More

    ತನಿಖೆ ನಡುವಲ್ಲೇ ಐಎಎಸ್​ ಅಧಿಕಾರಿಯನ್ನು ಒತ್ತೆ ಇಟ್ಟುಕೊಂಡು ಥಳಿಸಿದರು! ಆರೋಪಿಗಳ ಬಂಧನ…

    ಹಿಮ್ಮತ್​ನಗರ್​: ಗುಜರಾತ್ ಐಎಎಸ್ ಅಧಿಕಾರಿ ನಿತಿನ್ ಸಂಗ್ವಾನ್ ಅವರು ಸಬರಕಾಂತ ಜಿಲ್ಲೆಯ ಧರೋಯ್ ಅಣೆಕಟ್ಟಿನ ಬಳಿಯ ಗ್ರಾಮಕ್ಕೆ ಭೇಟಿ ನೀಡಿದಾಗ ಮೀನುಗಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದ ವ್ಯಕ್ತಿಗಳ ಗುಂಪೊಂದು ಅವರನ್ನು ಒತ್ತೆಯಾಳಾಗಿ ಇಟ್ಟುಕೊಂಡು ಥಳಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಈ ಐಎಎಸ್​ ಅಧಿಕಾರಿ ಮೀನುಗಾರಿಕೆ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಪತ್ತೆ ಹಚ್ಚಿರುವುದು ಘಟನೆಗೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ.

    ಇದನ್ನೂ ಓದಿ: ಶ್ರೀಗಂಧ ಬೆಳೆದರೆ ಆರ್ಥಿಕ ಲಾಭ: ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣ್ ಸಲಹೆ

    ‘ಮೀನುಗಾರಿಕಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಸಾಂಗ್ವಾನ್ ಅವರು ಸೋಮವಾರ (ಮಾರ್ಚ್ 6) ಗ್ರಾಮಕ್ಕೆ ಭೇಟಿ ನೀಡಿದಾಗ ಅವರ ಜತೆ ಅಧೀನ ಸಿಬ್ಬಂದಿ ಇದ್ದರು. ಈ ಸಂದರ್ಭ ಅವರ ಮೇಲೆ ನಡೆದ ದಾಳಿಯಲ್ಲಿ ಗಾಯಗೊಂಡಿದ್ದರು. ಆದರೆ ಅವರು ಈಗ ಅಪಾಯದಿಂದ ಪಾರಾಗಿದ್ದು ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ’ ಎಂದು ಸಬರಕಾಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ( ಡಿಎಸ್ಪಿ) ವಿಶಾಲ್ ವಘೇಲಾ ಮಾಹಿತಿ ನೀಡಿದ್ದಾರೆ.

    ಅಧಿಕಾರಿಗಳು ಮತ್ತು ಅವರ ತಂಡವು ಸಾಬರಮತಿ ನದಿಗೆ ನಿರ್ಮಿಸಲಾದ ಧರೋಯ್ ಅಣೆಕಟ್ಟಿನ ಸಮೀಪವಿರುವ ಅಂಬಾವಾಡ ಗ್ರಾಮಕ್ಕೆ ಮೀನುಗಾರಿಕೆ ಯೋಜನೆಯ ಪರಿಶೀಲನೆಗಾಗಿ ಹೋಗಿದ್ದರು. ಇದರಲ್ಲಿ ರಾಜ್ಯ ಸರ್ಕಾರವು ಸ್ಥಳೀಯ ಗುತ್ತಿಗೆದಾರರಿಗೆ ಅಣೆಕಟ್ಟಿನ ನೀರಿನಲ್ಲಿ “ಕೇಜ್ ಕಲ್ಚರ್ ಮೀನುಗಾರಿಕೆ” ಪ್ರಾರಂಭಿಸಲು ಸಹಾಯಧನವನ್ನು ನೀಡುತ್ತದೆ.

    ಎಫ್‌ಐಆರ್ ಪ್ರಕಾರ, ಭೇಟಿಯ ಸಮಯದಲ್ಲಿ, 2016-ಬ್ಯಾಚ್ ಐಎಎಸ್ ಅಧಿಕಾರಿ ಪಾಲನ್‌ಪುರದ ಹಿರಿಯ ಮೀನುಗಾರಿಕಾ ಇಲಾಖೆಯ ಅಧಿಕಾರಿ ಡಿಎನ್ ಪಟೇಲ್ ಮತ್ತು ಕೆಲವು ಕಿರಿಯ ಸಿಬ್ಬಂದಿ ಇದ್ದರು. 

    ಇದನ್ನೂ ಓದಿ: ಊಟ ಮಾಡುತ್ತಿರುವಾಗಲೇ ಕುಸಿದುಬಿದ್ದು ನಿಧನರಾದ ಐಎಎಸ್​ ಅಧಿಕಾರಿ!

    ಪ್ರಕರಣದ ಪ್ರಮುಖ ಆರೋಪಿ ಹಾಗೂ ಮೀನುಗಾರಿಕಾ ಗುತ್ತಿಗೆದಾರರಲ್ಲೊಬ್ಬರಾದ ಬಾಬು ಪರ್ಮಾರ್ ಎಂಬಾತ ಸಾಂಗ್ವಾನ್‌ನೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ ಎಂದು ಪಟೇಲ್ ಅವರು ವಡಾಲಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದರು.

    ಖೇಡಬ್ರಹ್ಮ ತಾಲೂಕು ವ್ಯಾಪ್ತಿಯ ಕಾಂತಾಪುರ ಗ್ರಾಮದ ನಿವಾಸಿ ಬಾಬು ಪರಮಾರ್ ಎಂಬಾತ ಏಕಾಏಕಿ ಕೋಪಗೊಂಡು ಸಾಂಗ್ವಾನ್ ಅವರ ಮೊಣಕಾಲು ಬಳಿ ಕಚ್ಚಿದ್ದಾನೆ. ನಂತರ, ಇತರ ನಾಲ್ವರು ಸ್ಥಳಕ್ಕೆ ಆಗಮಿಸಿ ಐಎಎಸ್ ಅಧಿಕಾರಿಗೆ ಥಳಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

    ಇದನ್ನೂ ಓದಿ: 

    ನಂತರ ಬಾಬು ಪರ್ಮಾರ್ ಇತರ 10ರಿಂದ 12 ಜನರನ್ನು ಕರೆದರು. ಅವರು ಕೋಲುಗಳೊಂದಿಗೆ ಶಸ್ತ್ರಸಜ್ಜಿತವಾಗಿ ಸ್ಥಳಕ್ಕೆ ಬಂದು ಸಾಂಗ್ವಾನ್ ಮತ್ತು ಅವರ ತಂಡವನ್ನು ಒತ್ತೆಯಾಳಾಗಿ ಇರಿಸಿದರು. ಅವರು ಹೋದ ನಂತರ ಅವರ ವಿರುದ್ಧ ಪೊಲೀಸ್ ದೂರು ನೀಡುವುದಿಲ್ಲ ಎಂದು ಭರವಸೆ ನೀಡಿ ಕಾಗದದ ತುಂಡು ಮೇಲೆ ಬರೆದು ಸಹಿ ಹಾಕಲು ಒಪ್ಪಿದರು. ಎಫ್‌ಐಆರ್‌ನಲ್ಲಿ ಬಾಬು ಪರ್ಮಾರ್ ಮತ್ತು ಇತರರು ಸಾಂಗ್ವಾನ್ ಮತ್ತು ಅವರ ತಂಡದ ಸದಸ್ಯರನ್ನು ಅಣೆಕಟ್ಟಿಗೆ ಎಸೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts