More

    3ನೇ ತ್ರೈಮಾಸಿಕದಲ್ಲಿ ರೂ 4,350 ಕೋಟಿ ಲಾಭ ಗಳಿಸಿದ ಎಚ್​ಸಿಎಲ್​: ಶಿವ ನಾಡರ್ ಈ​ ಕಂಪನಿ ಆರಂಭಿಸಿದ್ದು ಗ್ಯಾರೇಜ್​ನಲ್ಲಿ…

    ನವದೆಹಲಿ: ಭಾರತದ ಮೂರನೇ-ಅತಿದೊಡ್ಡ ಐಟಿ ಸೇವೆಗಳ ಕಂಪನಿ ಎಚ್​ಸಿಎಲ್​ ಟೆಕ್ನಾಲಜೀಸ್ ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ 4,350 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ, ಇದು ವರ್ಷದಿಂದ ವರ್ಷಕ್ಕೆ ಶೇಕಡಾ 6ರಷ್ಟು ಹೆಚ್ಚಳವಾಗಿದೆ. ಇದು ವಿಶ್ಲೇಷಕರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ಲಾಭವನ್ನು ಮಾಡಿದೆ.

    ಕಂಪನಿಯ ಆದಾಯವು 28,446 ಕೋಟಿ ರೂಪಾಯಿ ಆಗಿದ್ದು, ಶೇಕಡಾ 6.5 ಪ್ರತಿಶತದಷ್ಟು ವಾರ್ಷಿಕ ಪ್ರಗತಿ ಕಂಡಿದೆ.

    ಎಚ್​ಸಿಎಲ್​ ಕಂಪನಿಯ ಸ್ಥಾಪಕ ಶಿವ ನಾಡರ್. ಇವರು ಭಾರತದ ಮೂರನೇ ಅತಿದೊಡ್ಡ ಶ್ರೀಮಂತ ವ್ಯಕ್ತಿ. ಫೋರ್ಬ್ಸ್ ಪ್ರಕಾರ ನಾಡರ್ ಅವರ ಆಸ್ತಿ ಮೌಲ್ಯ 2,43,746.70 ಕೋಟಿ ರೂಪಾಯಿ ಶಿವ ನಾಡರ್ ತಮ್ಮ ಗ್ಯಾರೇಜ್‌ನಲ್ಲಿ ಐವರು ಸ್ನೇಹಿತರೊಂದಿಗೆ ಎಚ್​ಸಿಎಲ್​ ಪ್ರಾರಂಭಿಸಿದರು. ಅವರು ಕಂಪನಿಯನ್ನು ಪ್ರಾರಂಭಿಸಿದಾಗ, ಅದು ಪ್ರಾಥಮಿಕವಾಗಿ ಕ್ಯಾಲ್ಕುಲೇಟರ್‌ ಮತ್ತು ಮೈಕ್ರೊಪ್ರೊಸೆಸರ್‌ಗಳನ್ನು ತಯಾರಿಸುತ್ತಿತ್ತು. ಅಲ್ಲಿಂದ ಇದು 11.8 ಶತಕೋಟಿ ಡಾಲರ್‌ಗಳಷ್ಟು ವಾರ್ಷಿಕ ಆದಾಯದೊಂದಿಗೆ ಭಾರತದ ಅಗ್ರ ಐಟಿ ಸಂಸ್ಥೆಗಳಲ್ಲಿ ಒಂದಾಗಿದೆ.

    ಶಿವ ನಾಡರ್​ ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಂಪನಿಯನ್ನು ಮುನ್ನಡೆಸಿದ ನಂತರ ಕಂಪನಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ಅವರ ಮಗಳು ರೋಶನಿ ನಾಡರ್ ಈಗ ಎಚ್​ಸಿಎಲ್​ ಅಧ್ಯಕ್ಷರಾಗಿದ್ದು, ಅವರು ಕೂಡ ಭಾರತದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರು. ಈ ಕಂಪನಿಯು 60 ಕ್ಕೂ ಹೆಚ್ಚು ದೇಶಗಳಿಗೆ ವಿಸ್ತರಿಸಿದ್ದು, 2,22,000 ಕ್ಕೂ ಹೆಚ್ಚು ಜನರನ್ನು ಉದ್ಯೋಗಿಗಳನ್ನಾಗಿ ನೇಮಕ ಮಾಡಿಕೊಂಡಿದೆ.

    ದೇಶದ ಪ್ರಮುಖ ಪರೋಪಕಾರಿಗಳಲ್ಲಿ ಶಿವ ನಾಡಾರ್ ಕೂಡ ಒಬ್ಬರು. ಇವರ ಶಿವ ನಾಡರ್ ಫೌಂಡೇಶನ್‌ಗೆ 1.1 ಶತಕೋಟಿ ಡಾಲರ್‌ಗಳನ್ನು ದೇಣಿಗೆ ನೀಡಿದ್ದಾರೆ. ಶಿವ ನಾಡರ್ ಅವರು ತಮಿಳುನಾಡಿನ ತೂತುಕುಡಿ ಜಿಲ್ಲೆಯವರು. ಅವರು ಪಿಎಸ್​ಜಿ ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಓದಿದರು. ನಾಡರ್ ಅವರಿಗೆ 2008 ರಲ್ಲಿ ಪದ್ಮಭೂಷಣ ಪ್ರಶಸ್ತಿ ಒಲಿದುಬಂದಿದೆ.

    ಶಿವ ನಾಡರ್ 1967 ರಲ್ಲಿ ವಾಲ್‌ಚಂದ್ ಗ್ರೂಪ್‌ನಲ್ಲಿ ಉದ್ಯೋಗ ಪಡೆದುಕೊಂಡು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1976 ರಲ್ಲಿ 1,87,000 ರೂಪಾಯಿ ಹೂಡಿಕೆಯೊಂದಿಗೆ ಎಚ್​ಸಿಎಲ್​ ಕಂಪನಿಯನ್ನು ಸ್ಥಾಪಿಸಿದರು ಎಂಬುದು ಗಮನಾರ್ಹವಾಗಿದೆ.

    ಭಾರತದ ಚಿಲ್ಲರೆ ಹಣದುಬ್ಬರ 4 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ: ಇದರ ಅರ್ಥವೇನು?

    ಸ್ಮಾಲ್ ಕ್ಯಾಪ್‌ನಿಂದ ಮಿಡ್ ಕ್ಯಾಪ್​ಗೆ ಬಡ್ತಿ: ಈ ಸ್ಟಾಕ್​ಗಳನ್ನು ನೀವು ಹೊಂದಿದ್ದರೆ ಭರ್ಜರಿ ಲಾಭ

    ಮೂರನೇ ತ್ರೈಮಾಸಿಕ: ವಿಪ್ರೊ ಲಾಭ ಶೇಕಡಾ 12ರಷ್ಟು ಕುಸಿತ

    ಮೂರನೇ ತ್ರೈಮಾಸಿಕ: ವಿಪ್ರೊ ಲಾಭ ಶೇಕಡಾ 12ರಷ್ಟು ಕುಸಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts