More

    ರಾಜಭವನಕ್ಕೆ ಬಾಂಬ್​ ಬೆದರಿಕೆ ಪ್ರಕರಣ; ಆರೋಪಿ ಮಾತು ಕೇಳಿ ದಂಗಾದ ಪೊಲೀಸರು

    ಬೆಂಗಳೂರು: ರಾಜಭವನದಲ್ಲಿ ಬಾಂಬ್​ ಇರಿಸಿರುವುದಾಗಿ ರಾಷ್ಟ್ರೀಯ ತನಿಖಾ ದಳದ ಕಂಟ್ರೋಲ್​ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿರುವ ವಿಧಾನಸೌಧ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ಬಂಧಿತನು ಕೋಲಾರ ಜಿಲ್ಲೆ, ಮುಳಬಾಗಿಲು ತಾಲ್ಲೂಕಿನ ವಡ್ಡಹಳ್ಳಿಯ ನಿವಾಸಿ ಭಾಸ್ಕರ್​ ಎಂದು ತಿಳಿದು ಬಂದಿದ್ದು, ಈತ ಪೊಲೀಸರು ಎಷ್ಟರಮಟ್ಟಿಗೆ ಅಲರ್ಟ್​ ಆಗಿದ್ದಾರೆ ಎಂಬುದನ್ನು ತಿಳಿಯಲು ಕರೆ ಮಾಡಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಆರೋಪಿಯ ಹೇಳಿದ ಮಾತು ಕೇಳಿ ಪೊಲೀಸ್​ ಅಧಿಕಾರಿಗಳೇ ಕೆಲಕಾಲ ದಂಗಾಗಿದ್ದಾರೆ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ಗುಜರಾತ್​ನಲ್ಲಿ ಎಎಪಿಗೆ ಭಾರೀ ಹಿನ್ನಡೆ; ಶಾಸಕ ಸ್ಥಾನಕ್ಕೆ ಭೂಪೇಶ್ ಭಯಾನಿ ರಾಜೀನಾಮೆ

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಆರೋಪಿ ಬಿ.ಕಾಂ ಪದವಿಧರನಾಗಿದ್ದು, ವ್ಯವಸಾಯ ಮಾಡುತ್ತಿದ್ದ. ಇತ್ತೀಚೆಗೆ ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಇ–ಮೇಲ್ ಬಂದಿದ್ದ ಮಾಹಿತಿ ತಿಳಿದುಕೊಂಡಿದ್ದ ಆರೋಪಿ ಪೊಲೀಸರು ತನಿಖೆ ನಡೆಸುತ್ತಿರುವ ಮಾಹಿತಿ ಪಡೆದುಕೊಂಡಿದ್ದ.

    ಎರಡು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆರೋಪಿ ರಾಜಭವನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡಿದ್ದ. ಪೊಲೀಸರ ಕಾರ್ಯವೈಖರಿ ಹಾಗೂ ಕ್ರಿಯಾಶೀಲತೆಯನ್ನು ತಿಳಿಯಲು ರಾಷ್ಟ್ರೀಯ ತನಿಖಾ ದಳದ ಕಂಟ್ರೋಲ್​ ರೂಮಿಗೆ ಕರೆ ಮಾಡಿ ಹುಸಿ ಬಾಂಬ್​ ಬೆದರಿಕೆ ಹಾಕಿದ್ದ. ಬಸ್‌ನಲ್ಲಿ ತೆರಳುವಾಗ ರಾಜಭವನ ಕಂಡು ಕರೆ ಮಾಡಿದ್ದೆ ಎಂದು ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿ ವಿರುದ್ಧ ಈ ಹಿಂದೆ ಯಾವುದೇ ಕ್ರಿಮಿನಲ್​ ಪ್ರಕರಣ ದಾಖಲಾಗಿಲ್ಲ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts