More

    ಹೃತಿಕ್​ ರೋಷನ್​ಗೆ 2ನೇ ಮದುವೆ ಯೋಗ ಇದೆ ಎಂದಿದ್ದ ಜ್ಯೋತಿಷಿಯ ಭವಿಷ್ಯ ನಿಜವಾಯ್ತಾ!?

    ಮುಂಬೈ: ಬಾಲಿವುಡ್​​ ನಟ ಹೃತಿಕ್​ ರೋಷನ್ ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದಾರೆ. ಅದೂ.. ಸಿನಿಮಾ ವಿಚಾರವಾಗಿ ಅಲ್ಲ, ಬದಲಾಗಿ ಪ್ರೇಯಸಿ ಜತೆ ಸುತ್ತಾಡುತ್ತಿರುವ ವಿಷಯ ಈಗ ಭಾರೀ ಸದ್ದು ಮಾಡುತ್ತಿದೆ.

    ಮೊದಲ ಪತ್ನಿಯಿಂದ ಬೇರಾದ ಬಳಿಕ ನಟ ಹೃತಿಕ್ ರೋಷನ್ ಅವರ ಹೆಸರು ಹಲವು ವಿವಾದಗಳಲ್ಲಿ ಕೇಳಿಬಂದಿತ್ತು. ಇದಾದ ಬಳಿಕ ಈಗ ಸಾಬಾ ಎಂಬುವರ ಜತೆ ಡೇಟಿಂಗ್​ ಇರುವುದಾಗಿ ಸ್ವತಃ ಇಬ್ಬರೂ ಒಪ್ಪಿಕೊಂಡಿದ್ದಾರೆ.

    ಎರಡೆರಡು ಮದುವೆಯಾಗುವುದು, ತಮಗಿಂತ ವಯಸ್ಸಿನಲ್ಲಿ ಕಿರಿಯವರನ್ನು ವರಿಸುವುದು ಬಾಲಿವುಡ್​ನಲ್ಲಿ ವಿಶೇಷವಲ್ಲವಾದರೂ, ಹೃತಿಕ್​ ಮದುವೆಯ ಬಗ್ಗೆ ಈ ಹಿಂದೆ ಭವಿಷ್ಯ ನುಡಿದಿದ್ದ ಜ್ಯೋತಿಷಿ ಹೇಳಿಕೆ ನಿಜವಾಯಿತು ಎಂಬುದು ಈಗಿನ ಬೆಳವಣಿಗೆಯಿಂದ ನಿಜವೆನಿಸಿದೆ.

    ಈ ಹಿಂದೆ ಹೃತಿಕ್​ ಮೊದಲ ಪತ್ನಿ ಸುಸೈನ್​​ ಖಾನ್​ಗೆ ವಿಚ್ಛೇದನ ನೀಡುವ ಮುನ್ನವೇ ಜ್ಯೋತಿಷಿ ಬೆಜನ್​​ ದರುವಾಲಾ ಹೃತಿಕ್​ಗೆ ಎರಡನೇ ವಿವಾಹವಾಗುವ ಯೋಗವಿದೆ ಎಂದಿದ್ದರು. ಆಗ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಹೃತಿಕ್​​-ಸುಸೈನ್​ ದಾಂಪತ್ಯದಲ್ಲಿ ಬಿರುಕು ಮೂಡಿದಾಗ ಈ ಜ್ಯೋತಿಷಿ ಹೇಳಿಕೆ ನಿಜ ಎಂದು ಎಲ್ಲರೂ ನಂಬಿದ್ದರು. ಇದು ಸತ್ಯವೂ ಆಗಿದೆ.

    ಸದ್ಯ ಸಾಬಾ ಆಜಾದ್ ಜತೆ ಲಂಡನ್​ ಪ್ರವಾಸದಲ್ಲಿರುವ ಹೃತಿಕ್​ ಇಬ್ಬರ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೇ ಈ ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಏನೇ ಆದರೂ ಜ್ಯೋತಿಷಿಯ ಈ ಹೇಳಿಕೆ ಮುನ್ನೆಲೆಗೆ ಬಂದಿದ್ದು, ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಅಲ್ಲದೇ ಈ ಜ್ಯೋತಿಷಿಯ ಭವಿಷ್ಯ ನಿಖರವಾಗುತ್ತೆ ಎಂದು ಹಲವರು ದರುವಾಲಾ ಭೇಟಿಗಾಗಿ ಕಾಯುತ್ತಿದ್ದಾರಂತೆ. (ಏಜೆನ್ಸೀಸ್​)

    ಅಪ್ಪುಗೆ ಮತ್ತೆ “ಬ್ಲ್ಯೂ” ಟಿಕ್​: ಅಭಿಮಾನಿಗಳ ಮನವಿಗೆ ಮಣಿಯಿತು ಟ್ವಿಟ್ಟರ್​​

    ಇಲ್ಲಿದ್ದಾರೆ ಹಂದಿಚೋರರು: 3 ದಿನದಲ್ಲಿ 180 ವರಹಗಳ ಕಿಡ್ನ್ಯಾಪ್​! ಪೊಲೀಸ್​ ಠಾಣೆ ಮುಂದೆಯಿಂದಲೇ ಹೊರಟ ಕಳ್ಳರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts