More

    ಖಾರವಾದ್ರೂ ಹಸಿ ಮೆಣಸಿನಕಾಯಿ ತುಂಬಾ ಆರೋಗ್ಯಕರ: 15 ದಿನದಲ್ಲಿ ದೇಹದಲ್ಲಾಗುತ್ತೆ ಈ ಚಮತ್ಕಾರ!

    ಭಾರತೀಯರು ಮಸಾಲೆಯುಕ್ತ ಆಹಾರವನ್ನು ತಿನ್ನಲು ತುಂಬಾ ಇಷ್ಟಪಡುತ್ತಾರೆ. ಹೀಗಾಗಿಯೇ ಭಾರತೀಯ ಆಹಾರ ಪದ್ಧತಿಯಲ್ಲಿ ಹಸಿ ಮೆಣಸಿನಕಾಯಿಯನ್ನು ಪ್ರತಿ ಅಡುಗೆಯಲ್ಲೂ ಬಳಸಲಾಗುತ್ತದೆ. ಹಸಿ ಮೆಣಸಿನಕಾಯಿಯನ್ನು ಪ್ರತಿದಿನ ಆಹಾರದಲ್ಲಿ ಸೇವಿಸುವುದರಿಂದ ದೇಹಕ್ಕೆ ಹಲವಾರು ಲಾಭಗಳು ದೊರೆಯುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು.

    ಹಸಿ ಮೆಣಸಿನಕಾಯಿಯಲ್ಲಿರುವ ಆರೋಗ್ಯಕರ ಅಂಶಗಳು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಮೆಣಸಿನಕಾಯಿ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಅದರಲ್ಲೂ ಪದೇ ಪದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಹಸಿಮೆಣಸನ್ನು ಸೇವಿಸಲೇಬೇಕು. ಈ ಹಸಿ ಮೆಣಸಿನಕಾಯಿಯನ್ನು ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯೋಣ.

    ಹಸಿ ಮೆಣಸಿನಕಾಯಿಯಲ್ಲಿ ಏನೇನಿದೆ?
    ಹಸಿ ಮೆಣಸಿನಕಾಯಿಯು ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ಫೈಬರ್‌ಗಳು ಮತ್ತು ಲಿಪಿಡ್‌ಗಳಂತಹ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುತ್ತದೆ. ಹಸಿ ಮೆಣಸಿನಕಾಯಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಮೆಗ್ನೀಸಿಯಮ್, ಸತು ಮತ್ತು ತಾಮ್ರದಂತಹ ಖನಿಜಗಳಿವೆ. ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ನಂತಹ ಜೀವಸತ್ವಗಳು ಸಹ ಇರುತ್ತವೆ.

    * ಕೊಲೆಸ್ಟ್ರಾಲ್ ಸಮಸ್ಯೆಗೆ ಪರಿಹಾರ: ಹಸಿ ಮೆಣಸಿನಕಾಯಿಯಲ್ಲಿ ಇರುವ ಕ್ಯಾಪ್ಸೈಸಿನ್ ಅಂಶ ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ನಿಯಂತ್ರಿಸುತ್ತದೆ. ಅಲ್ಲದೆ, ರಕ್ತದಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಿಂದ ಉಂಟಾಗುವ ಅಧಿಕ ರಕ್ತದೊತ್ತಡವನ್ನು ಸಹ ಸುಲಭವಾಗಿ ನಿವಾರಿಸುತ್ತದೆ. ದೇಹದಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಬಯಸುವವರು ಪ್ರತಿದಿನ ತಮ್ಮ ಆಹಾರದಲ್ಲಿ ಹಸಿ ಮೆಣಸಿನಕಾಯಿಯನ್ನು ತಪ್ಪದೇ ಸೇವಿಸಬೇಕು. 15 ದಿನಗಳಲ್ಲೇ ಕೊಲೆಸ್ಟ್ರಾಲ್​ ಮಟ್ಟ ಕಡಿಮೆಯಾಗುತ್ತದೆ.

    * ಕ್ಯಾನ್ಸರ್​ನಿಂದ ರಕ್ಷಣೆ: ಆಧುನಿಕ ಜೀವನಶೈಲಿಯಿಂದಾಗಿ ಅನೇಕ ಜನರು ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಆದರೆ, ಸಂಶೋಧನೆಗಳ ಪ್ರಕಾರ, ಪ್ರತಿದಿನ ಹಸಿ ಮೆಣಸಿನಕಾಯಿ ಸೇವಿಸುವವರಲ್ಲಿ ಕ್ಯಾನ್ಸರ್ ಅಪಾಯವು ಶೇಕಡಾ 50 ರಷ್ಟು ಕಡಿಮೆಯಾಗುತ್ತದೆ. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಕೋಶಗಳ ಸಾವನ್ನು ಪ್ರೇರೇಪಿಸುತ್ತದೆ ಮತ್ತು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ. ಆಸ್ಟಿಯೊಸಾರ್ಕೊಮಾ, ಕೊಲೊನ್ ಮತ್ತು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಕೋಶಗಳನ್ನು ಇದು ನಾಶ ಮಾಡುತ್ತದೆ. ಆದರೆ, ಸಾಮಾನ್ಯ ಜೀವಕೋಶಗಳು ಯಾವುದೇ ರೀತಿಯಲ್ಲಿ ಹಾನಿಗೆ ಒಳಗಾಗುವುದಿಲ್ಲ ಎನ್ನುತ್ತಾರೆ ವೈದ್ಯಕೀಯ ತಜ್ಞರು.

    * ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರ: ಅನೇಕ ಜನರು ಆಗಾಗ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇದರಿಂದಾಗಿ ಕೆಲವರು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆದರೆ, ಅಂತಹವರಿಗೆ ಹಸಿ ಮೆಣಸಿಕಾಯಿ ತುಂಬಾ ಪರಿಣಾಮಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು. ಮೆಣಸಿನಕಾಯಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್​ಗಳು ಎಲ್ಲಾ ರೀತಿಯ ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರವನ್ನು ನೀಡುತ್ತದೆ.

    * ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಚಳಿಗಾಲದಲ್ಲಿ ಜನರು ಹೆಚ್ಚಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಅಂತಹವರು ಪ್ರತಿದಿನ ಹಸಿರು ಮೆಣಸಿನಕಾಯಿಯನ್ನು ಆಹಾರದಲ್ಲಿ ತೆಗೆದುಕೊಳ್ಳಬೇಕು. ಇದರ ಗುಣಲಕ್ಷಣಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಮತ್ತು ದೇಹವನ್ನು ಸೋಂಕುಗಳಿಂದ ಮುಕ್ತಗೊಳಿಸುತ್ತದೆ.

    ಇದಿಷ್ಟೇ ಅಲ್ಲದೆ, ನಿಮ್ಮ ಆಹಾರದಲ್ಲಿ ಹಸಿರು ಮೆಣಸಿನಕಾಯಿಯನ್ನು ಸೇರಿಸಿದರೆ ಚರ್ಮ, ಕಣ್ಣುಗಳು, ಹೃದಯ, ಶ್ವಾಸಕೋಶಗಳು, ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ಮೂಳೆಗಳು ಸೇರಿದಂತೆ ಅನೇಕ ಆರೋಗ್ಯಕರ ಲಾಭಗಳನ್ನು ಪಡೆಯಬಹುದು. (ಏಜೆನ್ಸೀಸ್​)

    ನಿಯಮಿತವಾಗಿ ಹಸಿ ಬೆಳ್ಳುಳ್ಳಿ ಸೇವನೆ ಮಾಡಿ ನಿಮ್ಮ ದೇಹದಲ್ಲಾಗುವ ಚಮತ್ಕಾರ ನೋಡಿ…

    ಬೆಳಗ್ಗೆ ಎದ್ದ ತಕ್ಷಣ ಧೂಮಪಾನ ಮಾಡ್ತೀರಾ? ಹಾಗಾದರೆ ಈ ಕಾಯಿಲೆ ಬರಬಹುದು ಎಚ್ಚರ!

    ನೇಹಾ ಕನ್ನಡ ವ್ಯಾಮೋಹ ; ಕನ್ನಡದಲ್ಲಿ ಮತ್ತೆ ನಟಿಸಲು ಕಾಯುತ್ತಿದ್ದೇನೆ ಎಂದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts