More

    ಹೊಡೆಯುವುದಾದ್ರೆ ಹೊಡೆಯಿರಿ, ಕಡ್ಡಾಯವಾಗಿ ಬಿಲ್ ಕಟ್ಟಿಸಿಕೊಳ್ಳಿ ಅಂದಿದ್ದಾರೆ; ‘ಗ್ಯಾರಂಟಿ’ ತಂದಿಟ್ಟ ಫಜೀತಿ

    ಬೆಳಗಾವಿ: ಚುನಾವಣಾಪೂರ್ವದಲ್ಲಿ ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಪ್ರತಿ ಮನೆಗೂ 200 ಯುನಿಟ್​ ಉಚಿತ ವಿದ್ಯುತ್ ವಿಚಾರ ಇದೀಗ ವಿದ್ಯುಚ್ಛಕ್ತಿಗೆ ಸಂಬಂಧಿತ ಸಿಬ್ಬಂದಿಗೆ ಫಜೀತಿ ತಂದಿಟ್ಟಿದೆ. ಬಿಲ್ ನೀಡಲು ಹೋದಲ್ಲೆಲ್ಲ ಜನರು ಬಿಲ್ ಕಟ್ಟಲ್ಲ, ಬಿಲ್ ಕೊಡಬೇಡಿ ಎಂದು ವಾಪಸ್ ಕಳಿಸುತ್ತಿದ್ದಾರೆ. ಕೆಲವು ಕಡೆ ಒತ್ತಾಯವಾಗಿ ಬಿಲ್ ನೀಡಿದರೆ ಜಗಳಕ್ಕೆ ಬರುತ್ತಿರುವುದು ಕೂಡ ನಡೆಯುತ್ತಿದೆ.

    ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗೋಸೆನಟ್ಟಿ ಗ್ರಾಮದಲ್ಲಿ ವಿದ್ಯುತ್ ಬಿಲ್ ಕಟ್ಟುವುದಿಲ್ಲ ಅಂತ ಹೆಸ್ಕಾಂ ಸಿಬ್ಬಂದಿ ಜತೆಗೆ ಜನರು ವಾಗ್ವಾದಕ್ಕಿಳಿದ ಪ್ರಕರಣ ನಡೆದಿದೆ. ಸರ್ಕಾರವೇ ವಿದ್ಯುತ್ ಬಿಲ್ ಕಟ್ಟಬೇಡಿ ಅಂತ ಹೇಳಿದೆ, ನಾವು ಕಟ್ಟುವುದಿಲ್ಲ ಎಂದು ಬಿಲ್ ನೀಡದಂತೆ ಸಿಬ್ಬಂದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ದಂಪತಿ ಮಧ್ಯೆ ಪ್ರೀತಿ ಇದ್ದರೂ ದಾಂಪತ್ಯ ದ್ರೋಹ; ವಿವಾಹೇತರ ಸಂಬಂಧದ ಬಗ್ಗೆ ಇಲ್ಲ ಪಶ್ಚಾತ್ತಾಪ: ಏನಿದು ಅಧ್ಯಯನ?

    ಈ ತಿಂಗಳ ಬಿಲ್ ಕಟ್ಟಿ, ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕಟ್ ಮಾಡುವುದಾಗಿ ಹೆಸ್ಕಾಂ ಸಿಬ್ಬಂದಿ ಹೇಳಿದ್ದಾರೆ. ಮಾತ್ರವಲ್ಲ, ನಮ್ಮನ್ನ ಹೊಡೆಯುವುದಾದರೆ ಹೊಡೆಯಿರಿ, ಈ ತಿಂಗಳು ಕಡ್ಡಾಯವಾಗಿ ಬಿಲ್ ಕಟ್ಟಿಸಿಕೊಳ್ಳಿ ಅಂತ ಹೇಳಿದ್ದಾರೆ‌ ಎಂದೂ ಸಿಬ್ಬಂದಿ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಅದಾಗ್ಯೂ ಸಾರ್ವಜನಿಕರು ನಮಗೆ ಸರ್ಕಾರವೇ ಹೇಳಿದೆ, ಬಿಲ್ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದರು.

    ಬಸ್​​ನಲ್ಲಿ ಪತ್ನಿಗೆ ಟಿಕೆಟ್ ಪಡೆಯಲು ಒಪ್ಪದ ಪತಿ; ಉಚಿತ ಪ್ರಯಾಣ ಗ್ಯಾರಂಟಿ ಸೃಷ್ಟಿಸಿದ ಅಧ್ವಾನ

    ನಿಮ್ಮ ದಾಖಲೆ ಬಳಸಿ ಬೇರೆಯವರು ಸಿಮ್ ಖರೀದಿಸಿದ್ದರೆ ತಿಳಿಯುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts