More

    ರೈತರು ಪ್ರತಿಭಟಿಸುತ್ತಿರುವ ಸ್ಥಳದಲ್ಲೇ ‘ಹಾಟ್​ ಸ್ಪಾಟ್​’!

    ನವದೆಹಲಿ: ಕರೊನಾ ಹಾವಳಿ ಇಟ್ಟಿರುವ ಈ ಸಂದರ್ಭದಲ್ಲಿ ಭಯ ಹುಟ್ಟಿಸುವ ಎರಡು ಪದಗಳೆಂದರೆ ಒಂದು ‘ಪಾಸಿಟಿವ್’​, ಇನ್ನೊಂದು ‘ಹಾಟ್ ​ಸ್ಪಾಟ್​’. ಇದೀಗ ರೈತರು ಪ್ರತಿಭಟಿಸುವ ಸ್ಥಳದಲ್ಲೂ ‘ಹಾಟ್​ ಸ್ಪಾಟ್’​ ಪದ ಜೋರಾಗಿ ಕೇಳಿಬರುತ್ತಿದೆ. ಆದರೆ ರೈತರು ಈ ಪದ ಕೇಳಿಯೂ ಖುಷಿಯಾಗಿದ್ದಾರೆಂಬುದೇ ವಿಶೇಷ.

    ಏಕೆಂದರೆ ಇದು ಬೇರೆಯದೇ ಹಾಟ್ ಸ್ಪಾಟ್​. ‘ಅನ್ನದಾತೋ ಸುಖೀಭವ’ ಎಂಬ ಮಾತಿದೆ. ಅಂಥ ಅನ್ನದಾತರಿಗೆ ಆಪ್​ ‘ಡಾಟಾ’ ಕೊಡಲು ಮುಂದಾಗಿದೆ. ಅಂದರೆ, ಪ್ರತಿಭಟನಾನಿರತ ರೈತರಿಗೆ ಉಚಿತವಾಗಿ ಮೊಬೈಲ್ ಡಾಟಾ ಕೊಡಲು ಮುಂದಾಗಿರುವ ಆಮ್ ಆದ್ಮಿ ಪಾರ್ಟಿ, ಅದಕ್ಕಾಗಿ ಪ್ರತಿಭಟನಾ ಸ್ಥಳದಲ್ಲಿ ವೈಫೈ ಹಾಟ್​ ಸ್ಪಾಟ್​ಗಳನ್ನು ಅಳವಡಿಸಲು ಮುಂದಾಗಿದೆ.

    ಇದನ್ನೂ ಓದಿ: ರೈತರಿಗೆ ‘ಹ್ಯಾಪಿ ನ್ಯೂ ಇಯರ್​?’; ಕೇಂದ್ರ ಸರ್ಕಾರದಿಂದ ಹೊಸ ಆಫರ್!

    ದೆಹಲಿಯ ಸಿಂಘು ಗಡಿಪ್ರದೇಶದಲ್ಲಿ ಸುಮಾರು ಒಂದು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ದೇಶದ ಮೂಲೆಮೂಲೆಗಳಿಂದಲೂ ರೈತರು ಬಂದಿದ್ದಾರೆ. ಅವರೆಲ್ಲ ತಮ್ಮ ಕುಟುಂಬದ ಜತೆ ನಿರಂತರ ಸಂಪರ್ಕದಲ್ಲಿರಲು ಅನುಕೂಲ ಮಾಡಿಕೊಡುವ ಸಲುವಾಗಿ ವೈಫೈ ಹಾಟ್​ಸ್ಪಾಟ್​ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಆಪ್​ನ ಮುಖಂಡ ರಾಘವ್ ಚಡ್ಡಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ದೆಹಲಿ ಸರ್ಕಾರ ಪ್ರತಿಭಟನಾನಿರತ ರೈತರಿಗೆ ಮೊಬೈಲ್ ಟಾಯ್ಲೆಟ್​ಗಳನ್ನು ವ್ಯವಸ್ಥೆ ಮಾಡಿರುವುದನ್ನೂ ಅವರು ಈ ವೇಳೆ ಸ್ಮರಿಸಿಕೊಂಡರು. (ಏಜೆನ್ಸೀಸ್)

    ಟಿಂಡರ್​ನಲ್ಲಿ ಪರಿಚಯವಾದ ಯುವತಿಯನ್ನು ರೇಪ್​ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

    ಸಂಬಳ ಕೊಡುತ್ತೇನೆಂದಾಕೆ ವಿಚ್ಛೇದನದ ಬೆದರಿಕೆ ಹಾಕುತ್ತಿದ್ದಾಳೆ: ಪತ್ನಿಯ ಆಸ್ತಿಯಲ್ಲಿ ಪಾಲು ಸಿಗುವುದೆ?

    ಪ್ರವಾಸಿ ಮಹಿಳೆಯನ್ನೇ ರೇಪ್​ ಮಾಡಿದ ಆಟೋ ಡ್ರೈವರ್​! ಪ್ರಕರಣ ದಾಖಲಾಗಿ 12 ಗಂಟೆಗಳಲ್ಲೇ ಆರೋಪಿ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts