More

    ಪದಕಗಳನ್ನು ಗಂಗಾ ನದಿಗೆ ಎಸೆದರೆ ನ್ಯಾಯ ಸಿಗದು, ಸಾಕ್ಷಿ ತೋರಿಸಿ: ಬ್ರಿಜ್ ಭೂಷಣ್ ಸಿಂಗ್

    ನವದೆಹಲಿ: ಡಬ್ಯೂಎಫ್​ಐ ಮುಖ್ಯಸ್ಥ(WFI Chief), ಬಿಜೆಪಿ ಸಂಸದ(Bjp MP) ಬ್ರಿಜ್ ಭೂಷಣ್ ಸಿಂಗ್ ತಮ್ಮ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪವನ್ನು ತಳ್ಳಿಹಾಕಿದ್ದಾರೆ.

    ಮಹಿಳಾ ಕುಸ್ತಿಪಟುಗಳು ಮಾಡಿದ ಲೈಂಗಿಕ ದೌರ್ಜನ್ಯದ(Sexual Assault) ಆರೋಪವನ್ನು ಉಲ್ಲೇಖಿಸಿ ಮಾತನಾಡಿದ ಬ್ರಿಜ್ ಭೂಷಣ್ ಸಿಂಗ್(Brij Bhushan Singh), ಕುಸ್ತಿಪಟುಗಳು ಪ್ರತಿಭಟನೆ ನೆಪದಲ್ಲಿ ನಾಟಕವಾಡುತ್ತಿದ್ದಾರೆಯೇ ವಿನಃ ಯಾವ ಪುರಾವೆಯನ್ನು ಅಧಿಕಾರಿಗಳಿಗೆ ಒದಗಿಸುತ್ತಿಲ್ಲ ಎಂದು ಹೇಳಿದರು.

    ಇದನ್ನೂ ಓದಿ: ಶುಭಮನ್ ಗಿಲ್ ಬ್ಯಾಟಿಂಗ್ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿನ್ ತೆಂಡೂಲ್ಕರ್

    “ನೀವೆಲ್ಲಾ(ಪ್ರತಿಭಟಿಸುತ್ತಿರುವ ಕುಸ್ತಿಪಟುಗಳು) ಯಾಕೆ ಗಂಗಾ ನದಿಗೆ ಹೋಗಿ ನಿಮ್ಮ ಪದಕಗಳನ್ನು ಎಸೆಯಲು ಮುಂದಾಗಿದ್ದೀರಿ? ಯಾಕೆ ಅಧಿಕಾರಿಗಳಿಗೆ ಸರಿಯಾದ ಸಾಕ್ಷಿಗಳನ್ನು(Proof) ಒದಗಿಸುತ್ತಿಲ್ಲ” ಎಂದು ಬ್ರಿಜ್ ಭೂಷಣ್ ಹೇಳಿದ್ದಾರೆ.

    ಇದನ್ನೂ ಓದಿ: ಬಾಬಾ ರಾಮ​ದೇವ್ ಮತ್ತು ನಟ ಧನುಷ್ ಫೋಟೋ ವೈರಲ್; ಬಾಬಾ ರಾಮ​ದೇವ್ ಇದು ನೀವಾ? ಎಂದ ನೆಟ್ಟಿಗರು

    “ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ನನ್ನ ಬಂಧನವನ್ನು ಬಯಸುತ್ತಿದ್ದಾರೆ. ಆದ್ರೆ, ಅಧಿಕಾರಿಗಳಿಗೆ ಸಾಕ್ಷಿ ಒದಗಿಸುವಲ್ಲಿ ಅವರು ವಿಫಲರಾಗುತ್ತಿದ್ದಾರೆ. ನನ್ನ ಮೇಲೆ ಮಾಡಿರುವ ಅಷ್ಟೂ ಆರೋಪಗಳಲ್ಲಿ ಒಂದು ಆರೋಪವನ್ನು ಸಾಬೀತು ಪಡಿಸಿದರೆ ನಾನು ನೇಣು(Hang) ಬಿಗಿದುಕೊಳ್ಳುತ್ತೇನೆ” ಎಂದು ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts