More

    ನಾಲ್ಕೂವರೆ ತಿಂಗಳಲ್ಲಿ 22 ಬಾರಿ ಕೋವಿಡ್ ಟೆಸ್ಟ್ ಎದುರಿಸಿದ್ದಾರೆ ಗಂಗೂಲಿ!

    ಮುಂಬೈ: ಸಾಂಕ್ರಾಮಿಕ ಪಿಡುಗಿನ ನಡುವೆ ಕೆಲಸ ಕಾರ್ಯಗಳಿಗಾಗಿ ಸುತ್ತಾಡುವಾಗ ಕಳೆದ ನಾಲ್ಕೂವರೆ ತಿಂಗಳಲ್ಲಿ 22 ಬಾರಿ ಕೋವಿಡ್-19 ಪರೀಕ್ಷೆಗೆ ಒಳಪಟ್ಟಿರುವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಂಗಳವಾರ ಬಹಿರಂಗಪಡಿಸಿದ್ದಾರೆ.

    ಐಪಿಎಲ್ ಟೂರ್ನಿ ಆಯೋಜನೆಗಾಗಿ ಗಂಗೂಲಿ ಸೆಪ್ಟೆಂಬರ್-ನವೆಂಬರ್‌ನಲ್ಲಿ ಅರಬ್ ರಾಷ್ಟ್ರಕ್ಕೆ 3 ಬಾರಿ ಹೋಗಿ ಬಂದಿದ್ದರು. ಜತೆಗೆ ಮಂಡಳಿಯ ಮತ್ತು ವೈಯಕ್ತಿಕವಾದ ವಿವಿಧ ಕಾರ್ಯ ಚಟುವಟಿಕೆಗಳಲ್ಲೂ ಭಾಗವಹಿಸಿದ್ದರು. 22 ಟೆಸ್ಟ್‌ಗಳಲ್ಲಿ ಒಮ್ಮೆಯೂ ಪಾಸಿಟಿವ್ ಆಗಿಲ್ಲ. ನನ್ನ ಸುತ್ತಮುತ್ತ ಕೆಲವರು ಪಾಸಿಟಿವ್ ಆಗಿದ್ದಾರೆ. ಇದರಿಂದಾಗಿ ನಾನು ಹೆಚ್ಚಿನ ಬಾರಿ ಪರೀಕ್ಷೆಗೆ ಒಳಪಟ್ಟಿರುವೆ ಎಂದು ಗಂಗೂಲಿ ಹೇಳಿದ್ದಾರೆ.

    ‘ನಾನು ವಯಸ್ಸಾದ ಹೆತ್ತವರೊಂದಿಗೆ ಇರುವೆ. ನಾನು ದುಬೈಗೆ ಪ್ರಯಾಣಿಸಿರುವೆ. ಆರಂಭಿಕ ದಿನಗಳಲ್ಲಿ ನಾನು ಕಳವಳಗೊಂಡಿದ್ದೆ. ಯಾಕೆಂದರೆ ನನ್ನೊಬ್ಬನ ಬಗ್ಗೆ ಮಾತ್ರವಲ್ಲ, ಸಮುದಾಯಕ್ಕೆ ಹರಡುವ ಭೀತಿಯೂ ಇತ್ತು’ ಎಂದು ದಾದಾ ತಿಳಿಸಿದ್ದಾರೆ.

    ಇದೇ ವೇಳೆ, ಮುಂದಿನ ವರ್ಷ ಭಾರತ ಪ್ರವಾಸದಲ್ಲಿ ಇಂಗ್ಲೆಂಡ್ ತಂಡ 5 ಟೆಸ್ಟ್‌ಗೆ ಬದಲಾಗಿ 4 ಟೆಸ್ಟ್ ಆಡಲಿರುವುದನ್ನು ಗಂಗೂಲಿ ಖಚಿತಪಡಿಸಿದ್ದಾರೆ. ಫೆಬ್ರವರಿ-ಮಾರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ 4 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಕರೊನಾ ಸವಾಲಿನ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆ ಸುಲಭವಾದುದು ಎಂದು ಗಂಗೂಲಿ ಹೇಳಿದ್ದಾರೆ.

    ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗಲಿದೆ ಭಾರತ-ಆಸೀಸ್ ಕ್ರಿಕೆಟ್​ ಸರಣಿಯ ಕಾಮೆಂಟರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts