More

    ಹೊಸ ಗರಿಷ್ಠ ಮಟ್ಟ ತಲುಪಿ ದಾಖಲೆ ಬರೆದ ಸೂಚ್ಯಂಕ: ಐಟಿ ಷೇರುಗಳ ಬೆಲೆ ಗಗನಮುಖಿಯಾಗಿದ್ದೇಕೆ?

    ಮುಂಬೈ: ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್​ಇ ಮತ್ತು ನಿಫ್ಟಿ ಸೂಚ್ಯಂಕಗಳು ಶುಕ್ರವಾರ ತಮ್ಮ ತಾಜಾ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದವು. ಟಿಸಿಎಸ್ ಮತ್ತು ಇನ್ಫೋಸಿಸ್ ಸಂಸ್ಥೆಗಳು ಹಣಕಾಸು ಫಲಿತಾಂಶಗಳು ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಮಟ್ಟ ಮುಟ್ಟಿದ ಹಿನ್ನೆಲೆಯಲ್ಲಿ ಐಟಿ ಷೇರುಗಳಲ್ಲಿ ತೀವ್ರ ಏರಿಕೆ ಕಂಡುಬಂದಿತು.

    30-ಷೇರುಗಳ ಬಿಎಸ್‌ಇ ಸೂಚ್ಯಂಕವು 847.27 ಅಂಕಗಳು ಅಥವಾ ಶೇಕಡಾ 1.18ರಷ್ಟು ಏರಿಕೆ ಕಂಡು 72,568.45 ರ ಹೊಸ ಗರಿಷ್ಠ ಮಟ್ಟವನ್ನು ತಲುಪಿತು. ದಿನದ ವಹಿವಾಟಿನ ನಡುವೆ ಇದು 999.78 ಅಂಕಗಳ ಏರಿಕೆ ಕಂಡು 72,720.96ಕ್ಕೆ ತಲುಪಿ ಹೊಸ ಇಂಟ್ರಾ-ಡೇ ದಾಖಲೆಯನ್ನು ನಿರ್ಮಿಸಿತು.

    ನಿಫ್ಟಿ ಸೂಚ್ಯಂಕವು 247.35 ಅಂಕಗಳು ಅಥವಾ ಶೇಕಡಾ 1.14 ರಷ್ಟು ಏರಿಕೆಯಾಗಿ 21,894.55 ರ ಜೀವಿತಾವಧಿಯ ಗರಿಷ್ಠ ಮಟ್ಟವನ್ನು ತಲುಪಿತು. ದಿನದ ವಹಿವಾಟಿನ ನಡುವೆ ಇದು 281.05 ಅಂಕಗಳ ಏರಿಕೆ ಕಂಡು 21,928.25 ರ ಹೊಸ ಇಂಟ್ರಾ-ಡೇ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತು.

    ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯ ಡಿಸೆಂಬರ್ ತ್ರೈಮಾಸಿಕ ಗಳಿಕೆಯು ಮಾರುಕಟ್ಟೆಯ ನಿರೀಕ್ಷೆಗಳಿಗೆ ಅನುಗುಣವಾಗಿ ಬಂದ ಹಿನ್ನೆಲೆಯಲ್ಲಿ ಈ ಕಂಪನಿಯ ಷೇರುಗಳು ಶುಕ್ರವಾರ ಶೇಕಡಾ 8 ರಷ್ಟು ಹೆಚ್ಚಳ ಕಂಡವು.

    ಅತಿದೊಡ್ಡ ಸಾಫ್ಟ್‌ವೇರ್ ರಫ್ತುದಾರ ಭಾರತೀಯ ಐಟಿ ಕಂಪನಿಯಾದ ಟಿಸಿಎಸ್​, ಡಿಸೆಂಬರ್ ತ್ರೈಮಾಸಿಕದಲ್ಲಿ ರೂ 11,735 ಕೋಟಿಗೆ ನಿವ್ವಳ ಆದಾಯ ಗಳಿಸುವ ಮೂಲಕ ಶೇಕಡಾ 8.2ರಷ್ಟು ಬೆಳವಣಿಗೆಯನ್ನು ವರದಿ ಮಾಡಿದ ಹಿನ್ನೆಲೆಯಲ್ಲಿ ಈ ಕಂಪನಿಯ ಷೇರುಗಳು 4 ಪ್ರತಿಶತದಷ್ಟು ಏರಿದವು.

    ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ನಾಲಜೀಸ್, ವಿಪ್ರೋ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಲಾರ್ಸೆನ್ ಮತ್ತು ಟೂಬ್ರೊ ಮೊದಲಾದ ಕಂಪನಿಗಳ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು.

    ಬಜಾಜ್ ಫಿನ್‌ಸರ್ವ್, ಪವರ್ ಗ್ರಿಡ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಹಿನ್ನಡೆ ಅನುಭವಿಸಿದವು.

    ಬಿಎಸ್‌ಇ ಮಾಹಿತಿ ತಂತ್ರಜ್ಞಾನ ಸೂಚ್ಯಂಕವು (ಅಂದರೆ, ಐಟಿ ಕಂಪನಿಗಳ ಷೇರು ಸೂಚ್ಯಂಕ)
    ಶೇ 5.06 ರಷ್ಟು ಏರಿಕೆ ಕಂಡಿದೆ.

    ಏಷ್ಯಾದ ಮಾರುಕಟ್ಟೆಗಳ ಪೈಕಿ, ಟೋಕಿಯೊ ಲಾಭ ಗಳಿಸಿದರೆ, ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಕುಸಿತ ಕಂಡವು.

    ಐರೋಪ್ಯ ಮಾರುಕಟ್ಟೆಗಳು ಲಾಭದಲ್ಲಿ ವಹಿವಾಟು ನಡೆಸಿದವು. ಅಮೆರಿಕ ಮಾರುಕಟ್ಟೆಗಳು ಗುರುವಾರ ಬಹುತೇಕ ಲಾಭ ಕಂಡವು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ 865 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು ಗುರುವಾರ 63.47 ಅಂಕ ಏರಿಕೆಯಾಗಿ 71,721.18 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 28.50 ಅಂಕ ಏರಿಕೆ ಕಂಡು 21,647.20 ಕ್ಕೆ ತಲುಪಿತ್ತು.

    ವಿವಿಧ ಸೂಚ್ಯಂಕಗಳು

    ಬಿಎಸ್​ಇ ಮಿಡ್​ ಕ್ಯಾಪ್​ ಸೂಚ್ಯಂಕ: 37,875.43 (136.21 ಅಂಕ ಹೆಚ್ಚಳ)
    ಬಿಎಸ್​ಇ ಸ್ಮಾಲ್​ ಕ್ಯಾಪ್​ ಸೂಚ್ಯಂಕ: 44,503.70 (182.02 ಅಂಕ ಹೆಚ್ಚಳ)
    ನಿಫ್ಟಿ ಮಿಡ್​ ಕ್ಯಾಪ್​ 100 ಸೂಚ್ಯಂಕ: 47,512.60 (175.3 ಅಂಕ ಹೆಚ್ಚಳ)
    ನಿಫ್ಟಿ ಸ್ಮಾಲ್​ ಕ್ಯಾಪ್​ 100 ಸೂಚ್ಯಂಕ: 15,544.65 (68.2 ಅಂಕ ಹೆಚ್ಚಳ)
    ನಿಫ್ಟಿ ಸ್ಮಾಲ್​ ಕ್ಯಾಪ್​ 250 ಸೂಚ್ಯಂಕ: 14,552.75 (54.2 ಅಂಕ ಹೆಚ್ಚಳ)

    ಆಕಾಶ್-ಎನ್‌ಜಿ ಕ್ಷಿಪಣಿಯ ಪರೀಕ್ಷೆ ಯಶಸ್ವಿ: ದೇಶದ ವಾಯು ರಕ್ಷಣಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ

    ರಾಮ ಮಂದಿರ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ: ನಾಲ್ವರು ಶಂಕರಾಚಾರ್ಯರ ಒಲವು ನಿಲುವುಗಳೇನು?

    ಸ್ಪರ್ಧೆಗೆ ಹಲವು ಬಿಜೆಪಿ ಸಂಸದರ ನಿರಾಸಕ್ತಿ: ರಾಜ್ಯದಲ್ಲಿ ಕಣಕ್ಕಿಳಿಯಲಿವೆ 11 ಹೊಸ ಮುಖಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts