ಕಡೇ ಎರಡೂ ಟೆಸ್ಟ್ ಪಂದ್ಯವಾಡಲು ಆಸ್ಟ್ರೇಲಿಯಾಗೆ ತೆರಳಿದ ರೋಹಿತ್ ಶರ್ಮ

ನವದೆಹಲಿ: ಫಿಟ್ನೆಸ್ ಕುರಿತು ಎದ್ದಿದ್ದ ಹಲವು ಊಹಾಪೋಹಗಳನ್ನು ಮೆಟ್ಟಿನಿಂತಿರುವ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಮಂಗಳವಾರ ಬೆಳಗ್ಗೆ ಅಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದರು. ಗುರುವಾರದಿಂದ (ಡಿ.17) ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಆರಂಭಗೊಳ್ಳುತ್ತಿದ್ದು, ರೋಹಿತ್ ಶರ್ಮ ಮೂರನೇ ಟೆಸ್ಟ್ ಪಂದ್ಯಕ್ಕೆ ಕಣಕ್ಕಿಳಿಯುವ ಸಾಧ್ಯತೆಗಳಿವೆ. ರೋಹಿತ್ ಶರ್ಮ ದುಬೈ ಮಾರ್ಗವಾಗಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ಇದೇ ವೇಳೆ ಫಿಟ್ನೆಸ್‌ಗೆ ಹೆಚ್ಚು ಒತ್ತು ನೀಡಲಿದ್ದಾರೆ. ಯುಎಇಯಲ್ಲಿ ನಡೆದ 13ನೇ ಐಪಿಎಲ್ … Continue reading ಕಡೇ ಎರಡೂ ಟೆಸ್ಟ್ ಪಂದ್ಯವಾಡಲು ಆಸ್ಟ್ರೇಲಿಯಾಗೆ ತೆರಳಿದ ರೋಹಿತ್ ಶರ್ಮ