More

    ಇದ್ದಕ್ಕಿದ್ದಂತೆ ಗುಡ್ಡದಿಂದ ಕುಸಿದ ಬಂಡೆಗಳು; ಸೇತುವೆ ಮುರಿದುಬಿದ್ದು 9 ಸಾವು!

    ಶಿಮ್ಲಾ: ಪ್ರವಾಸಿ ತಾಣಗಳ ರಾಜ್ಯವಾಗಿರುವ ಹಿಮಾಚಲ ಪ್ರದೇಶದಲ್ಲಿ ನಡೆಯಬಾರದ ಘಟನೆಯೊಂದು ಭಾನುವಾರದಂದು ನಡೆದಿದೆ. ಗುಡ್ಡದ ಮೇಲ್ಭಾಗದಲ್ಲಿದ್ದ ಕಲ್ಲು ಬಂಡೆಗಳು ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದು, ಅದರಿಂದಾಗಿ ಸೇತುವೆಯೂ ಮುರಿದುಬಿದ್ದಿದೆ. ಘಟನೆಯಲ್ಲಿ 9 ಪ್ರವಾಸಿಗರು ಬಲಿಯಾಗಿರುವುದಾಗಿ ಹೇಳಲಾಗಿದೆ.

    ಸಾಂಗ್ಲಾ ಕಣಿವೆಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಸೇತುವೆಯ ಬಳಿ ಪ್ರವಾಸಿಗರ ವಾಹನಗಳಿದ್ದವು. ಅದರ ಮೇಲೆ ಬಂಡೆ ಉರುಳಿ ಬಿದ್ದಿದ್ದರಿಂದಾಗಿ ಅವರ 11 ಪ್ರವಾಸಿಗರಿಗೆ ಗಾಯವಾಗಿದೆ. ಅದರಲ್ಲಿ 9 ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಎಸ್​ಪಿ ಕಿನ್ನೌರ್ನ ಸಾಜು ರಾಮ್ ರಾಣಾ ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಾಳುವಾದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವೈದ್ಯರ ತಂಡವನ್ನೂ ಕರೆಸಲಾಗಿದೆ ಎಂದು ತಿಳಿಸಲಾಗಿದೆ.

    ಘಟನೆಯ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದುಕೊಂಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. (ಏಜೆನ್ಸೀಸ್)

    24 ಗಂಟೆಗಳಲ್ಲಿ 262 ತಾಲಿಬಾನ್ ಉಗ್ರರನ್ನು ಹೊಡೆದುರುಳಿಸಿದ ಅಫ್ಘಾನ್ ಸೇನೆ

    ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ನಾಳೆ ಭಾರತಕ್ಕೆ ವಾಪಸ್

    ಬಿಗ್​ಬಾಸ್ ಮಾಜಿ ಸ್ಪರ್ಧಿ ಕಾರು ಅಪಘಾತ; ಅಮೆರಿಕದಿಂದ ಬಂದಿದ್ದ ಸ್ನೇಹಿತೆ ಸ್ಥಳದಲ್ಲೇ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts