More

    ಅಷ್ಟಾಂಗ ಯೋಗದಿಂದ ಆರೋಗ್ಯಪೂರ್ಣ ಜೀವನ

    ಮಹಾಲಿಂಗಪುರ: ಮನುಷ್ಯನ ಆರೋಗ್ಯಪೂರ್ಣ ಜೀವನಕ್ಕೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪತ್ಯಾಹಾರ, ಧಾರಣ, ಜ್ಞಾನ, ಸಮಾಧಿ ಸೇರಿ ಅಷ್ಟಾಂಗಯೋಗವನ್ನು ಕಲಿತು, ನಿತ್ಯ ಜೀವನದಲ್ಲಿ ಯೋಗಾಭ್ಯಾಸ ಅಳವಡಿಸಿಕೊಳ್ಳಬೇಕೆಂದು ಹೊನ್ನಾವರದ ಪಾರಂಪರಿಕ ವೈದ್ಯ ಪ್ರಕಾಶ ಪಿ. ರಾಯಸ್ ಹೇಳಿದರು.

    ಪಟ್ಟಣದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಹುರಕಡ್ಲಿ ೌಂಡೇಷನ್ ಹಾಗೂ ಸಿದ್ಧಾರೂಢ ಆಶ್ರಮದಲ್ಲಿ ನಡೆಯುತ್ತಿರುವ ಆರೋಗ್ಯ ಮತ್ತು ಅರಿವು ಹಾಗೂ ನಿಸರ್ಗ ಚಿಕಿತ್ಸಾ ಶಿಬಿರದಲ್ಲಿ ಕಡಿಮೆ ವೆಚ್ಚದಲ್ಲಿ ಕ್ಯಾನ್ಸರ್ ಹಾಗೂ ಮೊಣಕಾಲು, ಕೀಲು ನೋವು, ನರದೌರ್ಬಲ್ಯ, ಬಾಡಿ ಬ್ಯಾಲೆನ್ಸ್ ರೋಗಗಳಿಗೆ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆ ನೀಡಿ ಅವರು ಮಾತನಾಡಿದರು.

    ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯ ಆಹಾರ, ಬದುಕು ರೀತಿಗಳ ನಿಯಮಗಳಿಲ್ಲದೆ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾನೆ. ರೋಗ ಮತ್ತು ಒತ್ತಡಗಳಿಲ್ಲದೆ ನೆಮ್ಮದಿ ಜೀವನಕ್ಕೆ ಯೋಗ ಹಾಗೂ ನಿಯಮಬದ್ಧ ಜೀವನ ಪದ್ಧತಿ ಅಗತ್ಯವಾಗಿದೆ. ಆರೋಗ್ಯ ಸುಧಾರಣೆಗೆ ಶುದ್ಧ ಆಮ್ಲಜನಕ, ಶುದ್ಧ ಆಹಾರ, ನೀರು ಮತ್ತು ನಿಯಮಗಳ ಅರಿವು ಮುಖ್ಯವಾಗಿದೆ. ನಿತ್ಯ ಕನಿಷ್ಠ 4 ಲೀಟರ್‌ಗಿಂತ ಅಧಿಕ ನೀರು, ಸರಿಯಾದ ನಿದ್ದೆ, ಯೋಗ, ಧ್ಯಾನದ ಮೂಲಕ ಮಾನಸಿಕ ನೆಮ್ಮದಿಯಿಂದ ಔಷಧ ರಹಿತ ಜೀವನ ನಡೆಸಲು ಪ್ರಯತ್ನಿಸಬೇಕು ಎಂದರು.

    ಶಿಬಿರದಲ್ಲಿ ನಿತ್ಯ ಬೆಳಗ್ಗೆ 5-30 ರಿಂದ 7ಗಂಟೆವರೆಗೆ ಬೆಂಗಳೂರಿನ ಮಹಾಂತೇಶ ಹಿರೇಮಠ ಅವರಿಂದ ಯೋಗಾಭ್ಯಾಸ ನಡೆಯುತ್ತಿದ್ದು, ಶನಿವಾರ ಬೆಳಗ್ಗೆ ಬೆಳಗಾವಿಯ ಯೋಗ ಶಿಕ್ಷಕಿ ಕು.ಅದಿತಿ ಅವರಿಂದ ವಿಶೇಷ ಯೋಗಾಭ್ಯಾಸ ನಡೆಯಿತು.

    ಹುರಕಡ್ಲಿ ಫೌಂಡೇಷನ್ ಸಂಸ್ಥಾಪಕ ಚನ್ನಬಸು ಹುರಕಡ್ಲಿ, ಧಾರವಾಡದ ಬಸವಾನಂದ ಸ್ವಾಮೀಜಿ, ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ, ಸಿದ್ದಾನಂದ ಭಾರತಿ ಸ್ವಾಮೀಜಿ, ರನ್ನಬೆಳಗಲಿಯ ಯೋಗಗುರು ಸದಾಶಿವ ಗುರೂಜಿ, ಮಲ್ಲೇಶಪ್ಪ ಕಟಗಿ, ಯಲ್ಲನಗೌಡ ಪಾಟೀಲ, ಹಣಮಂತ ಶಿರೋಳ, ಮಹೇಶ ಇಟಕನ್ನವರ, ಚಂದ್ರಶೇಖರ ಮೋರೆ, ಸಿದ್ದರಾಮಯ್ಯ ಗೋಠೆ, ಹಣಮಂತ ಮೀರಾಪಟ್ಟಿ, ಮಲ್ಲಾರಡ್ಡಿ ಯಾದವಾಡ, ಸಿದ್ದು ಧಡೂತಿ, ರಮೇಶ ಲಾತೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts