More

    ಭಾರತದ ಚಿಲ್ಲರೆ ಹಣದುಬ್ಬರ 4 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ: ಇದರ ಅರ್ಥವೇನು?

    ನವದೆಹಲಿ: ಭಾರತದ ಚಿಲ್ಲರೆ ಹಣದುಬ್ಬರವು ಡಿಸೆಂಬರ್‌ನಲ್ಲಿ ಶೇಕಡಾ 5.69 ಕ್ಕೆ ಏರಿಕೆ ಕಂಡಿದೆ. ಇದರ ಹಿಂದಿನ ನವೆಂಬರ್​ ತಿಂಗಳಲ್ಲಿ ಹಣದುಬ್ಬರವು ಶೇಕಡಾ 5.5 ಕ್ಕಿಂತ ಸ್ವಲ್ಪ ಹೆಚ್ಚಾಗಿತ್ತು. (ಹಣದುಬ್ಬರವೆಂದರೆ ಸರಕು ಮತ್ತು ಸೇವೆಗಳ ಬೆಲೆಗಳಲ್ಲಿ ಸಾಮಾನ್ಯ ಹೆಚ್ಚಳ.)

    ಸಂಖ್ಯಾಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಶುಕ್ರವಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳು ಈ ಸಂಗತಿಯನ್ನು ಬಹಿರಂಗಪಡಿಸಿವೆ.

    ಗ್ರಾಹಕ ಬೆಲೆ ಸೂಚ್ಯಂಕ (CPI) ಮೂಲಕ ಹಣದುಬ್ಬರವನ್ನು ಅಳೆಯಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ನಿಗದಿಪಡಿಸಿರುವ ಸ್ವೀಕಾರಾರ್ಹ ವ್ಯಾಪ್ತಿಯಾದ ಶೇಕಡಾ 2ರಿಂದ 6ರ ನಡುವೆಯೇ ಈ ಹಣದುಬ್ಬರ ಇರುವುದು ಗಮನಾರ್ಹವಾಗಿದೆ. ಇನ್ನು ಡಿಸೆಂಬರ್‌ನಲ್ಲಿ ಆಹಾರ ಹಣದುಬ್ಬರವು ಶೇಕಡಾ 9.53 ರಷ್ಟಿದೆ.

    ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಹಣದುಬ್ಬರ ದರಗಳು ಕ್ರಮವಾಗಿ ಶೇ. 5.93 ಮತ್ತು ಶೇ.5.46 ರಷ್ಟಿವೆ. ಹಿಂದಿನ ವರ್ಷ ಇದೇ ತಿಂಗಳಿನಲ್ಲಿ ದಾಖಲಾದ ಶೇ.5.85 ಮತ್ತು ಶೇ.5.26 ಕ್ಕಿಂತ ಇದು ಸ್ವಲ್ಪ ಹೆಚ್ಚಳವಾಗಿದೆ.‘

    ಡಿಸೆಂಬರ್‌ನಲ್ಲಿ ತರಕಾರಿ ಹಣದುಬ್ಬರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ, ನವೆಂಬರ್‌ನಲ್ಲಿ ಶೇಕಡಾ 17.7 ಇದ್ದುದು, ಡಿಸೆಂಬರ್​ನಲ್ಲಿ ಶೇಕಡಾ 27.64ಕ್ಕೆ ಏರಿದೆ. ಮತ್ತೊಂದೆಡೆ, ಇಂಧನ ಹಣದುಬ್ಬರವು ನವೆಂಬರ್​ ತಿಂಗಳಲ್ಲಿ ಶೇಕಡಾ 0.77ರಷ್ಟು ಕಡಿಮೆಯಾಗಿದ್ದರೆ, ಡಿಸೆಂಬರ್​ ತಿಂಗಳಲ್ಲಿ ಇದು ಶೇಕಡಾ 0.99ಕ್ಕೆ ಕುಸಿತಗೊಂಡಿದೆ.

    ಹೊಸ ಗರಿಷ್ಠ ಮಟ್ಟ ತಲುಪಿ ದಾಖಲೆ ಬರೆದ ಸೂಚ್ಯಂಕ: ಐಟಿ ಷೇರುಗಳ ಬೆಲೆ ಗಗನಮುಖಿಯಾಗಿದ್ದೇಕೆ?

    ಸ್ಪರ್ಧೆಗೆ ಹಲವು ಬಿಜೆಪಿ ಸಂಸದರ ನಿರಾಸಕ್ತಿ: ರಾಜ್ಯದಲ್ಲಿ ಕಣಕ್ಕಿಳಿಯಲಿವೆ 11 ಹೊಸ ಮುಖಗಳು


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts