More

    ಮೂರನೇ ತ್ರೈಮಾಸಿಕ: ವಿಪ್ರೊ ಲಾಭ ಶೇಕಡಾ 12ರಷ್ಟು ಕುಸಿತ

    ನವದೆಹಲಿ: ಬೆಂಗಳೂರು ಮೂಲದ ಐಟಿ ದಿಗ್ಗಜ ಕಂಪನಿ ವಿಪ್ರೊ ಆದಾಯ ಮತ್ತು ಲಾಭವು ಪ್ರಸ್ತುತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (2023ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗೆ) ಕುಸಿತ ಕಂಡಿದೆ. ಈ ಅವಧಿಯಲ್ಲಿ ನಿವ್ವಳ ಲಾಭವು ಶೇಕಡಾ 12 ರಷ್ಟು ಇಳಿಕೆಯಾಗಿದ್ದು ರೂ 2,694 ಕೋಟಿಗೆ ತಲುಪಿದೆ. ಕಂಪನಿಯ ಆದಾಯ ಶೇ.4.4ರಷ್ಟು ಕುಸಿದು 22,205 ಕೋಟಿ ರೂಪಾಯಿ ಮುಟ್ಟಿದೆ.

    ಡಿಸೆಂಬರ್‌ನಲ್ಲಿ ಕೊನೆಗೊಳ್ಳುವ ಪ್ರಸ್ತುತ ಹಣಕಾಸು ವರ್ಷದ ಒಂಬತ್ತು ತಿಂಗಳುಗಳನ್ನು ಪರಿಶೀಲಿಸಿದಾಗ, ಕಂಪನಿಯ ಒಟ್ಟು ಆದಾಯದಲ್ಲಿ ಶೇಕಡಾ 0.4 ಏರಿಕೆ ಕಂಡಿದ್ದು, 67,552 ಕೋಟಿ ರೂಪಾಯಿಗಳಿಗೆ ತಲುಪಿದೆ, ಜೊತೆಗೆ ನಿವ್ವಳ ಲಾಭದಲ್ಲಿ ಅಂದಾಜು ಶೇಕಡಾ 1 ರಷ್ಟು ಕುಸಿತವಾಗಿದ್ದು 8,211 ಕೋಟಿ ರೂಪಾಯಿಗಳಿಗೆ ತಲುಪಿದೆ.

    ಏತನ್ಮಧ್ಯೆ, ಕಂಪನಿಯ ನಿರ್ದೇಶಕರ ಮಂಡಳಿಯು ಪ್ರತಿ ಷೇರಿಗೆ ಒಂದು ರೂಪಾಯಿಯ ಮಧ್ಯಂತರ ಲಾಭಾಂಶ ನೀಡಲು ಪ್ರಸ್ತಾಪಿಸಿದೆ.

    ನಾಲ್ಕನೇ ತ್ರೈಮಾಸಿಕದಲ್ಲಿ ವಿಪ್ರೋ ತನ್ನ ಐಟಿ ಸೇವೆಗಳ ವ್ಯವಹಾರದಿಂದ 2.62 ಶತಕೋಟಿಯಿಂದ 2.67 ಶತಕೋಟಿ ಡಾಲರ್​ವರೆಗೆ ಆದಾಯವನ್ನು ನಿರೀಕ್ಷಿಸಿದೆ.

    ಸ್ಮಾಲ್ ಕ್ಯಾಪ್‌ನಿಂದ ಮಿಡ್ ಕ್ಯಾಪ್​ಗೆ ಬಡ್ತಿ: ಈ ಸ್ಟಾಕ್​ಗಳನ್ನು ನೀವು ಹೊಂದಿದ್ದರೆ ಭರ್ಜರಿ ಲಾಭ

    ಹೊಸ ಗರಿಷ್ಠ ಮಟ್ಟ ತಲುಪಿ ದಾಖಲೆ ಬರೆದ ಸೂಚ್ಯಂಕ: ಐಟಿ ಷೇರುಗಳ ಬೆಲೆ ಗಗನಮುಖಿಯಾಗಿದ್ದೇಕೆ?

    ಹೊಸ ಗರಿಷ್ಠ ಮಟ್ಟ ತಲುಪಿ ದಾಖಲೆ ಬರೆದ ಸೂಚ್ಯಂಕ: ಐಟಿ ಷೇರುಗಳ ಬೆಲೆ ಗಗನಮುಖಿಯಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts