More

    ಎಸ್​ಪಿಬಿ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಮೋಕ್ಷ ದೀಪ ಬೆಳಗಿದ ಇಳಯರಾಜ …

    ಚೆನ್ನೈ: ದಿಗ್ಗಜ ಸಂಗೀತ ನಿರ್ದೇಶಕ ಇಳಯರಾಜ ಅವರು ತಮ್ಮ ಬಹುವರ್ಷಗಳ ಒಡನಾಡಿ ಡಾ.ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನದಿಂದ ಸಾಕಷ್ಟು ನೊಂದಿದ್ದಾರೆ. ಅಷ್ಟೇ ಅಲ್ಲ, ಅವರ ಸಾವಿನ ನೋವು ತಡೆಯುವುದಕ್ಕ ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಅಭಿಮಾನಿಯ ಚಪ್ಪಲಿ ಎತ್ತಿಕೊಟ್ಟ ವಿಜಯ್​ಗೆ ಭಾರೀ ಮೆಚ್ಚುಗೆ …

    ಈ ಮಧ್ಯೆ, ಅವರು ಚೆನ್ನೈನಿಂದು 190 ಕಿಲೋಮೀಟರ್​ ದೂರದಲ್ಲಿರುವ ತಿರುವಣ್ಣಾಮಲೈಗೆ ಹೋಗಿ ಅಲ್ಲಿನ ಅರುಣಾಚಲೇಶ್ವರ ದೇವಸ್ಥಾನಕ್ಕೆ ಹೋಗಿ, ಎಸ್​ಪಿಬಿ ಅವರ ನೆನಪಲ್ಲಿ ಮೋಕ್ಷ ದೀಪವನ್ನು ಹಚ್ಚಿ ವಾಪಸ್ಸಾಗಿದ್ದಾರೆ.

    ಹಿಂದೂ ಸಂಪ್ರದಾಯಗಳ ಪ್ರಕಾರ, ಮೋಕ್ಷ ದೀಪ ಹಚ್ಚಿದರೆ ಆಗ ಮೃತರ ಆತ್ಮಕ್ಕೆ ಸದ್ಗತಿ ಸಿಗಲಿದೆ ಎಂಬ ನಂಬಿಕೆ ಇದೆ. ಅದೇ ಕಾರಣಕ್ಕೆ, ಇಳಯರಾಜ ಅವರು ಶನಿವಾರ ಬೆಳಿಗ್ಗೆಯೇ, ದೇವಸ್ಥಾನಕ್ಕೆ ಹೋಗಿ ಮೋಕ್ಷ ದೀಪವನ್ನು ಹಚ್ಚಿ ಬಂದಿದ್ದಾರೆ. ದೇವಸ್ಥಾನದಲ್ಲಿ ಇಳಯರಾಜ ಅವರು ದೀಪ ಹಚ್ಚುತ್ತಿರುವ ಫೋಟೋಗಳು, ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

    ಬಾಲಸುಬ್ರಹ್ಮಣ್ಯಂ ಮತ್ತು ಇಳಯರಾಜ ಅವರು 50 ವರ್ಷ ಹಳೆಯ ಗೆಳೆಯರು. ಇಳಯರಾಜ ಅವರು ಸಂಗೀತ ನಿರ್ದೇಶಕರಾಗುವುದಕ್ಕಿಂತ ಮುನ್ನ, ಬಾಲಸುಬ್ರಹ್ಮಣ್ಯಂ ಅವರ ಬ್ಯಾಂಡ್​ನಲ್ಲಿ ಸಂಗೀತಗಾರರಾಗಿದ್ದರು. ತಮ್ಮ ಗೆಳೆಯನ ನಿಧನದಿಂದ ತಮಗಾಗಿರುವ ನೋವು ಅಷ್ಟಿಷ್ಟಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಬಾಯ್​​ಫ್ರೆಂಡ್ ಹುಟ್ಟುಹಬ್ಬಕ್ಕೆ 25 ಲಕ್ಷ ರೂ. ಖರ್ಚು ಮಾಡಿದ ನಯನತಾರಾ

    ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಅವರು, ‘ಎಲ್ಲಿ ಹೊರಟು ಹೋದೆ ಬಾಲು? ನಿನ್ನ ಸಾವಿನ ಬಗ್ಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ. ನನಗಂತೂ ಮಾತುಗಳೇ ಬರುತ್ತಿಲ್ಲ. ಎಲ್ಲಾ ನೋವುಗಳಿಗೂ ಒಂದು ಲಿಮಿಟ್​ ಎನ್ನುವುದು ಇರುತ್ತದೆ. ಆದರೆ, ನಿನ್ನ ಅಗಲಿಕೆಯ ನೋವನ್ನು ತಡೆಯುವುದಕ್ಕೆ ಆಗುತ್ತಿಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ.

    ಬಿಲ್​ ಪಾವತಿಸದೆ ಎಸ್​ಪಿಬಿ ಅವರ ಪಾರ್ಥೀವ ಶರೀರ ಕೊಡಲ್ಲ ಎಂದರೇ ಆಸ್ಪತ್ರೆಯವರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts