ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಸಿಗರೇಟ್ ಇಲ್ಲದೇ ಒಂದು ದಿನವೂ ಇರದ ಅನೇಕ ಜನರು ನಮ್ಮ ನಡುವೆ ಇದ್ದಾರೆ. ದಿನಕ್ಕೆ ಒಂದು ಸಿಗರೇಟ್ ಪ್ಯಾಕ್ ಸೇದುವವರೂ ಇದ್ದಾರೆ. ಈ ಸಿಗರೇಟಿನ ಚಟಕ್ಕೆ ಬಿದ್ದು ನಿತ್ಯವೂ ಆರೋಗ್ಯವನ್ನು ಸುಡುವವರ ಸಂಖ್ಯೆಯೇ ಹೆಚ್ಚು.
ಅಂದಹಾಗೆ ಕೆಲವರಿಗೆ ಮುಂಜಾನೆಯೇ ಸಿಗರೇಟ್ ಸೇದುವ ಅಭ್ಯಾಸವಿರುತ್ತದೆ. ಇದೊಂದು ಕೆಟ್ಟ ಹವ್ಯಾಸ. ಇದು ಎಷ್ಟು ಅಪಾಯಕಾರಿ ಎಂದರೆ, ಮುಂಜಾನೆ ಧೂಮಪಾನ ಮಾಡುವವರಿಗೆ ಬಾಯಿ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಇತರರಿಗಿಂತ ಹೆಚ್ಚು ಎಂಬುದನ್ನು ಸಂಶೋಧಕರು ಅಧ್ಯಯನದ ಮೂಲಕ ಕಂಡುಹಿಡಿದಿದ್ದಾರೆ.
ಮುಂಜಾನೆ ಸಿಗರೇಟ್ ಸೇದುವ ಅಭ್ಯಾಸವೂ ಒಂದು ಗಂಭೀರ ವ್ಯಸನದ ಸಂಕೇತವೆಂದು ಪರಿಗಣಿಸಬೇಕು. ಎದ್ದ ತಕ್ಷಣ ತಮ್ಮ ನಿತ್ಯಕರ್ಮಗಳನ್ನು ಮುಗಿಸಿ ತಿಂಡಿ ತಿಂದು ಆಫೀಸ್ ಕೆಲಸ ಶುರು ಮಾಡ್ತಾರೆ. ಕೆಲವರು ಆಫೀಸ್ ಕೆಲಸದಲ್ಲಿ ಒತ್ತಡ ಬಂದಾಗ ಬಿಡುವು ಮಾಡಿಕೊಂಡು ಧೂಮಪಾನ ಮಾಡುತ್ತಾರೆ. ಆದರೆ ಕೆಲವು ವ್ಯಸನಿಗಳು ಬೆಳಗ್ಗೆ ಎದ್ದ ತಕ್ಷಣ ಧೂಮಪಾನ ಮಾಡಲು ಪ್ರಾರಂಭಿಸುತ್ತಾರೆ. ಇದನ್ನು ಮಾಡುವುದರಿಂದ, ಅವರು ಭವಿಷ್ಯದಲ್ಲಿ ಬಾಯಿ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕ್ಯಾನ್ಸರ್ಗೆ ಗುರಿಯಾಗಬಹುದು.
ಬೆಳಗ್ಗೆ ಧೂಮಪಾನ ಏಕೆ ಮಾಡಬಾರದು?
ಎದ್ದ ತಕ್ಷಣ ಸಿಗರೇಟ್ ಸೇದುವುದರಿಂದ ರಕ್ತದಲ್ಲಿ ರಾಸಾಯನಿಕಗಳ ಪ್ರಮಾಣ ಹೆಚ್ಚುತ್ತದೆ. ಅವು ಕಾರ್ಸಿನೋಜೆನಿಕ್ ಗುಣಲಕ್ಷಣಗಳನ್ನು ಹೊಂದಿವೆ. ಧೂಮಪಾನಿಗಳಲ್ಲಿ ರಾತ್ರಿಯ ನಿದ್ರೆಯ ನಂತರ ರಕ್ತದಲ್ಲಿನ ನಿಕೋಟಿನ್ ಮಟ್ಟವು ಕಡಿಮೆಯಾಗುತ್ತದೆ. ಅವರು ಬೆಳಿಗ್ಗೆ ಎದ್ದಾಗ, ಧೂಮಪಾನ ಮಾಡುವ ಬಯಕೆ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಅನೇಕ ಜನರು ಬೆಳಿಗ್ಗೆ ಎದ್ದ ಅರ್ಧ ಗಂಟೆ ಅಥವಾ ಒಂದು ಗಂಟೆಯೊಳಗೆ ಧೂಮಪಾನ ಮಾಡುತ್ತಾರೆ. ಈ ಅಭ್ಯಾಸವು ಮಾರಣಾಂತಿಕ ಪರಿಸ್ಥಿತಿಗಳಿಗೆ ಕಾರಣವಾಗಬಹುದು.
ಅಭ್ಯಾಸ ಬಿಡುವುದು ಹೇಗೆ?
ಈ ಕೆಟ್ಟ ಅಭ್ಯಾಸವನ್ನು ತೊಡೆದುಹಾಕಲು, ನಿಮ್ಮ ಕೋಣೆ ಅಥವಾ ಮನೆ ಸಿಗರೇಟ್ ಮುಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಬಳಿ ಯಾವುದೇ ತಂಬಾಕು ಉತ್ಪನ್ನಗಳು ಲಭ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮನ್ನು ನೀವು ಬೇರೆ ಕೆಲಸದಲ್ಲಿ ಬಿಜಿಯಾಗಿ ಇರಿಸಿಕೊಳ್ಳಲು ಪ್ರಯತ್ನಿಸಿ. ನೀವು ಬೆಳಿಗ್ಗೆ ಧೂಮಪಾನವನ್ನು ನಿಲ್ಲಿಸಲು ಸಾಧ್ಯವಾಗದಿದ್ದರೆ ನಿಕೋಟಿನ್ ಚೂಯಿಂಗ್ ಗಮ್ಗಳು ಲಭ್ಯವಿದೆ. ಅವುಗಳನ್ನು ಅಗಿಯುವ ಮೂಲಕ ಸರಿಪಡಿಸಿ. ಬೆಳಿಗ್ಗೆ ಬೇಗ ಸಿಗರೇಟ್ ಸೇದುವುದನ್ನು ನಿಲ್ಲಿಸಿ ಮತ್ತು ಒಂದು ಲೋಟ ನೀರಿನಿಂದ ದಿನವನ್ನು ಪ್ರಾರಂಭಿಸಿ. (ಏಜೆನ್ಸೀಸ್)
ಇಸ್ರೇಲ್-ಹಮಾಸ್ ಯುದ್ಧದ ನಡುವೆ ಯಮೆನ್ನ ಹೌತಿಗಳ ಎಂಟ್ರಿ: ಸಂಘರ್ಷ ವ್ಯಾಪ್ತಿ ವಿಸ್ತರಣೆಯಾಗುವ ಆತಂಕ
ಕನ್ನಡ, ಕನ್ನಡಿಗ, ಕರ್ನಾಟಕ ಸುವರ್ಣ ಪಥ: ರಾಜ್ಯೋತ್ಸವ ಪ್ರಯುಕ್ತ ವಿಜಯವಾಣಿ ಸಂವಾದ
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪತ್ರಿಕಾ ವಿತರಕರಿಗೆ ರಾಜ್ಯೋತ್ಸವ ಪ್ರಶಸ್ತಿ: ಮೈಸೂರಿನ ಜವರಪ್ಪ ಭಾಜನ