More

    ಪತ್ನಿ ಬಾರದಿದ್ದರೆ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಲ್ಲ ಎಂದಿದ್ದೇಕೆ ಪಾಕ್ ಕ್ರಿಕೆಟಿಗ?

    ಕರಾಚಿ: ಕರೊನಾ ಭೀತಿಯ ನಡುವೆ ಪಾಕಿಸ್ತಾನ ತಂಡ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲು ಸಜ್ಜಾಗುತ್ತಿದೆ. ಇದಕ್ಕಾಗಿ ಈಗಾಗಲೆ 29 ಆಟಗಾರರ ತಂಡವನ್ನೂ ಪ್ರಕಟಿಸಲಾಗಿದೆ. ಈ ಪ್ರವಾಸದಿಂದ ಪಾಕಿಸ್ತಾನದ ಇಬ್ಬರು ಪ್ರಮುಖ ಆಟಗಾರರು ಹೊರಗುಳಿದಿದ್ದಾರೆ. ಅವರೆಂದರೆ ವೇಗಿ ಮೊಹಮದ್ ಆಮೀರ್ ಮತ್ತು ಆಲ್ರೌಂಡರ್ ಹ್ಯಾರಿಸ್ ಸೋಹೈಲ್. 2ನೇ ಮಗುವಿನ ನಿರೀಕ್ಷೆಯಿಂದಾಗಿ ಆಮೀರ್ ಪ್ರವಾಸದಿಂದ ಹೊರಗುಳಿದಿದ್ದರೆ, ಹ್ಯಾರಿಸ್ ಪ್ರವಾಸವನ್ನು ತಪ್ಪಿಸಿಕೊಂಡಿರುವುದಕ್ಕೆ ನೀಡಿರುವ ಕಾರಣ ವಿಚಿತ್ರವಾಗಿದೆ. ಪತ್ನಿ ಮೊಮಿನಾ ಹ್ಯಾರಿಸ್‌ಗೆ ತಮ್ಮ ಜತೆ ಇಂಗ್ಲೆಂಡ್‌ಗೆ ಪ್ರಯಾಣಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅವಕಾಶ ನೀಡದಿರುವುದರಿಂದಾಗಿ ಸೋಹೈಲ್ ಪ್ರವಾಸದಿಂದ ಹೊರಗುಳಿದಿದ್ದಾರೆ! ಹಾಗಾದರೆ ಹ್ಯಾರಿಸ್ ಸೋಹೈಲ್ ಪತ್ನಿಯನ್ನು ಬಿಟ್ಟಿರಲಾರದಷ್ಟು ಪ್ರೀತಿಸುವರೇ ಎಂಬ ಕೌತುಕ ಸಹಜ. ಆದರೆ ಅಸಲಿ ಕಾರಣ ಬೇರೆಯೇ ಇದೆ!

    ಇದನ್ನೂ ಓದಿ: ಏಳೇ ನಿಮಿಷಗಳಲ್ಲಿ ಕರ್ಸ್ಟನ್​ಗೆ ಒಲಿದಿತ್ತು ಕೋಚ್ ಹುದ್ದೆ!

    2015ರಲ್ಲಿ ಏಕದಿನ ವಿಶ್ವಕಪ್ ಆಡಲು ನ್ಯೂಜಿಲೆಂಡ್‌ಗೆ ತೆರಳಿದ್ದ ಹ್ಯಾರಿಸ್ ಸೋಹೈಲ್‌ಗೆ ಹೋಟೆಲ್ ಕೋಣೆಯಲ್ಲಿ ಪ್ರೇತಾತ್ಮ ಕಾಣಿಸಿತ್ತಂತೆ! ನಂತರ ಪ್ರತಿ ವಿದೇಶಿ ಪ್ರವಾಸದ ವೇಳೆಯೂ ಪಿಸಿಬಿಯ ವಿಶೇಷ ಅನುಮತಿಯ ಮೇರೆಗೆ ಅವರು ಪತ್ನಿಯನ್ನು ಜತೆಗೆ ಕರೆದುಕೊಂಡು ಹೋಗುತ್ತಿದ್ದರು. ಒಬ್ಬರೇ ಪ್ರಯಾಣಿಸುವುದು ಅಥವಾ ಕೋಣೆಯಲ್ಲಿ ಒಬ್ಬಂಟಿಯಾಗಿ ಇರುವುದು ಅವರಿಗೆ ಭಯ ಉಂಟು ಮಾಡುತ್ತದಂತೆ. ಹೀಗಾಗಿ, ಈ ಬಾರಿ ಇಂಗ್ಲೆಂಡ್ ಪ್ರವಾಸಕ್ಕೆ ಪತ್ನಿ, ಮಕ್ಕಳ ಸಹಿತ ಕುಟುಂಬ ಸದಸ್ಯರನ್ನು ಕರೆದೊಯ್ಯಲು ಪಿಸಿಬಿ ಅನುಮತಿ ನೀಡದಿರುವ ಕಾರಣ ಹ್ಯಾರಿಸ್ ಸೋಹೈಲ್ ತಂಡದಿಂದಲೇ ಹೊರಗುಳಿದಿದ್ದಾರೆ.

    ಇದನ್ನೂ ಓದಿ: ಸುಶಾಂತ್ ಸಾವಿಗೆ ವಿದೇಶಿ ಕ್ರಿಕೆಟಿಗರಿಂದಲೂ ಕಂಬನಿ

    31 ವರ್ಷದ ಹ್ಯಾರಿಸ್ ಸೋಹೈಲ್ ಪಾಕಿಸ್ತಾನ ಪರ ಇದುವರೆಗೆ 14 ಟೆಸ್ಟ್ ಆಡಿದ್ದು, 2 ಶತಕದ ಸಹಿತ 819 ರನ್ ಗಳಿಸಿದ್ದಾರೆ ಮತ್ತು ಎಡಗೈ ಸ್ಪಿನ್ ಬೌಲಿಂಗ್‌ನಿಂದ 13 ವಿಕೆಟ್ ಕಬಳಿಸಿದ್ದಾರೆ. 41 ಏಕದಿನ ಮತ್ತು 14 ಟಿ20 ಪಂದ್ಯಗಳನ್ನೂ ಆಡಿದ್ದು ಕ್ರಮವಾಗಿ 1,614 ಮತ್ತು 210 ರನ್ ಗಳಿಸಿದ್ದಾರೆ. 2015ರ ಜನವರಿಯಲ್ಲಿ ಮೊಮಿನಾ ಜತೆಗೆ ಅವರ ವಿವಾಹ ನಡೆದಿತ್ತು.

    ಸತತ ವೈಫಲ್ಯದಿಂದ ಕಂಗೆಟ್ಟಿದ್ದೀರಾ? ಲಂಕಾ ಕ್ರಿಕೆಟಿಗ ಅಟಪಟ್ಟು ಯಶೋಗಾಥೆ ನಿಮಗೇಕೆ ಸ್ಫೂರ್ತಿಯಾಗಬಾರದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts