More

    ಶ್ರೀಉಡಸಲಮ್ಮ ದೇವಿ ಶಿಲಾವಿಗ್ರಹ ಪ್ರತಿಷ್ಠಾಪನೆ 17ಕ್ಕೆ

    ತರೀಕೆರೆ: ಕುಡ್ಲೂರು ಗ್ರಾಮದ ಶ್ರೀಉಡಸಲಮ್ಮ ದೇವಿ ನೂತನ ಶಿಲಾವಿಗ್ರಹ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಕಾರ್ಯಕ್ರಮ ಏ.17ರಿಂದ 19ರವರೆಗೆ ನಡೆಯಲಿದೆ.
    17ರಂದು ಬೆಳಗ್ಗೆ ಗ್ರಾಮದೇವತೆ ಶ್ರೀಉಡಸಲಮ್ಮ ಹಾಗೂ ಶ್ರೀವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ಶ್ರೀ ಕ್ಷೇತ್ರ ಕಲ್ಲತ್ತಿಗಿರಿಯಲ್ಲಿ ಪುಣ್ಯ ಮತ್ತು ಗಂಗಾಸ್ನಾನ ಮಾಡಿಸುವ ಮೂಲಕ ಧಾರ್ಮಿಕ ವಿಧಿ ವಿಧಾನಗಳಿಗೆ ಚಾಲನೆ ನೀಡಲಾಗುವುದು.
    ಏ.18ರಂದು ದೇಗುಲ ಆವರಣದಲ್ಲಿ ಗಂಗಾಪೂಜೆ, ಗಣಪತಿ ಪೂಜೆ, ಪಂಚಕಳಸ ಪೂಜೆ, ವಾಸ್ತು ಪೂಜೆ, ನವಗ್ರಹ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ಗಣಹೋಮ, ವಾಸ್ತು ನವಗ್ರಹ ಹೋಮದ ಬಳಿಕ ಲಘು ಪೂರ್ಣಾಹುತಿ, ಮಹಾ ಮಂಗಳಾರತಿ ವಿವತ್ತಾಗಿ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಗ್ರಾಮದ ರಾಜ ಬೀದಿಗಳಲ್ಲಿ ಶ್ರೀಉಡಸಲಮ್ಮ ದೇವಿಯ ನೂತನ ವಿಗ್ರಹದ ಜತೆ ಗ್ರಾಮ ದೇವರುಗಳ ಉತ್ಸವ ವೈಭವದಿಂದ ನಡೆಯಲಿದೆ. ರಾತ್ರಿ 10ಕ್ಕೆ ಅಮ್ಮನವರನ್ನು ತೈಲಾಧಿವಾಸ, ಶಯನಾಧಿವಾಸಕ್ಕೆ ಬಿಡಲಾಗುವುದು.
    19ರಂದು ಬೆಳಗ್ಗೆ ಬ್ರಾಹ್ಮಿ ಮಹೂರ್ತದಲ್ಲಿ ಶ್ರೀಉಡಸಲಮ್ಮ ದೇವಿಯವರ ಅಷ್ಟಬಂಧ ಪ್ರತಿಷ್ಟಾಪನೆ, ನೇತ್ರ ಮಿಲನ, ಕದಲಿವೃಕ್ಷ ವೇಧವ, ಬಲಿಕರಣದ ಬಳಿಕ ಅಭಿಷೇಕ, ಅಲಂಕಾರ, ದುರ್ಗಾಹೋಮ, ಪೂರ್ಣಾಹುತಿ, ಹಾಗೂ ಮಹಾ ಮಂಗಳಾರತಿ ನೆರವೇರಲಿದೆ. ಕಾರ್ಯಕ್ರಮಕ್ಕೆ ಆಗಮಿಸಲಿರುವ ಭಕ್ತಾಧಿಗಳಿಗೆ ಮಧ್ಯಾಹ್ನ 12.30ರಿಂದ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀ ವೀರಭದ್ರೇಶ್ವರ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts