More

    ಇಲ್ಲಿದ್ದಾರೆ ಹಂದಿಚೋರರು: 3 ದಿನದಲ್ಲಿ 180 ವರಹಗಳ ಕಿಡ್ನ್ಯಾಪ್​! ಪೊಲೀಸ್​ ಠಾಣೆ ಮುಂದೆಯಿಂದಲೇ ಹೊರಟ ಕಳ್ಳರು

    ಬೆಂಗಳೂರುಗ್ರಾಮಾಂತರ: ಗ್ರಾಮೀಣ ಪ್ರದೇಶಗಳಲ್ಲಿ ದನಕರು, ಕುರಿಮೇಕೆಗಳನ್ನು ಕದ್ದೊಯ್ಯುತ್ತಿದ್ದ ಕಳ್ಳರ ಕಣ್ಣು ಇದೀಗ ಹಂದಿಗಳ ಮೇಲೆ ಬಿದ್ದಿದೆ. ಊರ ಹೊರವಲಯದಲ್ಲಿ ಹಂದಿ ಸಾಗಣೆ ಕೇಂದ್ರಗಳ ಮೇಲೆ ದಾಳಿ ಮಾಡುತ್ತಿರುವ ಚೋರರು ಪ್ರತಿರೋಧ ತೋರಿದರೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆಯನ್ನೂ ನಡೆಸುತ್ತಿದ್ದಾರೆ.

    ಗ್ರಾಮಾಂತರ ಜಿಲ್ಲೆಯಲ್ಲಿ ಅಲ್ಲೊಂದು ಇಲ್ಲೊಂದು ಇಂಥ ಪ್ರಕರಣಗಳು ನಡೆಯುತ್ತಿದ್ದವು, ಆದರೆ ಕಳೆದ ಮೂರು ದಿನದಲ್ಲಿ ಸರಣಿಯಾಗಿ ನಾಲ್ಕೈದು ಗ್ರಾಮಗಳಲ್ಲಿ ಹಂದಿಗಳನ್ನು ಕದ್ದೊಯ್ಯಲಾಗಿದ್ದು, ಪ್ರತಿರೋಧ ತೋರಿದ ಹಂದಿಸಾಕಣೆದಾರರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದು ಪ್ರಕರಣದ ಗಂಭೀರತೆಯನ್ನು ಬೊಟ್ಟುಮಾಡುತ್ತಿದೆ. ಮೂರು ದಿನದಲ್ಲಿ 180 ಹಂದಿಗಳನ್ನು ಅಪಹರಿಸಿದ್ದು, ಹಂದಿ ಸಾಕಣೆದಾರರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.

    ಠಾಣೆ ಮುಂದೆಯೇ ಸವಾರಿ: ಮೇಡಹಳ್ಳಿಯಲ್ಲಿ ಜು.16ರಂದು 73 ಹಂದಿಗಳನ್ನು ಕದ್ದ ಕಳ್ಳರು ಅಷ್ಟೂ ಹಂದಿಗಳನ್ನು ಎರಡು ಬೊಲೆರೋ ವಾಹಗಳನ್ನು ತುಂಬಿಕೊಂಡು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಎದುರೇ ಸಾಗಿದ್ದಾರೆ. ಸಿಸಿ ಕ್ಯಾಮರಾ ಪರಿಶೀಲನೆ ವೇಳೆ ಈ ದೃಶ್ಯ ಕಂಡುಬಂದಿದ್ದು, ಪೊಲೀಸರೇ ಬೆಸ್ತು ಬಿದ್ದಿದ್ದಾರೆ.

    ನಂಬರ್‌ಪ್ಲೇಟ್ ಇಲ್ಲ: ನಂಬರ್‌ಪ್ಲೇಟ್‌ಗಳಿಲ್ಲದ ಬೊಲೆರೋ ವಾಹಗಳನ್ನು ಕೃತ್ಯಕ್ಕೆ ಬಳಸುತ್ತಿದ್ದು, ಎಲ್ಲರ ಕಣ್ಣು ಇದೀಗ ಬೊಲೆರೋ ವಾಹನಗಳ ಮೇಲೆ ಬಿದ್ದಿದೆ, ಎಲ್ಲೆ ಅನುಮಾನಾಸ್ಪದವಾಗಿ ಬೊಲೆರೋ ವಾಹನಗಳು ಕಂಡರೂ ಸಾರ್ವಜನಿಕರು ಪೊಲೀಸ್ ಠಾಣೆಗೆ ಫೋನಾಯಿಸುತ್ತಿದ್ದಾರೆ.

    ಮ್ಯಾಟ್ರಿಮೋನಿಯಲ್​ ವಂಚನೆ: ದುಬೈಯಲ್ಲಿ ವೈದ್ಯನೆಂದು ನಾಟಕ, 3 ಲಕ್ಷ ರೂ.ಕೊಟ್ಟು ಮೋಸ ಹೋದ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts