More

    ಬೆನ್ನುಮೂಳೆಗೆ ಬಲ ತುಂಬಲು ‘ಕಟಿಚಕ್ರಾಸನ’ ಮಾಡಿ!

    ಬೆನ್ನು ಮೂಳೆಯು ಬಲಗೊಳ್ಳುವ ಆಸನವೇ ಕಟಿಚಕ್ರಾಸನ. ಕಟಿ ಎಂದರೆ ಸೊಂಟ, ಚಕ್ರ ಎಂದರೆ ಉರುಟು ಅಥವಾ ತಿರುಗಿಸುವುದು. ಈ ಆಸನದಲ್ಲಿ ಸೊಂಟವನ್ನು ತಿರುಗಿಸಲಾಗುತ್ತದೆ. ಇದರಿಂದ ಸೊಂಟದ ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ಬೆನ್ನುಹುರಿಯ ನರಗಳಿಗೆ ಚೈತನ್ಯ ದೊರಕುತ್ತದೆ.

    ಉಪಯೋಗಗಳು : ಬೆನ್ನು ಮೂಳೆಯು ಬಲಗೊಳ್ಳುತ್ತದೆ. ಸೊಂಟಕ್ಕೆ ಉತ್ತಮ ತಿರುಚುವಿಕೆಯ ವ್ಯಾಯಾಮ ದೊರೆಯುತ್ತದೆ. ಸೊಂಟ ನೋವು, ಬೆನ್ನು ನೋವು ನಿಯಂತ್ರಣ; ಕುತ್ತಿಗೆ, ಹೆಗಲುಗಳು ಬಲಗೊಳ್ಳುತ್ತವೆ. ಈ ಆಸನದಿಂದ ಕರುಳಿನ ರೋಗ ನಿಯಂತ್ರಣವಾಗುತ್ತದೆ; ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ. ಆಸ್ತಮಾ ನಿವಾರಣೆ ಮತ್ತು ಮಧುಮೇಹ ನಿಯಂತ್ರಣವಾಗುತ್ತದೆ.

    ಇದನ್ನೂ ಓದಿ: ಮುಟ್ಟಿನ ದೋಷ ಮತ್ತು ಹೊಟ್ಟೆಯ ಬೊಜ್ಜಿಗೆ ಇದು ರಾಮಬಾಣ!

    ಅಭ್ಯಾಸ ಕ್ರಮ : ಮ್ಯಾಟ್ ಮೇಲೆ ನಿಂತು ಕಾಲುಗಳನ್ನು ವಿಸ್ತರಿಸಬೇಕು. ಬಲಗೈಯನ್ನು ನಿಧಾನವಾಗಿ ಸೊಂಟದ ಸುತ್ತ ಬಳಸಿ, ಎಡಗೈಯನ್ನು ಬಲಭುಜದ ಮೇಲೆ ಇಡುವುದು. ಉಸಿರನ್ನು ಬಿಡುತ್ತಾ ನಿಧಾನವಾಗಿ ದೇಹವನ್ನು ಎಡಬದಿಗೆ ತಿರುಗಿಸುವುದು. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಹಜ ಉಸಿರಾಟ. ನಂತರ ಉಸಿರನ್ನು ಬಿಡುತ್ತಾ ಸಹಜ ಸ್ಥಿತಿಗೆ ಬರುವುದು. ಇದೇ ರೀತಿ, ಮತ್ತೊಂದು ಪಾರ್ಶ್ವಕ್ಕೆ ಮಾಡುವುದು. ನಂತರ ವಿಶ್ರಾಂತಿ.

    ಅತಿಯಾದ ಸೊಂಟ ನೋವು, ಬೆನ್ನು ನೋವು ಇರುವವರು ಕಟಿಚಕ್ರಾಸನ ಮಾಡುವುದು ಸೂಕ್ತವಲ್ಲ.

    ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಕಂಚು; ಸೋತರೂ ಗೆದ್ದ ಲವ್ಲೀನಾ!

    ‘ಸತ್ಯಮೇವ ಜಯತೇ’! ಪತಿಯ ಬಂಧನದ ನಂತರ ಅಧಿಕೃತ ಹೇಳಿಕೆ ನೀಡಿದ ಶಿಲ್ಪಾ ಶೆಟ್ಟಿ – ಏನೆಂದರು?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts