More

    ಇಸ್ರೇಲ್​-ಹಮಾಸ್​ ಯುದ್ಧದ ನಡುವೆ ಯಮೆನ್​ನ ಹೌತಿಗಳ ಎಂಟ್ರಿ: ಸಂಘರ್ಷ ವ್ಯಾಪ್ತಿ ವಿಸ್ತರಣೆಯಾಗುವ ಆತಂಕ

    ಜೆರುಸಲೇಂ: ಯಮೆನ್​ನ ಹೌತಿಗಳು ಇಸ್ರೇಲ್​ ಮತ್ತು ಹಮಾಸ್​ ಯುದ್ಧದ ನಡುವೆ ಮಧ್ಯಪ್ರವೇಶ ಮಾಡಿದ್ದು, ತಮ್ಮ ನೆಲೆಯಾದ ಯಮೆನ್​ನ ರಾಜಧಾನಿ ಸನಾದಿಂದಲೇ ಇಸ್ರೇಲ್​ ಮೇಲೆ ಮಂಗಳವಾರ ಡ್ರೋನ್ಸ್​ ಮತ್ತು ಕ್ಷಿಪಣಿ ದಾಳಿ ನಡೆಸಿರುವುದಾಗಿ ಹೌತಿಗಳು ಘೋಷಣೆ ಮಾಡಿದ್ದಾರೆ. ಇದು ಸಂಘರ್ಷದ ಪ್ರಾದೇಶಿಕ ಅಪಾಯಗಳನ್ನು ಎತ್ತಿ ತೋರಿಸುತ್ತಿದೆ.

    ಹೌತಿಗಳು, ಇರಾನ್ ಬೆಂಬಲಿತ “ಆಕ್ಸಿಸ್ ಆಫ್ ರೆಸಿಸ್ಟೆನ್ಸ್” ನ ಭಾಗವಾಗಿದ್ದು, ಅಕ್ಟೋಬರ್ 7ರಂದು ಮುಂಜಾನೆ ಇಸ್ರೇಲ್ ಮೇಲೆ ಹಮಾಸ್​ ಉಗ್ರರು ರಾಕೆಟ್​ ದಾಳಿ ನಡೆಸಿದ ಬಳಿಕ ಹೌತಿಗಳು ಪ್ಯಾಲೆಸ್ತೀನಿಯರ ಜತೆ ಯುದ್ಧದಲ್ಲಿ ಕೈಜೋಡಿಸಿದ್ದಾರೆ. ಈ ಬಗ್ಗೆ ಇದೀಗ ಅಧಿಕೃತವಾಗಿ ಮಾತನಾಡಿರುವ ಹೌತಿ ಮಿಲಿಟರಿ ವಕ್ತಾರ ಯಾಹ್ಯಾ ಸಾರಿ, ದೊಡ್ಡ ಸಂಖ್ಯೆಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಇಸ್ರೇಲ್ ಕಡೆಗೆ ಉಡಾಯಿಸಿದ್ದೇವೆ ಮತ್ತು ಪ್ಯಾಲೆಸ್ತೀನಿಯರ ವಿಜಯಕ್ಕೆ ಸಹಾಯ ಮಾಡಲು ಇಂತಹ ಹೆಚ್ಚಿನ ದಾಳಿಗಳು ಬರಲಿವೆ ಎಂದು ಇಸ್ರೇಲ್​ಗೆ ಎಚ್ಚರಿಸಿದ್ದಾರೆ.

    ಹೌತಿ ಮಿಲಿಟರಿ ವಕ್ತಾರ ನೀಡಿರುವ ಹೇಳಿಯು ಯುದ್ಧದ ವ್ಯಾಪ್ತಿಯ ವಿಸ್ತರಣೆ ಹೆಚ್ಚಾಗುವುದು ಖಚಿತವಾಗಿದ್ದು, ಇದು ಹಲವು ರಾಷ್ಟ್ರಗಳ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಸೌದಿ ಅರೇಬಿಯಾಗೂ ತಲೆ ನೋವಾಗಿದೆ. ಯುದ್ಧದ ಆರಂಭದ ನಂತರ ಇಸ್ರೇಲ್‌ನ ಮೇಲೆ ಹೌತಿಗಳ ಮೂರನೇ ದಾಳಿ ಇದಾಗಿದೆ ಎಂದು ಮಿಲಿಟರಿ ವಕ್ತಾರ ಸಾರಿ ಹೇಳಿದರು. ಅಕ್ಟೋಬರ್ 28ರಂದು ಈಜಿಪ್ಟ್‌ನಲ್ಲಿ ಸ್ಫೋಟಗಳಿಗೆ ಕಾರಣವಾದ ಡ್ರೋನ್ ದಾಳಿಯ ಹಿಂದೆ ಹೌತಿಗಳ ಇರುವ ಬಗ್ಗೆ ಇಸ್ರೇಲ್​ ಮಾಡಿರುವ ಆರೋಪವನ್ನು ಮತ್ತು ಅಕ್ಟೋಬರ್ 19 ರಂದು ಅಮೆರಿಕ ನೌಕಾಪಡೆಯು ಮೂರು ಕ್ರೂಸ್ ಕ್ಷಿಪಣಿಗಳನ್ನು ತಡೆಹಿಡಿದಿದ್ದು ತಾವೇ ಎಂದು ಹೌತಿಗಳು ಒಪ್ಪಿಕೊಂಡಿದ್ದಾರೆ.

    ಇಸ್ರೇಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಟ್ಜಾಚಿ ಹನೆಗ್ಬಿ, ಹೌತಿ ದಾಳಿಗಳು ಅಸಹನೀಯ ಎಂದು ಹೇಳಿದರು, ಆದರೆ ಇಸ್ರೇಲ್ ಹೌತಿಗಳ ದಾಳಿಗೆ ಹೇಗೆ ಪ್ರತಿಕ್ರಿಯಿಸಬಹುದು ಎಂದು ಕೇಳಿದಾಗ ವಿವರಿಸಲು ಅವರು ನಿರಾಕರಿಸಿದರು.

    ಅಂದಹಾಗೆ “ಅಮೆರಿಕಕ್ಕೆ ಸಾವು, ಇಸ್ರೇಲ್‌ಗೆ ಸಾವು, ಯಹೂದಿಗಳಿಗೆ ಶಾಪ ಮತ್ತು ಇಸ್ಲಾಂಗೆ ಜಯ” ಎಂಬುದು ಹೌತಿಗಳ ಘೋಷಣೆಯಾಗಿದೆ. ಹೌತಿಗಳು “ಆಕ್ಸಿಸ್ ಆಫ್ ರೆಸಿಸ್ಟೆನ್ಸ್”ನ ಭಾಗವಾಗಿದ್ದು, ಇದು ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಅನ್ನು ತೀವ್ರವಾಗಿ ವಿರೋಧಿಸುತ್ತದೆ ಮತ್ತು ಅಕ್ಟೋಬರ್ 7 ರಿಂದ ಇಸ್ರೇಲ್​ ಪ್ರದೇಶದಾದ್ಯಂತ ದಾಳಿಗಳನ್ನು ನಡೆಸುತ್ತಿದೆ.

    ಯೆಮೆನ್ ಯುದ್ಧದ ಸಮಯದಲ್ಲಿ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಮೇಲಿನ ದಾಳಿಯಲ್ಲಿ ಹೌತಿಗಳು ತಮ್ಮ ಕ್ಷಿಪಣಿ ಮತ್ತು ಡ್ರೋನ್ ಸಾಮರ್ಥ್ಯಗಳನ್ನು ಪ್ರದರ್ಶಿಸಿದ್ದರು. ಇರಾನ್, ಹೌತಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ, ತರಬೇತಿ ಮತ್ತು ಧನಸಹಾಯ ನೀಡುತ್ತಿದೆ ಎಂದು ಸೌದಿ ನೇತೃತ್ವದ ಒಕ್ಕೂಟವು ಆರೋಪಿಸಿದೆ. ಆದರೆ, ಹೌತಿಗಳು ತಾವು ಇರಾನಿನ ಪ್ರಾಕ್ಸಿ ಎಂಬುದನ್ನು ನಿರಾಕರಿಸಿದ್ದು, ತನ್ನದೇ ಆದ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳಿದೆ. (ಏಜೆನ್ಸೀಸ್​)

    ಬ್ರ್ಯಾಂಡ್ ಕರ್ನಾಟಕಕ್ಕೆ ಕನ್ನಡಿಗರೇ ರಾಯಭಾರಿಯಾಗಲಿ

    ವಿಶ್ವಕಪ್​ ಸೆಮೀಸ್​ ರೇಸ್: ಯಾರಿಗಿದೆ ಚಾನ್ಸ್​? ಹೀಗಿದೆ ಎಲ್ಲ ತಂಡಗಳ ಲೆಕ್ಕಾಚಾರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts