More

    ನಾನು ನವಭಾರತದ ಪ್ರತೀಕ ಎಂದು ವಿರಾಟ್ ಕೊಹ್ಲಿ ಹೇಳಿದ್ದೇಕೆ ಗೊತ್ತೇ?

    ಅಡಿಲೇಡ್: ‘ನಾನು ನವಭಾರತದ ಪ್ರತೀಕ’ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ಹೇಳಿಕೆ ನೀಡಿದ್ದಾರೆ. ನವಭಾರತದ ಜನರು ಆಶಾವಾದದೊಂದಿಗೆ ಸವಾಲುಗಳನ್ನು ಎದುರಿಸಲು ಯಾವಾಗಲೂ ಸಿದ್ಧರಾಗಿರುತ್ತಾರೆ ಎಂಬುದನ್ನೂ ಅವರು ಸಾರಿದ್ದಾರೆ. ಅವರ ಈ ಹೇಳಿಕೆಗೆ ಕಾರಣ ತಿಳಿಯಬೇಕಾದರೆ ಮುಂದೆ ಓದಿ…

    ಇದನ್ನೂ ಓದಿ: ಕೊಹ್ಲಿ ವಿರುದ್ಧ ಸ್ಲೆಡ್ಜಿಂಗ್ ಮಾಡಲ್ಲ, ನಮ್ಮ ಪ್ಲ್ಯಾನ್ ಬೇರೆಯೇ ಇದೆ ಎಂದ ಆಸೀಸ್ ಕೋಚ್

    ಆಸ್ಟ್ರೇಲಿಯಾ ತಂಡದ ಮಾಜಿ ಗ್ರೆಗ್ ಚಾಪೆಲ್ ಇತ್ತೀಚೆಗೆ ಕೊಹ್ಲಿ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದರು. ಅದರನ್ವಯ ವಿರಾಟ್ ಕೊಹ್ಲಿ ಅವರು, ಆಸ್ಟ್ರೇಲಿಯೇತರ ಕ್ರಿಕೆಟಿಗರ ಪೈಕಿ ಆಸ್ಟ್ರೇಲಿಯನ್ನರ ಮನೋಭಾವವನ್ನು ಅತ್ಯಂತ ಹೆಚ್ಚು ಹೋಲುತ್ತಾರೆ ಎಂದು ಚಾಪೆಲ್ ಅಭಿಪ್ರಾಯಪಟ್ಟಿದ್ದರು. ಚಾಪೆಲ್ ಅವರ ಈ ಹೇಳಿಕೆಯ ಬಗ್ಗೆ ಬುಧವಾರ ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ನಾನು ಆಸ್ಟ್ರೇಲಿಯನ್ನರ ಮನೋಭಾವವನ್ನು ಹೋಲುತ್ತದೆ ಎಂದು ಹೇಳುವುದು ಸರಿಯಾಗದು, ಯಾಕೆಂದರೆ ನನ್ನ ವ್ಯಕ್ತಿತ್ವ ನವಭಾರತದ ಪ್ರತೀಕವಾಗಿದೆ ಎಂದು ಹೇಳಿದ್ದಾರೆ.

    ‘ನಾನು ಯಾವಾಗಲೂ ನಾನಾಗಿಯೇ ಇರಲು ಇಷ್ಟಪಡುತ್ತೇನೆ. ನಾನು ನವಭಾರತದ ಪ್ರತೀಕವಾಗಿದ್ದೇನೆ. ಅದೇ ರೀತಿ ನಾನು ನನ್ನನ್ನು ನೋಡಲು ಇಷ್ಟಪಡುತ್ತೇನೆ. ಆಸ್ಟ್ರೇಲಿಯನ್ನರ ಮನೋಭಾವಕ್ಕೆ ನನ್ನನ್ನು ಹೋಲಿಸುವುದು ಸರಿ ಎನಿಸದು. ಮೊದಲ ದಿನದಿಂದಲೂ ನನ್ನ ವ್ಯಕ್ತಿತ್ವ ಹೀಗೆಯೇ ಇದೆ. ಪ್ರಸಕ್ತ ಭಾರತೀಯ ಕ್ರಿಕೆಟ್ ಕೂಡ ಇದೇ ರೀತಿಯಲ್ಲಿ ಸಾಗುತ್ತಿದೆ’ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ವಿಶೇಷ ದಾಖಲೆ ಬರೆದ ಕೆಎಲ್ ರಾಹುಲ್, ಅಭಿಮಾನಿಗಳಿಗೆ ಧನ್ಯವಾದ

    ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ತೋರುವ ಆಕ್ರಮಣಕಾರಿ ವರ್ತನೆಯ ಬಗ್ಗೆ ಮಾತನಾಡುತ್ತ ಗ್ರೆಗ್ ಚಾಪೆಲ್ ಅವರು, ‘ಈ ಹಿಂದಿನ ಭಾರತೀಯ ಕ್ರಿಕೆಟ್ ತಂಡಗಳು ರಕ್ಷಣಾತ್ಮಕ ಆಟವಾಡುತ್ತಿದ್ದವು. ಒಂದು ರೀತಿಯಲ್ಲಿ ಮಹಾತ್ಮ ಗಾಂಧಿಯವರ ನೀತಿಯಂತೆ ನಡೆದುಕೊಳ್ಳುತ್ತಿದ್ದವು. ಸೌರವ್ ಗಂಗೂಲಿ ಅವರು ಈ ಮನೋಭಾವವನ್ನು ಬದಲಾಯಿಸಲು ಪ್ರಯತ್ನಿಸಿದ ಮೊದಲ ಭಾರತೀಯ ನಾಯಕ. ಇದು ಭಾರತ ತಂಡಕ್ಕೆ ಯಶಸ್ಸನ್ನೂ ತಂದುಕೊಟ್ಟಿತ್ತು. ವಿರಾಟ್ ಕೊಹ್ಲಿ ಅವರು ಕೂಡ ವಿನಮ್ರ, ತಾಳ್ಮೆಯ ವ್ಯಕ್ತಿತ್ವದವರಲ್ಲ. ಅವರು ಎದುರಾಳಿಯ ಮೇಲೆ ಸಂಪೂರ್ಣ ಆಕ್ರಮಣ ತೋರುತ್ತಾರೆ. ಎದುರಾಳಿಯ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸುವುದು ಅವರ ಮನೋಭಾವ. ಇದರಿಂದಾಗಿ ಅವರು ಆಸ್ಟ್ರೇಲಿಯೇತರ ಕ್ರಿಕೆಟಿಗರಲ್ಲಿ ಆಸ್ಟ್ರೇಲಿಯನ್ನರನ್ನು ಅತ್ಯಂತ ಹೆಚ್ಚು ಹೋಲುತ್ತಾರೆ’ ಎಂದು ಹೇಳಿದ್ದರು.

    ಇದನ್ನೂ ಓದಿ: ಮಹಿಳೆಯರ ಕ್ರಿಕೆಟ್ ವಿಶ್ವಕಪ್ ವೇಳಾಪಟ್ಟಿ ಪ್ರಕಟ, ಭಾರತಕ್ಕೆ ಮೊದಲ ಎದುರಾಳಿ ಯಾರು ಗೊತ್ತಾ?

    ನವಭಾರತದ ಬಗ್ಗೆ ತಮ್ಮ ವ್ಯಾಖ್ಯಾನವನ್ನೂ ಮಂಡಿಸಿರುವ ವಿರಾಟ್ ಕೊಹ್ಲಿ, ‘ನವಭಾರತ ಸವಾಲುಗಳನ್ನು ಸ್ವೀಕರಿಸುತ್ತದೆ. ಆಶಾವಾದ ಮತ್ತು ಸಕಾರಾತ್ಮಕತೆಯಿಂದ ಕೂಡಿದೆ. ನಮ್ಮ ದಾರಿಯಲ್ಲಿ ಎದುರಾಗುವ ಯಾವುದೇ ಸವಾಲು ಸ್ವೀಕರಿಸಲು ನಾವು ಸಿದ್ಧರಾಗಿರುತ್ತೇವೆ’ ಎಂದು ಹೇಳಿದ್ದಾರೆ.

    ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೇರಲು ಭಾರತದ ಮುಂದಿದೆ ಸವಾಲಿನ ಹಾದಿ…

    ಕಡೇ ಎರಡೂ ಟೆಸ್ಟ್ ಪಂದ್ಯವಾಡಲು ಆಸ್ಟ್ರೇಲಿಯಾಗೆ ತೆರಳಿದ ರೋಹಿತ್ ಶರ್ಮ

    ಕ್ರಿಕೆಟ್‌ಗೆ ಮರಳಲು ಸಜ್ಜಾದ ಯುವರಾಜ್, ಶ್ರೀಶಾಂತ್

    ಬಾಲಿವುಡ್‌ನಲ್ಲಿ ಬರಲಿದೆ ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಬಯೋಪಿಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts