More

    FACT Check | ಮಸೀದಿ ಧ್ವನಿವರ್ಧಕ ತೆರವಿಗೆ ಆದೇಶಿಸಿಲ್ಲ- ಪೊಲೀಸ್ ಇಲಾಖೆ ಯೂ-ಟರ್ನ್​!

    ಬೆಂಗಳೂರು: ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದ್ದರೆ ಮಸೀದಿ ಧ್ವನಿವರ್ಧಕ ತೆರವುಗೊಳಿಸಬೇಕು ಎಂಬ ಸುತ್ತೋಲೆ ಹೊರಡಿಸಿದ್ದ ಪೊಲೀಸ್ ಇಲಾಖೆ ಇದೀಗ ತನ್ನದೇ ಸುತ್ತೋಲೆಯ ಫ್ಯಾಕ್ಟ್​ಚೆಕ್ ಪ್ರಕಟಿಸಿದೆ! ಡಿಜಿಪಿ ಪರವಾಗಿ ಎಐಜಿಪಿ ಸುತ್ತೋಲೆ ಹೊರಡಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆಯಾದರೂ. ಅದನ್ನು ಗುಮಾಸ್ತರು ಮಾಡಿದ್ದಾರೆ ಎಂಬ ಸಮಜಾಯಿಷಿಯನ್ನೂ ಇಲಾಖೆ ನೀಡಿದೆ!!!!!

    ಪೊಲೀಸ್ ಇಲಾಖೆಯ ಫ್ಯಾಕ್ಟ್​ಚೆಕ್ ಹೇಳಿದ್ದಿಷ್ಟು- ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕ ಗಳನ್ನು ತೆಗಿಯುಲು ಉದ್ದೇಶಿಸಿರುವ ಬಗ್ಗೆ Dg&Igp ರವರು ಹೊರಡಿಸಿದ್ದೆಂದು ಹೇಳಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
    ನಿಜ ಸಂಗತಿ : ಈ ಬಗ್ಗೆ ಪರಿಶೀಲಿಸಿದಾಗ ತಿಳಿದು ಬಂದಿದ್ದೇನೆಂದರೆ , ಈ ಪತ್ರವನ್ನು ಹಿರಿಯ ಅಧಿಕಾರಿಗಳ ಒಪ್ಪಿಗೆ ಇಲ್ಲದೆ ಗುಮಾಸ್ತರು ಕಿಡಿಗೇಡಿತನದಿಂದ ಕರ್ನಾಟಕ ರಾಜ್ಯದ ಪೊಲೀಸ್ ಕಮಿಷನರಗಳು ಹಾಗೂ ಜಿಲ್ಲಾ sp ಗಳಿಗೆ ಕಳುಹಿಸಿರತ್ತಾರೆ. ಆದರೆ ಈ ರೀತಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಸೀದಿಗಳಲ್ಲಿರುವ ಧ್ವನಿ ವರ್ಧಕಗಳನ್ನು ತೆಗೆಯುವಂತ ಯಾವುದೇ ನಿರ್ದೇಶನವನ್ನು ಪೊಲೀಸ್ ಇಲಾಖೆಯಿಂದ ನೀಡಿರುವುದಿಲ್ಲ. ಈ ಬಗ್ಗೆ ಮುಂದಿನ ವಿಚಾರಣೆಗೆ ಆದೇಶಿಸಲಾಗಿದೆ ಸಾರ್ವಜನಿಕರು ಇಂತಹ ಗಾಳಿಸುದ್ದಿ ಅಥವಾ ಹಾದಿತಪ್ಪಿಸುವಂತಹ ಸುದ್ದಿಗಳಿಗೆ ಗಮನ ಕೊಡದಂತೆ ಸೂಚಿಸಲಾಗಿದೆ.

    ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದ್ದರೆ, ಮಸೀದಿ ಮೇಲಿನ ಧ್ವನಿವರ್ಧಕ ತೆರವು ಮಾಡಿ- ಪೊಲೀಸ್ ಇಲಾಖೆ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts