More

    ಹೆಂಡ್ತಿ ಡೈವೋರ್ಸ್ ಕೇಳಿದ್ಳು.. ಗಂಡ ಆಕೆಯ ಮೂಗನ್ನೇ ಕತ್ತರಿಸಿದ!

    ಕಾಬೂಲ್​: ಕರೊನಾ COVID19 ವೈರಸ್ ಸೋಂಕು ಜಗತ್ತನ್ನೇ ತಲ್ಲಣಗೊಳಿಸಿದೆ ಎಂದ ಮೇಲೆ ಕೌಟುಂಬಿಕ ಬದುಕಿನ ಮೇಲೂ ಪರಿಣಾಮ ಬೀರದೆ ಇರೋಕೆ ಸಾಧ್ಯವೇ? ನಾನಾ ಕಾರಣಗಳಿಂದ ಹೈರಾಣಾಗಿರುವ ಅಫ್ಘಾನಿಸ್ತಾನದಲ್ಲಿ ಕರೋನಾ ಲಾಕ್​ಡೌನ್ ನಂತರದಲ್ಲಿ ಕೌಟುಂಬಿಕ ಹಿಂಸಾಚಾರ ಹೆಚ್ಚಾಗಿವೆ ಎನ್ನುತ್ತ ಅಧಿಕಾರಿಗಳು ಬಹಿರಂಗ ಪಡಿಸಿದ ಅಪರಾಧ ಸುದ್ದಿ ಹುಬ್ಬೇರಿಸುವಂಥದ್ದು! ಕೂಡಲೇ ನೆನಪುಗಳು ರಾಮಾಯಣದತ್ತ ಜಾರಿದರೂ ಅಚ್ಚರಿ ಇಲ್ಲ- ಅಂಥ ಘಟನೆ ಅದು.. ಆದರೆ ಕಾರಣ ಬೇರೆ ಬೇರೆ. ಆಫ್ಘನ್ ಅಧಿಕಾರಿಗಳು ತೆರೆದಿಟ್ಟ ಘಟನೆ ಹೀಗಿದೆ –

    ಇದನ್ನೂ ಓದಿ: ಇಂದಿನ ಮಹಾಯುದ್ಧಗಳ ವಂಚನೆಯ ತೀವ್ರತೆ, ಸಾಂದ್ರತೆ

    ಏಳು ವರ್ಷದ ಮಗನ ತಾಯಿಯೇ ಈ ಪ್ರಸಂಗದಲ್ಲಿ ಸಂತ್ರಸ್ತೆ. ಆಕೆಗೋ ಕೇವಲ 24 ವರ್ಷ ವಯಸ್ಸು. ಪಕ್​​ಟಿಕಾ ಪ್ರಾಂತ್ಯದ ನೈಋತ್ಯ ಭಾಗದಲ್ಲಿರುವ ಒಂದು ಗ್ರಾಮದ ನಿವಾಸಿ. ಸದಾ ದೌರ್ಜನ್ಯವೆಸಗುವ ಪತಿಯ ಸಹವಾಸ ಸಾಕಾಗಿ, ನನಗೆ ವಿಚ್ಛೇದನ ಕೊಡಿ, ಹೋಗ್ತೇನೆ ಎಂದು ಮನೆಯಿಂದ ಹೊರಕ್ಕೆ ಹೋಗಲು ಹೊರಟಿದ್ದಳು ಆಕೆ. ಕೂಡಲೇ ಬಾಗಿಲಿಗೆ ಅಡ್ಡ ಬಂದ ಪತಿ, ಹೊಡೆದು ಬಡಿದು ಅಲ್ಲೇ ತಳ್ಳಿ ಅಡುಗೆ ಮನೆಗೆ ಓಡಿ ಹೋಗಿದ್ದ. ಪೆಟ್ಟು ತಿನ್ನುವುದು ಹೊಸದಲ್ಲವಾದ್ದರಿಂದ ಆಕೆ ಬಿದ್ದಲ್ಲಿಂದ ಎದ್ದಿರಲಿಲ್ಲ. ಅಳುತ್ತ ಕುಳಿತಿದ್ದಳು.

    ಇದನ್ನೂ ಓದಿ: ಇಲ್ಲಾ… ನಾ ಅಕಿಗೆ ವಾಟ್ಸ್​ಆಪ್ ಒಳಗ ಚಾಳಿ ಬಿಟ್ಟೇನಿ…

    ಅಡುಗೆ ಕೋಣೆಯಿಂದ ಮರಳಿ ಬಂದ ಪತಿಯ ಕೈಯಲ್ಲಿ ಹರಿತವಾದ ಚೂರಿ ಕಂಡು ಬೆಚ್ಚಿ ಬಿದ್ದಳು ಈ ತಾಯಿ. ಆತ, ವಿಚ್ಛೇದನ ಬೇಕಾ ನಿನಗೆ, ವಿಚ್ಛೇದನ ಬೇಕಾ ನಿನಗೆ ಎನ್ನುತ್ತ ಆಕೆಯನ್ನೆತ್ತಿ ಗೋಡೆಗೆ ಒತ್ತಿ ಹಿಡಿದು ಆ ಹರಿತ ಚೂರಿಯಿಂದ ಮೂಗನ್ನೇ ಕುಯ್ದು ಬಿಡಬೇಕಾ!!! ಈ ದಿಢೀರ್ ದಾಳಿಯಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದ ಆ ಹೆಣ್ಮಗಳು ಅಲ್ಲಿಂದ ತಪ್ಪಿಸಿಕೊಂಡು ಹೊರಗೋಡಿದ್ದಳು. ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ. ಅಲ್ಲಿಂದ ಆಕೆಯನ್ನು ವಿಶ್ರಾಂತಿಗಾಗಿ ತವರಿಗೆ ಕಳುಹಿಸಲಾಗಿದೆ.

    ಇದನ್ನೂ ಓದಿ: VIDEO| ಕಟೀಲು ಶ್ರೀದುರ್ಗಾ ಪರಮೇಶ್ವರಿ ಅಮ್ಮನವರಿಗೆ ಪೂಜೆ

    ಪಕ್​ಟಿಕಾ ಪ್ರಾಂತ್ಯದ ಮಹಿಳಾ ಇಲಾಖೆ ಮುರ್ಖಯಸ್ಥೆ ಖುಷ್ಬೂ ಮೈದಾನ್​ವಾಲ್​ ಹೇಳುವ ಪ್ರಕಾರ, ಲಾಕ್​ಡೌನ್ ನಂತರದಲ್ಲಿ ಅಲ್ಲಿ ಕೌಟುಂಬಿಕ ಹಿಂಸಾಚಾರ ಹೆಚ್ಚಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ 13 ಅತ್ಯಂತ ದಾರುಣ ದೌರ್ಜನ್ಯ ಪ್ರಕರಣಗಳು ಈ ಪ್ರದೇಶದಲ್ಲಿ ದಾಖಲಾಗಿವೆ. ಇಂಥ ಕುಟುಂಬಗಳಲ್ಲಿನ ಮಹಿಳೆಯರ ಸ್ಥಿತಿ ತುಂಬಾ ಗಂಭೀರವಾಗಿದೆ. ಒಟ್ಟಾರೆ ಆಫ್ಘನ್​ನಲ್ಲಿ ಶೇಕಡ 50ಕ್ಕಿಂತ ಹೆಚ್ಚು ಮಹಿಳೆಯರು ಕೌಟುಂಬಿಕ ದೌರ್ಜನ್ಯದ ಸಂತ್ರಸ್ತೆಯರಾಗಿದ್ದಾರೆ. (ಏಜೆನ್ಸೀಸ್)

    ಮಂಗಲಕರ ಆಚಾರವೇ ಶೋಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts