More

    ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಗೊತ್ತಿಲ್ಲ, ಪರ್ಸಂಟೇಜ್ ಲೆಕ್ಕಕ್ಕೆ ಇನ್ನೂ ಸಿಕ್ಕಿಲ್ಲ ಮುಕ್ತಿ ಎಂದ ರೇವಣ್ಣ

    ಹಾಸನ: ಉಪ ಚುನಾವಣೆ ಕಳೆದ ಮೇಲೆ, ಶಿಕ್ಷಕರ ಚುನಾವಣೆ ಸಂದರ್ಭದಲ್ಲಿ ವಿದ್ಯುತ್ ದರ ಹೆಚ್ಚಿಸುವ ಅಗತ್ಯವಿತ್ತಾ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಬಳಿ, ಗುಲ್ಬರ್ಗ, ಮಂಗಳೂರು, ಬೆಂಗಳೂರು ಕಂಪನಿಯಿಂದ 7996 ಕೋಟಿ ನಷ್ಟ ಇದೆ ಅಂತ ದರ ಹೆಚ್ಚಿಸಿದಾರೆ. ನಷ್ಟ ಸರಿದೂಗಿಸಲು ಹೀಗೆ ಮಾಡಿದ್ದಾರೆ. ಐದು ಕಂಪನಿಗಳು ದರ ಹೆಚ್ಚಿಸಲು ಅರ್ಜಿ ಸಲ್ಲಿಸಿವೆ. 40 ಪೈಸೆ ದರ ಏರಿಕೆ ಮಾಡಿದ್ದಾರೆ. 20 ವರ್ಷದಲ್ಲಿ ಹತ್ತು ಬಾರಿ ಕರೆಂಟ್ ಬಿಲ್ ಹೆಚ್ಚಳ ಮಾಡಿದಾರೆ. 4 ರಿಂದ 5 ಸಾವಿರ ಕೋಟಿ ರೂ. ನಷ್ಟದಲ್ಲಿದೆ.

    ಗ್ರಾಮೀಣ ಭಾಗದಲ್ಲಿ ಟಿಸಿ ಹಾಕಲು ಸಾವಿರಾರು ಲಂಚ ಕೊಡಬೇಕು. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಗೊತ್ತಿಲ್ಲ. ನಾನು ಸಚಿವನಾಗಿದ್ದಾಗ ಬೆಸ್ಕಾಂನಲ್ಲಿ 500 ಕೋಟಿ ಎಫ್ ಡಿ ಇಟ್ಟಿದ್ದೆ. ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಂಡಿದ್ದೆ.

    ಇದನ್ನೂ ಓದಿ: ನಿತ್ಯ ಭವಿಷ್ಯ: ಈ ರಾಶಿಯವರಿಂದು ದೂರದ ಪ್ರವಾಸಗಳನ್ನು ಮುಂದಕ್ಕೆ ಹಾಕುವುದೇ ಉತ್ತಮ

    ಗುತ್ತಿಗೆದಾರರ ಬಿಲ್ ಮೂರು ಸಾವಿರ ಕೋಟಿ ಇದೆ. ಒಂದು ಕಡೆ ಲೂಟಿ ನಡಿತಾ ಇದೆ. ಸಮಗ್ರ ತನಿಖೆ ನಡೆಸಿದರೆ ಸತ್ಯ ಬಯಲಾಗುತ್ತದೆ. ಇದನ್ನ ಯಾರಿಗೆ ಕೊಡ್ತಾರೋ ಗೊತ್ತಿಲ್ಲ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ನೀರಾವರಿ ಇಲಾಖೇಲಿ ಬಿಲ್ ಪಾಸ್ ಆಗಲು ಹನ್ನೆರಡು ಪರ್ಸೆಂಟ್ ಕೊಡ್ಬೇಕು ಎಂದರು.

    FACT Check | ಮಸೀದಿ ಧ್ವನಿವರ್ಧಕ ತೆರವಿಗೆ ಆದೇಶಿಸಿಲ್ಲ- ಪೊಲೀಸ್ ಇಲಾಖೆ ಯೂ-ಟರ್ನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts