More

    ಬೆರಳೆರಡನ್ನು ಕತ್ತರಿಸಿಕೊಂಡ, ಬಾಯಿಗೆರಡು ಕೋರೆ ಸಿಕ್ಕಿಸಿಕೊಂಡ!; ಮೈಮೇಲಿದೆಂಥ ಆಟ ಈ ಮೈಖೇಲ್​ನದ್ದು!?

    ನವದೆಹಲಿ: ಗಾಡಿ ಅಲ್ಟರೇಷನ್​ ಮಾಡಿಕೊಳ್ಳುವುದನ್ನು ಕೇಳಿದ್ದೇವೆ. ಅದೇ ರೀತಿ ಇಲ್ಲೊಬ್ಬ ಬಾಡಿಯನ್ನು ಅಲ್ಟರೇಷನ್​ ಮಾಡಿಕೊಂಡಿದ್ದಾನೆ. ಅದನ್ನೇ ಹವ್ಯಾಸ ಮಾಡಿಕೊಂಡಿರುವ ಈತ ಎರಡು ಬೆರಳುಗಳನ್ನು ಕತ್ತರಿಸಿಕೊಂಡಿದ್ದಲ್ಲದೆ, ಬಾಯಿಗೆರಡು ಕೋರೆ ಸಿಕ್ಕಿಸಿಕೊಂಡು ಗಮನ ಸೆಳೆದಿದ್ದಾನೆ.

    ಮೈಖೇಲ್​ ಫರೊ ಡೊ ಪ್ರಾಡೋ ಎಂಬ ಬ್ರೆಜಿಲಿನ ಈ 44 ವರ್ಷದ ವ್ಯಕ್ತಿ ದೇಹವನ್ನು ಚಿತ್ರವಿಚಿತ್ರವಾಗಿ ಮಾರ್ಪಡಿಸಿಕೊಂಡಿದ್ದಲ್ಲದೆ, ತರಹೇವಾರಿ ಪಿಯರ್ಸಿಂಗ್ ಹಾಗೂ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾನೆ. ಕಳೆದ ವರ್ಷ ಇಂಥದ್ದೇ ವಿಷಯದಲ್ಲಿ ಸ್ಪರ್ಧೆಗೆ ಬಿದ್ದು ಮೂಗನ್ನು ಕತ್ತರಿಸಿಕೊಂಡಿದ್ದ ಈತ ಈ ಸಲ ಬೆರಳು ಕತ್ತರಿಸಿ, ಕೋರೆಗಳನ್ನು ಸಿಕ್ಕಿಸಿಕೊಂಡಿದ್ದಾನೆ. ಈ ಥರ ವಿಚಿತ್ರ ವಿಧಾನಕ್ಕೆ ಒಳಗಾಗಿರುವವರ ಪೈಕಿ ನನ್ನ ಪತಿ ಜಗತ್ತಿನಲ್ಲೇ ಮೂರನೇ ವ್ಯಕ್ತಿ ಎಂದು ಈತನ ಪತ್ನಿ ಹೇಳಿಕೊಂಡಿದ್ದಾಳೆ.

    ಇದನ್ನೂ ಓದಿ: ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

    ಈ ಸಲ ಮೈಖೇಲ್​ ತನ್ನ ಎಡಗೈನಲ್ಲಿನ ಉಂಗುರ ಬೆರಳು ಹಾಗೂ ಬಲಗೈನಲ್ಲಿನ ಮಧ್ಯ ಬೆರಳನ್ನು ಕತ್ತರಿಸಿಕೊಂಡಿದ್ದಲ್ಲದೆ, ಬೆಳ್ಳಿಯ ಎರಡು ಕೋರೆಹಲ್ಲುಗಳನ್ನು ದವಡೆಗೆ ಅಳವಡಿಸಿಕೊಂಡಿದ್ದಾನೆ. ಈತ 25 ವರ್ಷಗಳಿಂದ ಟ್ಯಾಟೂ ಆರ್ಟಿಸ್ಟ್ ಆಗಿದ್ದು, ಈತನ ಪತ್ನಿ ಬಾಡಿ ಮಾಡಿಫಿಕೇಷನ್​ನಲ್ಲಿ ಪರಿಣತಿ ಹೊಂದಿದ್ದು, ಬಹಳಷ್ಟು ಬದಲಾವಣೆ ಹಿಂದಿನ ರೂವಾರಿ ಆಕೆಯೇ ಎನ್ನಲಾಗಿದೆ. (ಏಜೆನ್ಸೀಸ್)

    ಬೆರಳೆರಡನ್ನು ಕತ್ತರಿಸಿಕೊಂಡ, ಬಾಯಿಗೆರಡು ಕೋರೆ ಸಿಕ್ಕಿಸಿಕೊಂಡ!; ಮೈಮೇಲಿದೆಂಥ ಆಟ ಈ ಮೈಖೇಲ್​ನದ್ದು!?
    ದೇಹ ಮಾರ್ಪಡಿಕೆ ಬಳಿಕ ಮೈಖೇಲ್​

    18 ತಿಂಗಳ ಮಗುವಿಗಾಗಿ ಏಳೇ ದಿನಗಳಲ್ಲಿ ಸಂಗ್ರಹವಾಯ್ತು 18 ಕೋಟಿ ರೂ.; ಬೇಡ ಎಂಬಷ್ಟು ಬಂತು ಹಣ!

    ಭಾರತೀಯ ಯೋಧರಿಂದಲೇ ಪಾಕ್​ಗೆ ಮಾಹಿತಿ!; ಸಿಕ್ಕಿಬಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts