More

    24 ಗಂಟೆಗಳಲ್ಲಿ 262 ತಾಲಿಬಾನ್ ಉಗ್ರರನ್ನು ಹೊಡೆದುರುಳಿಸಿದ ಅಫ್ಘಾನ್ ಸೇನೆ

    ಕಾಬೂಲ್: 24 ಗಂಟೆಗಳಲ್ಲಿ 262 ತಾಲಿಬಾನ್ ಉಗ್ರರನ್ನು ಹೊಡೆದುರುಳಿಸಿರುವುದಾಗಿ ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಶನಿವಾರದಂದು ತಿಳಿಸಿದೆ. ದಾಳಿಯ ವೇಳೆ 176 ಉಗ್ರರಿಗೆ ಗಾಯವಾಗಿದ್ದು, 21 ಐಇಡಿ ಬಾಂಬ್​ಗಳನ್ನು ನಿಷ್ಕ್ರಿಯ ಮಾಡಿರುವುದಾಗಿ ತಿಳಿಸಲಾಗಿದೆ.

    ಅಮೆರಿಕ ಸೇನೆಯು ಅಫ್ಘಾನ್ ನೆಲದಿಂದ ಹಿಂದೆ ಸರಿದಾಗಿನಿಂದ ತಾಲಿಬಾನ್ ಉಗ್ರರು ರಾಷ್ಟ್ರವನ್ನು ತಮ್ಮ ಹಿಡಿತಕ್ಕೆ ತಂದುಕೊಳ್ಳಲು ಸಕಲ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಉಗ್ರಗಾಮಿ ಗುಂಪು ಭೂಪ್ರದೇಶದ ಅರ್ಧದಷ್ಟು ಭಾಗವನ್ನು ವಶಪಡಿಸಿಕೊಂಡಿದೆ ಎಂದು ಅಂದಾಜಿಸಲಾಗಿದೆ.

    “ಹಿಂಸಾಚಾರವನ್ನು ನಿಗ್ರಹಿಸಲು ಮತ್ತು ತಾಲಿಬಾನ್ ಚಳುವಳಿಗಳನ್ನು ಮಿತಿಗೊಳಿಸಲು ರಾಷ್ಟ್ರದ 31 ಪ್ರಾಂತ್ಯಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ” ಎಂದು ಆಂತರಿಕ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಕಾಬೂಲ್, ಪಂಜ್‌ಶೀರ್ ಮತ್ತು ನಂಗರ್‌ಹಾರ್‌ಗೆ ವಿನಾಯಿತಿ ನೀಡಲಾಗಿದೆ. ಈ ಸ್ಥಳಗಳನ್ನು ಹೊರೆತುಪಡಿಸಿ ಬೇರೆ ಸ್ಥಳಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 4 ಗಂಟೆಯವರೆಗೆ ಯಾವುದೇ ಚಲನೆಯನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ. (ಏಜೆನ್ಸೀಸ್)

    ಬಿಗ್​ಬಾಸ್ ಮಾಜಿ ಸ್ಪರ್ಧಿ ಕಾರು ಅಪಘಾತ; ಅಮೆರಿಕದಿಂದ ಬಂದಿದ್ದ ಸ್ನೇಹಿತೆ ಸ್ಥಳದಲ್ಲೇ ಸಾವು

    ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ನಾಳೆ ಭಾರತಕ್ಕೆ ವಾಪಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts