ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗಲಿದೆ ಭಾರತ-ಆಸೀಸ್ ಕ್ರಿಕೆಟ್​ ಸರಣಿಯ ಕಾಮೆಂಟರಿ

ನವದೆಹಲಿ: ಮುಂಬರುವ ಭಾರತ ಮತ್ತು ಆತಿಥೇಯ ಆಸ್ಟ್ರೇಲಿಯಾ ತಂಡಗಳ ನಡುವಿನ ಕ್ರಿಕೆಟ್ ಸರಣಿಯ ಎಲ್ಲ ಪಂದ್ಯಗಳ ವೀಕ್ಷಕವಿವರಣೆ ಆಲ್ ಇಂಡಿಯಾ ರೇಡಿಯೋದಲ್ಲಿ (ಎಐಆರ್) ಪ್ರಸಾರವಾಗಲಿದೆ. ಪ್ರಸಾರ ಭಾರತಿ ಸಿಇಒ ಶಶಿ ಶೇಖರ್ ಈ ವಿಷಯವನ್ನು ಖಚಿತಪಡಿಸಿದ್ದಾರೆ. ನವೆಂಬರ್ 27ರಿಂದ ನಡೆಯಲಿರುವ ತಲಾ 3 ಏಕದಿನ, ಟಿ20 ಮತ್ತು 4 ಟೆಸ್ಟ್ ಪಂದ್ಯಗಳ ಸರಣಿಯ ಕಾಮೆಂಟರಿಯನ್ನು ಭಾರತದೆಲ್ಲೆಡೆ ಕೇಳಬಹುದಾಗಿದೆ. ಇನ್ನು ದೂರದರ್ಶನದಲ್ಲಿ ಏಕದಿನ ಮತ್ತು ಟಿ20 ಸರಣಿಯ ಪಂದ್ಯಗಳು ಮಾತ್ರ ನೇರಪ್ರಸಾರ ಕಾಣಲಿವೆ. ‘ನಾವು ಭಾರತ-ಆಸೀಸ್ ಸರಣಿಯ ಎಲ್ಲ … Continue reading ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗಲಿದೆ ಭಾರತ-ಆಸೀಸ್ ಕ್ರಿಕೆಟ್​ ಸರಣಿಯ ಕಾಮೆಂಟರಿ