More

    ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಎರಡು ಬಾಲ್ಯವಿವಾಹ ತಡೆದ ಅಧಿಕಾರಿಗಳು

    ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ ಗುರುವಾರ ಎರಡು ಬಾಲ್ಯವಿವಾಹವನ್ನು ಅಧಿಕಾರಿಗಳು ತಡೆದಿದ್ದಾರೆ. ಪಟ್ಟಣದ ರಾಮ್‌ರಹೀಂ ನಗರದಲ್ಲಿ ಹೊಸಪೇಟೆ ತಾಲೂಕಿನ ಬೈಲುವದ್ದಿಗೇರಿ ಗ್ರಾಮದ ಬಾಲಕಿ ವಿವಾಹಕ್ಕೆ ಸಿದ್ಧತೆ ನಡೆದಿತ್ತು. ಅದರಂತೆ ಹೊಸಕೇರಿ ಗ್ರಾಮದಲ್ಲಿ ಬಾಲ್ಯವಿವಾಹಕ್ಕೆ ಏರ್ಪಾಟು ನಡೆದಿತ್ತು.

    ಈ ಕುರಿತು ಖಚಿತ ಮಾಹಿತಿ ಮೇರೆಗೆ ಸಿಡಿಪಿಒ ಸುದೀಪ್ ಉಂಕಿ ಮತ್ತು ತಂಡ ದಾಳಿ ನಡೆಸಿ ಬಾಲಕಿಯರನ್ನು ರಕ್ಷಿಸಿ ಪಾಲಕರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಈ ವೇಳೆ ದಶಮಾಪುರ ಗ್ರಾಪಂ ಪಿಡಿಒ ಪರುಸಪ್ಪ, ಕಾರ್ಯದರ್ಶಿ ಕೊಟ್ರೇಶ್, ಅಂಗನವಾಡಿ ಕಾರ್ಯಕರ್ತೆ ಮಹಾಂತಮ್ಮ ಮತ್ತು ಮಕ್ಕಳ ಸಹಾಯವಾಣಿ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts