More

    ರಾಮ ಮಂದಿರ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ: ನಾಲ್ವರು ಶಂಕರಾಚಾರ್ಯರ ಒಲವು ನಿಲುವುಗಳೇನು?

    ನವದೆಹಲಿ: ಸನಾತನ ಹಿಂದೂ ಧರ್ಮದ ಉನ್ನತ ಆಧ್ಯಾತ್ಮಿಕ ನಾಯಕರಾದ ನಾಲ್ವರು ಶಂಕರಾಚಾರ್ಯರು ಜನವರಿ 22 ರಂದು ಅಯೋಧ್ಯೆಯಲ್ಲಿ ಭಗವಾನ್ ರಾಮನ ವಿಗ್ರಹದ ‘ಪ್ರಾಣ ಪ್ರತಿಷ್ಠಾ’ (ಪ್ರತಿಷ್ಠಾಪನೆ) ಸಮಾರಂಭದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ, ಈ ನಾಲ್ವರ ಪೈಕಿ ಮೂವರು ಮೂವರು ಸಮಾರಂಭವನ್ನು ಬೆಂಬಲಿಸುತ್ತಿದ್ದರೂ ಅಲ್ಲಿ ಅನುಸರಿಸುತ್ತಿರುವ ಆಚರಣೆಗಳಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

    ಈ ಸಮಾರಂಭದಲ್ಲಿ ತಾವು ಭಾಗವಹಿಸದಿರುವುದು ರಾಮನ ಮೇಲಿನ ಗೌರವದ ನಿರಾಕರಣೆಯಲ್ಲ ಅಥವಾ ತಾವು “ಮೋದಿ ವಿರೋಧಿ”ಯೂ ಅಲ್ಲ ಎಂದು ನಾಲ್ವರು ಶಂಕರಾಚಾರ್ಯರು ಸ್ಪಷ್ಟಪಡಿಸಿದ್ದಾರೆ.

    ತಾವು ಈ ಸಮಾರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದೇವೆ ಎಂಬ ಮಾಧ್ಯಮ ವರದಿಗಳನ್ನು “ತಪ್ಪು” ಎಂದು ಇದೇ ವೇಳೆ ಶಂಕರಾಚಾರ್ಯರು ಹೇಳಿದ್ದಾರೆ.

    ಹಿಂದೂ ಧರ್ಮದ ಅದ್ವೈತ ವೇದಾಂತ ಸಂಪ್ರದಾಯದ ಅನುಯಾಯಿಯಾಗಿದ್ದ ಎಂಟನೇ ಶತಮಾನದ ಹಿಂದೂ ಸಂತ ಆದಿ ಶಂಕರರಿಂದ ಸ್ಥಾಪಿಸಲ್ಪಟ್ಟ ನಾಲ್ಕು ಪ್ರಮುಖ ಮಠಗಳಿಗೆ ಶಂಕರಾಚಾರ್ಯರು ಮುಖ್ಯಸ್ಥರಾಗಿದ್ದಾರೆ.

    ನಾಲ್ಕು ಮಠಗಳೆಂದರೆ ಜ್ಯೋತಿರ್ ಮಠ (ಜೋಶಿಮಠ, ಉತ್ತರಾಖಂಡ), ಗೋವರ್ಧನ ಮಠ (ಪುರಿ, ಒರಿಸ್ಸಾ), ಶೃಂಗೇರಿ ಶಾರದ ಪೀಠ (ಶೃಂಗೇರಿ, ಕರ್ನಾಟಕ), ಮತ್ತು ದ್ವಾರಕಾ ಶಾರದ ಪೀಠ (ದ್ವಾರಕಾ, ಗುಜರಾತ್). ಈ ಆಶ್ರಮಗಳು ನಾಲ್ಕು ದಿಕ್ಕುಗಳಲ್ಲಿ ನೆಲೆಗೊಂಡಿದ್ದು, ಭಾರತದ ಅತ್ಯಂತ ಪೂಜ್ಯ ಯಾತ್ರಾ ಸ್ಥಳಗಳಾಗಿವೆ.

    ಶಂಕರಾಚಾರ್ಯರು ಹೇಳಿದ್ದೇನು?:

    ಪುರಿಯ ಗೋವರ್ಧನ ಮಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ರಾಮ ಮಂದಿರದ ಪ್ರತಿಷ್ಠಾಪನೆಗೆ ಅನುಸರಿಸುತ್ತಿರುವ ಆಚರಣೆಗಳು “ಶಾಸ್ತ್ರಗಳಿಗೆ ವಿರುದ್ಧವಾದ” ಕಾರಣದಿಂದ ರಾಮ ಮಂದಿರದ ಕಾರ್ಯಕ್ರಮದಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

    ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ದಿನಾಂಕವಿಲ್ಲದ ವೀಡಿಯೊದಲ್ಲಿ, ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರದ ಬಗ್ಗೆ “ಯಾವುದೇ ದ್ವೇಷವಿಲ್ಲ” ಎಂದು ಒತ್ತಿ ಹೇಳಿದ್ದರೂ “ತಮ್ಮ ಸ್ಥಾನದ ಘನತೆಯ ಬಗ್ಗೆ ಜಾಗೃತರಾಗಿದ್ದಾರೆ” ಎಂದು ತಿಳಿಸಿದ್ದಾರೆ.

    “ಮರ್ಯಾದಾ ಪುರುಷೋತ್ತಮ ರಾಮನಿಗೆ ಗೌರವ ಸಲ್ಲಿಸಬೇಕಾದರೆ ಅದು ಶಾಸ್ತ್ರಾನುಸಾರವಾಗಿರಬೇಕು. ನಾನು ಪ್ರತಿಭಟಿಸುವುದಿಲ್ಲ, ಆದರೆ ಹೋಗುವುದಿಲ್ಲ. ಇದು ಸಂತೋಷದ ವಿಷಯ. ಗೌರವ ಮತ್ತು ಪೂಜೆ ಇರಬೇಕು. ಧರ್ಮಗ್ರಂಥಗಳ ಪ್ರಕಾರ… ಆ ಕಾರ್ಯಕ್ರಮಕ್ಕೆ ಹೋಗಿ ನಾನು ಏನು ಮಾಡಬೇಕು?” ಎಂದು ಅವರು ಹೇಳಿದ್ದಾರೆ.

    ಕೆಲವು ದಿನಗಳ ನಂತರ, ಜ್ಯೋತಿರ್ ಮಠ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಕೂಡ ದೇವಾಲಯದ ಉದ್ಘಾಟನೆಯ ಆಚರಣೆಗಳನ್ನು ಶಾಸ್ತ್ರದ ಪ್ರಕಾರ ಮಾಡುತ್ತಿಲ್ಲ ಎಂದು ಹೇಳಿದರು.

    ಅಯೋಧ್ಯೆ ದೇಗುಲ ನಿರ್ಮಾಣದ ಉಸ್ತುವಾರಿ ವಹಿಸಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು, ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೂ ಮುನ್ನ ದೇಗುಲದ ನಿರ್ವಹಣೆಯನ್ನು ರಮಾನಂದ ಸಮುದಾಯಕ್ಕೆ ಹಸ್ತಾಂತರಿಸಬೇಕು ಎಂದು ಹೇಳಿದ್ದಾರೆ.

    ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರೈ ಅವರು ರಾಮ ಮಂದಿರವು ವೈಷ್ಣವ ಪಂಗಡವಾದ ರಮಾನಂದ ಸಂಪ್ರದಾಯಕ್ಕೆ ಸೇರಿದೆ. ಸನ್ಯಾಸಿಗಳಿಗೆ ಅಥವಾ ಶೈವ ಅಥವಾ ಶಕ್ತಿ ಪಂಥಗಳಿಗೆ ಸೇರಿದ್ದಲ್ಲ ಎಂದು ಹೇಳಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.

    ಮಂದಿರವು ಇನ್ನೂ ನಿರ್ಮಾಣ ಹಂತದಲ್ಲಿದ್ದಾಗ ಶ್ರೀರಾಮನ ವಿಗ್ರಹಗಳನ್ನು ಸ್ಥಾಪಿಸುವುದು ಶಾಸ್ತ್ರಗಳ “ಅಜ್ಞಾನದ ದೊಡ್ಡ ಕಾರ್ಯ” ಎಂದು ಜ್ಯೋತಿರ್ ಮಠ ಶಂಕರಾಚಾರ್ಯರು ಟೀಕಿಸಿದ್ದಾರೆ.

    ರಾಮ ಮಂದಿರದ ಮೊದಲ ಮಹಡಿ ಮತ್ತು ಗರ್ಭಗುಡಿ ಪೂರ್ಣಗೊಂಡಿದ್ದು, ಮಂದಿರ ಸಂಪೂರ್ಣ ಸಿದ್ಧಗೊಳ್ಳಲು ಇನ್ನೂ ಎರಡು ವರ್ಷ ಬೇಕಾಗುತ್ತದೆ.

    ‘ಸುಳ್ಳು ಮಾಹಿತಿ ಹರಡಲಾಗುತ್ತಿದೆ’:

    ಶೃಂಗೇರಿ ಪೀಠದ ಶಂಕರಾಚಾರ್ಯ ಸ್ವಾಮಿ ಭಾರತೀ ತೀರ್ಥರು ಮತ್ತು ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಅವರ ಮಾಧ್ಯಮಗಳ ಒಂದು ವಿಭಾಗವು ‘ಪ್ರಾಣ ಪ್ರತಿಷ್ಠಾ’ ಸಮಾರಂಭ ಕುರಿತು ತಮ್ಮ ವಿರುದ್ಧ ಎಂದು ಸುಳ್ಳು ಮಾಹಿತಿ ಹರಡುತ್ತಿದೆ ಎಂದು ಹೇಳಿದೆ. ಪ್ರತಿಪಕ್ಷಗಳು ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಈ ವಿಷಯವನ್ನು ಬಳಸಿಕೊಂಡಿವೆ ಎಂದು ಅದು ಹೇಳಿದೆ.

    ರಾಮ ಮಂದಿರ ಉದ್ಘಾಟನೆಯು ಸನಾತನ ಧರ್ಮದ ಅನುಯಾಯಿಗಳಿಗೆ ಸಂತಸದ ವಿಷಯ ಎಂದು ಶೃಂಗೇರಿ ಮಠ ಶಂಕರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    “ಇದೊಂದು ಪುಣ್ಯ ಸಂದರ್ಭವಾಗಿದ್ದು, ಎಲ್ಲರೂ ಭಾಗವಹಿಸಿ ಆನಂದಿಸಬೇಕು. ಕೆಲವರು ನನಗೆ ಸಂಬಂಧಿಸಿದ ಸುಳ್ಳು ಮಾಹಿತಿಗಳನ್ನು ಹರಡುತ್ತಿದ್ದಾರೆ, ಅದು ಸರಿಯಲ್ಲ. ಅಯೋಧ್ಯೆಯಲ್ಲಿ ಈ ಕಾರ್ಯಕ್ರಮವನ್ನು ನಾವು ಎಂದಿಗೂ ವಿರೋಧಿಸಿಲ್ಲ ಮತ್ತು ಜನರು ಇಂತಹ ಸುಳ್ಳು ಪ್ರಚಾರಗಳಿಗೆ ಯಾವುದೇ ಪ್ರಾಮುಖ್ಯತೆ ನೀಡಬಾರದು” ಎಂದು ಅವರು ಹೇಳಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

    ಮೋದಿ ಉದ್ಘಾಟಿಸಲಿರುವ ಭಾರತದ ಅತ್ಯಂತ ಉದ್ದದ ಸಮುದ್ರ ಸೇತುವೆ ವೈಶಿಷ್ಟ್ಯಗಳೇನು?

    ಚುನಾವಣೆ ಚಾಣಕ್ಯ ಸುನೀಲ್​ ಕನುಗೋಲು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಅಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts