರಕ್ಷಿಸಿ ಬಳಿಕ ಹತ್ಯೆಗೈದ ಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts