More

  ಜಲಾವೃತ ಆಗದಂತೆ ಮುನ್ನೆಚ್ಚರಿಕೆ ವಹಿಸಿ

  ಶಿಕಾರಿಪುರ: ಮುಂಗಾರು ಹಂಗಾಮಿನಲ್ಲಿ ಮಳೆ ದಿಢೀರ್ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ತಗ್ಗಿನಲ್ಲಿರುವ ಪ್ರದೇಶಗಳು ಜಲಾವೃತವಾಗದ ಹಾಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಅವರು ಪುರಸಭೆ ಅಧಿಕಾರಿಗಳಿಗೆ ತಿಳಿಸಿದರು.

  ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಮುಂಗಾರು ಹಂಗಾಮಿನ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಇದ್ದಕ್ಕಿದ್ದಂತೆ ಹೆಚ್ಚು ಮಳೆಯಾದರೆ ಕೊಟ್ಟ ಮತ್ತಿತರ ಗ್ರಾಮಗಳು ಜಲಾವೃತವಾಗುವ ಸಂಭವವಿದೆ. ಪುರಸಭೆ ಮತ್ತು ತಾಲೂಕು ಆಡಳಿತ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.
  ಪುರಸಭೆಯಲ್ಲಿ ಇ-ಸ್ವತ್ತು ವಿಳಂಬ ಆಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಾನೂನಿನ ತೊಡಕುಗಳಿದ್ದರೆ ಅವರಿಗೆ ತಿಳಿ ಹೇಳುವ ಕೆಲಸ ಮಾಡಬೇಕು. ಸಮಸ್ಯೆಯಿಂದ ಬೇಸತ್ತು ಪುರಸಭೆ ಮುಂದೆ ಪ್ರತಿಭಟನೆ ಮಾಡುವ ಹಂತಕ್ಕೆ ಬರಬಾರದು. ಅಧಿಕಾರಿಗಳು ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರ ಕೆಲಸ ಮಾಡಿಕೊಡಿ ಎಂದು ಸೂಚಿಸಿದರು.
  ಪುರಸಭೆ ಅಧಿಕಾರಿ ಭರತ್ ಮಾತನಾಡಿ, 13 ಸಾವಿರ ಆಸ್ತಿಗಳಲ್ಲಿ 5 ಸಾವಿರ ಆಸ್ತಿಗಳು ಇತ್ಯರ್ಥವಾಗಿವೆ. ಸಾಕಷ್ಟು ಕಾನೂನಿನ ತೊಡಕುಗಳು ಇರುವುದರಿಂದ ಮತ್ತು ಸರ್ಕಾರದ ಮಟ್ಟದಲ್ಲಿ ಕೆಲಸ ಆಗಬೇಕಿರುವುದರಿಂದ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಗಮನಹರಿಸುತ್ತೇವೆ. ಸಾರ್ವಜನಿಕರಿಗೆ ಮಾಹಿತಿ ಮತ್ತು ತಿಳಿವಳಿಕೆ ನೀಡುತ್ತೇವೆ ಎಂದರು.
  ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಅಗತ್ಯ ರಸಗೊಬ್ಬರ, ಬಿತ್ತನೆಬೀಜ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಮದ ಅವರು, ಬೆಳೆ ವಿಮೆ ನಮ್ಮಲ್ಲಿ ಎಷ್ಟು ರೈತರಿಗೆ ತಲುಪಿದೆ ಎಂದು ಪ್ರಶ್ನಿಸಿದರು.
  ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಹಾಯಕ ನಿರ್ದೇಶಕ ಕಿರಣ್‌ಕುಮಾರ್ ಹರ್ತಿ, ತಾಲೂಕಿನಲ್ಲಿ 3 ಸಾವಿರ ಕ್ವಿಂಟಾಲ್ ಮೆಕ್ಕೆಜೋಳ ಬಿತ್ತನೆಬೀಜ ಅಗತ್ಯವಿದೆ. ಇಷ್ಟೇ ಪ್ರಮಾಣದ ದಾಸ್ತಾನಿದೆ. ಭತ್ತ ಬಿತ್ತನೆ ಬೀಜ ಕೂಡ ಸಗ್ರಹವಿದೆ. 30,958 ರೈತರು ಇದ್ದು, ಈ ಪೈಕಿ 17,387 ರೈತರಿಗೆ 16.92 ಕೋಟಿ ರೂ. ಬೆಳೆ ವಿಮೆ ಜಮೆಯಾಗಿದೆ ಎಂದರು.
  ರೈತರಿಗೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ವಿತರಣೆ ಹಾಗೂ ದುರಸ್ತಿಯಲ್ಲಿ ತೊಂದರೆಯಾಗದಂತೆ ಗಮನಹರಿಸಿ. ಅಂಜನಾಪುರ ಕಾಮಗಾರಿಗೆ ಪರಿಹಾರ ನಿಗದಿಯಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕೊಡಲು ವಿನಾಕಾರಣ ಅಲೆದಾಡಿಸಬೇಡಿ ಎಂದು ಮೆಸ್ಕಾಂ ಅಧಿಕಾರಿಗಳಿಗೆ ಶಾಸಕ ವಿಜಯೇಂದ್ರ ಸೂಚಿಸಿದರು.
  ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಕಳೆದ ವರ್ಷದ ಭೀಕರ ಬರಗಾಲದಿಂದ ರೈತರು ಇನ್ನೂ ಚೇತರಿಸಿಕೊಂಡಿಲ್ಲ. ರೈತರು ಯಾವುದೇ ಇಲಾಖೆಗೆ ತಮ್ಮ ಕೆಲಸಕ್ಕೆ ಬಂದರೂ ಅವರನ್ನು ಯಾವ ಕಾರಣಕ್ಕೂ ಅಲೆದಾಡಿಸಬೇಡಿ. ಯಾವ ಅಧಿಕಾರಿಯೂ ಯಾವ ಕಾರಣಕ್ಕೂ ನಿರ್ಲಕ್ಷೃ ಮಾಡಬೇಡಿ. ಅಧಿಕಾರಿಗಳೆಂದರೆ ಸರ್ಕಾರ ಮತ್ತು ಜನರ ನಡುವೆ ಸೇತುವೆ ಇದ್ದಂತೆ. ಕೃಷಿಕರಿಗೆ ನೀವೇ ಸಕಾರ್ರ್ರ ಇದ್ದಂತೆ ಎಂದರು.
  ತಾಪಂ ಇಒ ರಾಜಪ್ಪ, ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

  See also  ಮೂಡಿಗೆರೆ ಗ್ರಾಮಠಾಣಾ ಜಾಗ ಒತ್ತುವರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts