More

    ಸ್ಮಾಲ್ ಕ್ಯಾಪ್‌ನಿಂದ ಮಿಡ್ ಕ್ಯಾಪ್​ಗೆ ಬಡ್ತಿ: ಈ ಸ್ಟಾಕ್​ಗಳನ್ನು ನೀವು ಹೊಂದಿದ್ದರೆ ಭರ್ಜರಿ ಲಾಭ

    ಮುಂಬೈ: ಮ್ಯೂಚುಯಲ್ ಫಂಡ್ ಉದ್ಯಮದ ಸ್ವಯಂ-ನಿಯಂತ್ರಕ ಸಂಸ್ಥೆಯಾದ ಭಾರತದ ಮ್ಯೂಚುಯಲ್ ಫಂಡ್ಸ್ ಸಂಘವು (AMFI) ಪ್ರತಿ ವರ್ಷಕ್ಕೆ ಎರಡು ಬಾರಿ ಲಾರ್ಜ್​ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸ್ಟಾಕ್‌ಗಳ ನವೀಕರಿಸಿದ ಪಟ್ಟಿಯನ್ನು ಪ್ರಕಟಿಸುತ್ತದೆ.

    ಇತ್ತೀಚಿನ ಪಟ್ಟಿಯನ್ನು ಕಳೆದ ಜನವರಿ 4ರಂದು ಪ್ರಕಟಿಸಲಾಗಿದೆ. ಇದರಲ್ಲಿ ಟಾಪ್ 100 ಕಂಪನಿಗಳ ಷೇರುಗಳನ್ನು ‘ಲಾರ್ಜ್-ಕ್ಯಾಪ್’ ಸ್ಟಾಕ್‌ ಎಂದು ಪಟ್ಟಿ ಮಾಡಲಾಗಿದೆ, ಅಂದರೆ, ಹೆಚ್ಚು ಮಾರುಕಟ್ಟೆ ಬಂಡವಾಳೀಕರಣ (ಕಂಪನಿಯೊಂದರ ಒಟ್ಟು ಷೇರುಗಳ ಒಟ್ಟು ಮೊತ್ತ) ಇರುವ ಮುಂಚೂಣಿ 100 ಕಂಪನಿಗಳು ಇವಾಗಿರುತ್ತವೆ. ನಂತರದ 101ರಿಂದ 250ನೇ ಸ್ಥಾನದಲ್ಲಿರುವ ಕಂಪನಿಗಳನ್ನು ‘ಮಿಡ್-ಕ್ಯಾಪ್’ ಸ್ಟಾಕ್‌ಗಳು ಎಂದು ಪರಿಗಣಿಸಲಾಗುತ್ತದೆ. 251ನೇ ಸ್ಥಾನದಿಂದ ನಂತರದ ಕಂಪನಿಗಳ ಷೇರುಗಳನ್ನು ‘ಸ್ಮಾಲ್-ಕ್ಯಾಪ್’ ಎಂದು ಗುರುತಿಸಲಾಗುತ್ತದೆ.

    ಇತ್ತೀಚಿನ AMFI ಪಟ್ಟಿಯ ಪ್ರಕಾರ ‘ಸ್ಮಾಲ್-ಕ್ಯಾಪ್’ ನಿಂದ ‘ಮಿಡ್-ಕ್ಯಾಪ್’ ವರ್ಗಕ್ಕೆ ಮೇಲೇರಿದ ನಾಲ್ಕು ಮಲ್ಟಿಬ್ಯಾಗರ್ ಸ್ಟಾಕ್‌ಗಳು (ಮಲ್ಟಿ ಬ್ಯಾಗರ್​ ಸ್ಟಾಕ್​ಗಳು ಎಂದರೆ ಹಲವು ಪಟ್ಟು ಬೆಲೆ ಹೆಚ್ಚಳ ಕಂಡ ಷೇರುಗಳು) ಈ ರೀತಿ ಇವೆ.

    ಕಲ್ಯಾಣ್ ಜ್ಯುವೆಲರ್ಸ್ ಇಂಡಿಯಾ ಲಿಮಿಟೆಡ್:

    ರೂ. 38,977.21 ಕೋಟಿಗಳ ಮಾರುಕಟ್ಟೆ ಬಂಡವಾಳೀಕರಣದೊಂದಿಗೆ, ಕಲ್ಯಾಣ್ ಜ್ಯುವೆಲರ್ಸ್ ಇಂಡಿಯಾ ಲಿಮಿಟೆಡ್‌ನ ಷೇರುಗಳು ಶುಕ್ರವಾರ 389.40 ರೂ.ಗೆ ತಲುಪಿವೆ. ಚಿನ್ನ ಮತ್ತು ಇತರ ಆಭರಣ ಉತ್ಪನ್ನಗಳ ವಿನ್ಯಾಸ, ಉತ್ಪಾದನೆ ಮತ್ತು ಮಾರಾಟದ ವ್ಯಾಪಾರದಲ್ಲಿ ಈ ಕಂಪನಿ ತೊಡಗಿಕೊಂಡಿದೆ,

    ಈ ಕಂಪನಿಯ ಸ್ಟಾಕ್ ಒಂದು ವರ್ಷದಲ್ಲಿ ಶೇಕಡಾ 204 ರಷ್ಟು ಏರಿಕೆ ಕಂಡಿದೆ. ಅಂದರೆ, ಒಂದು ವರ್ಷದ ಹಿಂದೆ ಯಾರಾದರೂ ಕಂಪನಿಯ ಸ್ಟಾಕ್‌ಗೆ ರೂ 1 ಲಕ್ಷವನ್ನು ಹೂಡಿಕೆ ಮಾಡಿದ್ದರೆ, ಅದು ರೂ 3.04 ಲಕ್ಷಕ್ಕೆ ಏರುತ್ತಿತ್ತು.

    ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್:

    46,402.82 ಕೋಟಿಗಳ ಮಾರುಕಟ್ಟೆ ಬಂಡವಾಳೀಕರಣದೊಂದಿಗೆ, ಭಾರತದ ಹೆಸರಾಂತ ಹಡಗು ನಿರ್ಮಾಣ ಕಂಪನಿಯಾದ ಮಜಗಾಂವ್​ ಡಾಕ್​ ಶಿಪ್​ಬಿಲ್ಡರ್ಸ್​ ಲಿಮಿಟೆಡ್​ (Mazagon Dock Shipbuilders Limited) ಷೇರುಗಳು ಶುಕ್ರವಾರ ರೂ 2292.40 ಕ್ಕೆ ತಲುಪಿವೆ.
    ಒಂದು ವರ್ಷದಲ್ಲಿ ಈ ಕಂಪನಿಯ ಸ್ಟಾಕ್ ಶೇಕಡಾ 192 ರಷ್ಟು ಹೆಚ್ಚಳವಾಗಿದೆ. ಅಂದರೆ, ಒಂದು ವರ್ಷದ ಹಿಂದೆ ಯಾರಾದರೂ ಈ ಕಂಪನಿಯ ಸ್ಟಾಕ್‌ಗೆ ರೂ 1 ಲಕ್ಷವನ್ನು ಹೂಡಿಕೆ ಮಾಡಿದ್ದರೆ, ಅದು ರೂ 2.92 ಲಕ್ಷಕ್ಕೆ ಪರಿವರ್ತನೆಯಾಗುತ್ತಿತ್ತು.

    ಎಸ್​ಜೆವಿಎನ್​ (SJVN) ಲಿಮಿಟೆಡ್:

    ರೂ 35,737.56 ಕೋಟಿಗಳ ಮಾರುಕಟ್ಟೆ ಬಂಡವಾಳೀಕರಣದೊಂದಿಗೆ, ವಿದ್ಯುತ್ ಉತ್ಪಾದನೆಯ ವ್ಯವಹಾರದಲ್ಲಿ ತೊಡಗಿರುವ ಎಸ್‌ಜೆವಿಎನ್ ಲಿಮಿಟೆಡ್‌ನ ಷೇರುಗಳು ಶುಕ್ರವಾರ ರೂ ರೂ 94.15 ಕ್ಕೆ ತಲುಪಿವೆ.

    ಒಂದು ವರ್ಷದಲ್ಲಿ ಈ ಕಂಪನಿಯ ಸ್ಟಾಕ್ ಸರಿಸುಮಾರು 168 ಪ್ರತಿಶತದಷ್ಟು ಹೆಚ್ಚಳ ದಾಖಲಿಸಿದೆ. ಒಂದು ವರ್ಷದ ಹಿಂದೆ ಯಾರಾದರೂ ಕಂಪನಿಯ ಸ್ಟಾಕ್‌ಗೆ ರೂ 1 ಲಕ್ಷವನ್ನು ಹೂಡಿಕೆ ಮಾಡಿದ್ದರೆ, ಅದು ರೂ 2.68 ಲಕ್ಷಕ್ಕೆ ತಲುಪುತ್ತಿತ್ತು.

    ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್:

    ರೂ 27,919.47 ಕೋಟಿಗಳ ಮಾರುಕಟ್ಟೆ ಬಂಡವಾಳೀಕಣ ಇರುವ , ಮೈಕ್ರೋಫೈನಾನ್ಸ್ ಸೇವೆಗಳನ್ನು ಒದಗಿಸುವ ಕ್ರೆಡಿಟ್‌ಆಕ್ಸೆಸ್ ಗ್ರಾಮೀಣ ಲಿಮಿಟೆಡ್‌ನ ಷೇರುಗಳ ಬೆಲೆ ಶುಕ್ರವಾರ ರೂ 1,703.5 ಕ್ಕೆ ತಲುಪಿದೆ,

    ಒಂದು ವರ್ಷದ ಅವಧಿಯಲ್ಲಿ ಈ ಕಂಪನಿಯ ಸ್ಟಾಕ್ ಸರಿಸುಮಾರು 102 ಪ್ರತಿಶತದಷ್ಟು ಹೆಚ್ಚಳವಾಗಿದೆ, ಅಂದರೆ, ಒಂದು ವರ್ಷದ ಹಿಂದೆ ಯಾರಾದರೂ ಕಂಪನಿಯ ಸ್ಟಾಕ್‌ಗೆ ರೂ 1 ಲಕ್ಷವನ್ನು ಹೂಡಿಕೆ ಮಾಡಿದ್ದರೆ, ಅದು ರೂ 2.02 ಲಕ್ಷಕ್ಕೆ ತಲುಪುತ್ತಿತ್ತು.

    ಭಾರತದ ಚಿಲ್ಲರೆ ಹಣದುಬ್ಬರ 4 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ: ಇದರ ಅರ್ಥವೇನು?

    ಹೊಸ ಗರಿಷ್ಠ ಮಟ್ಟ ತಲುಪಿ ದಾಖಲೆ ಬರೆದ ಸೂಚ್ಯಂಕ: ಐಟಿ ಷೇರುಗಳ ಬೆಲೆ ಗಗನಮುಖಿಯಾಗಿದ್ದೇಕೆ?

    ಹೊಸ ಗರಿಷ್ಠ ಮಟ್ಟ ತಲುಪಿ ದಾಖಲೆ ಬರೆದ ಸೂಚ್ಯಂಕ: ಐಟಿ ಷೇರುಗಳ ಬೆಲೆ ಗಗನಮುಖಿಯಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts