More

    ಗುರುರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ ಸಿಬಿಐಗೆ ವಹಿಸಿ: ಗುಹಾ ಆಗ್ರಹ

    ಬೆಂಗಳೂರು: ಗುರುರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೆಪಿಸಿಸಿ ವೈದ್ಯಕೀಯ ಘಟಕದ ಕಾರ್ಯದರ್ಶಿ ಡಾ.ಶಂಕರ್ ದ್ವಾರಕನಾಥ್ ಗುಹಾ ಆಗ್ರಹಿಸಿದ್ದಾರೆ.

    ಪ್ರಕರಣ ಸಂಬಂಧ ಇಂದು ನಗರದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಈಗಾಗಲೇ ಪ್ರಕರಣ ದಾಖಲಾಗಿ ಸುಮಾರು 2 ವರ್ಷ ಆಗಿದೆ. ಆದರೆ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಎರಡು ವರ್ಷ ಕಳೆದರೂ ಠೇವಣಿದಾರರಿಗೆ ನ್ಯಾಯ ಸಿಕ್ಕಿಲ್ಲ. ಅದಾಗಲೇ 70 ಮಂದಿ ಠೇವಣಿದಾರರು ಮನನೊಂದು ವಿವಿಧ ಕಾಯಿಲೆಗೆ ತುತ್ತಾಗಿ ಸತ್ತಿದ್ದಾರೆ. ಇನ್ನೂ 6 ತಿಂಗಳ ಕಾಲ ಬ್ಯಾಂಕ್ ವಹಿವಾಟು ಯಥಾಸ್ಥಿತಿಯಲ್ಲಿ ಇರಬೇಕು ಎಂಬ ಆದೇಶ ಬಂದಿದೆ. ಇದರಿಂದ ಠೇವಣಿದಾರರು ತಮ್ಮ ಹಣ ಬ್ಯಾಂಕ್​ನಿಂದ ತೆಗೆಯಲು ಆಗುತ್ತಿಲ್ಲ. ಸದ್ಯ ಈ ಪ್ರಕರಣವನ್ನ ಸಿಐಡಿಗೆ ನೀಡಲಾಗಿದೆ. ಆದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಹೂಡಿಕೆದಾರರ ಪರವಾಗಿ ಆಗ್ರಹಿಸಿದರು.

    ಇದನ್ನೂ ಓದಿ: ಕರೊನಾ ವಿಷಯದಲ್ಲಿ ಸದ್ಯ ಇವರೇ ಆತಂಕಕಾರಿ: ಆರೋಗ್ಯ ಪರಿಣತರು ಹೀಗಂದಿದ್ದೇಕೆ?

    ಈ ಬ್ಯಾಂಕ್​​ಗೆ ಆರ್​​ಬಿಐ ಸತತವಾಗಿ ಎ ಗ್ರೇಡ್ ಸರ್ಟಿಫಿಕೇಟ್ ನೀಡಿದೆ. ಇದನ್ನ ಗಮನಿಸಿದರೆ ಇದರಲ್ಲಿ ಆರ್​ಬಿಐ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇಂತಹ ವಂಚಕ ಬ್ಯಾಂಕ್​ಗೆ ಆರ್​ಬಿಐ ‘ಎ’ ಗ್ರೇಡ್ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಇನ್ನು ವಂಚನೆ ನಡೆಸಿದ ಬ್ಯಾಂಕ್ ಈಗ ಬೇರೆ ಬೇರೆ ಕಡೆ ಬ್ರಾಂಚ್​ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಈ ಪ್ರಕರಣದಲ್ಲಿ ರಾಜಕೀಯ ದುರುದ್ದೇಶ ಇರುವುದು ಪಕ್ಕಾ ಆಗಿದೆ. ಈ ಪ್ರಕರಣದ ಬಗ್ಗೆ ಕೇಳಿದರೆ ಸಂಸದರು ಉಡಾಫೆ ಉತ್ತರ ಕೊಡುತ್ತಾರೆ. ಈ ಸಮಸ್ಯೆಯನ್ನು ಸಂಸದರು ಹಾಗೂ ಶಾಸಕರ ಕೈಯಲ್ಲಿ ಬಗೆಹರಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಯವರೇ ಮಧ್ಯಪ್ರವೇಶ ಮಾಡಬೇಕು, ನೊಂದಿರುವ ಠೇವಣಿದಾರರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು. ಜುಲೈ 14ರಂದು ಆಡಿಟ್ ರಿಪೋರ್ಟ್​ ಕೊಡುತ್ತೇವೆ ಎಂದು ಹೇಳಿದ್ದಾರೆ. ಅದನ್ನು ಕೊಡದಿದ್ದರೆ ಆರ್​ಬಿಐ ಚಲೋ ಮಾಡಿ ನ್ಯಾಯ ಕೇಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಈ ಬ್ಯಾಂಕ್​ನಲ್ಲಿ ಹಣ ಇಟ್ಟಿರುವ ಠೇವಣಿದಾರರಲ್ಲಿ ಬಹುತೇಕರು ಹಿರಿಯನಾಗರಿಕರಾಗಿದ್ದು, ಕಳೆದ ವಾರ ನಾವು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನ ಭೇಟಿ ಮಾಡಿದ್ದೆವು. ಆಗ ನ್ಯಾಯ ಕೊಡಿಸಿ ಎಂದು ಅವರಲ್ಲಿ ಕೇಳಿದಾಗ, ನನ್ನನ್ನು ಕೇಳಿ ಹಣ ಇಟ್ಟಿದ್ರಾ ಅಂತ ಬೇಜವಾಬ್ದಾರಿ ಉತ್ತರ ಕೊಟ್ಟರು ಎಂಬುದಾಗಿ ಠೇವಣಿದಾರ ಹರೀಶ್ ಆರೋಪಿಸಿದ್ದಾರೆ.

    ಇದನ್ನೂ ಓದಿ: 30 ಸಾವಿರ ಸಸಿಗಳನ್ನು ನೆಟ್ಟ ಮಹಾನ್​ ಪ್ರಕೃತಿಪ್ರೇಮಿ, ಅಂತರ್ಯಾಮಿ!

    ಫೊರೆನ್ಸಿಕ್ ಆಡಿಟ್ ಇನ್ನೂ ಆಗಿಯೇ ಇಲ್ಲ. ಈ ಹಗರಣದಲ್ಲಿ ಬಿಜೆಪಿಯ ಮಾಜಿ ಎಮ್​ಎಲ್​ಸಿ ಹಾಗೂ ವಕ್ತಾರ ಅಶ್ವತ್ಥನಾರಾಯಣ್ ಡಿಫಾಲ್ಟರ್ ಆಗಿದ್ದು, 12 ಕೋಟಿ ರೂ. ಕಟ್ಟಿಲ್ಲ ಎಂದು ಆರೋಪಿಸಿದರು. ಜೊತೆಗೆ ಸರ್ಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು. ಸಿಎಂ ಯಡಿಯೂರಪ್ಪ ಈ ಬಗ್ಗೆ ಗಮನ ನೀಡಬೇಕೆಂದು ಅವರು ಮನವಿ ಮಾಡಿಕೊಂಡರು.

    ಆರ್​ಬಿಐ ಕೂಡ ಈ ವಂಚನೆಗಳನ್ನು ನೋಡಿಕೊಂಡು ಯಾಕೆ ಸುಮ್ಮನಿದೆ ಎಂದು ಪ್ರಶ್ನಿಸಿದ ಹರೀಶ್, ಈ ಸಂಬಂಧ ಆರ್​ಬಿಐ ತುರ್ತಾಗಿ ಕ್ರಮಕೈಗೊಳ್ಳಬೇಕಿದೆ. 25 ಸಾವಿರ ಜನ ಹಣ ಕಳೆದುಕೊಂಡಿದ್ದಾರೆ. 2,130 ಕೋಟಿ ರೂಪಾಯಿ ಗ್ರಾಹಕರಿಗೆ ವಾಪಸ್ ಬರಬೇಕಿದೆ. ಆದರೆ ಆರ್​​ಬಿಐ ಸ್ಪಷ್ಟ ಕ್ರಮಕೈಗೊಳ್ಳುತ್ತಿಲ್ಲ ಎಂದು ಬೇಸರ ಹೊರಹಾಕಿದರು. ಈಗಾಗಲೇ ಹಣ ಕಳೆದುಕೊಂಡ ಹಲವರು ಸಾವಿಗೀಡಾಗಿದ್ದಾರೆ. ಅದಾಗ್ಯೂ ಆಡಿಟ್ ರಿಪೋರ್ಟ್ ನೆಪದಲ್ಲಿ ಸಮಯ ತಳ್ಳುತ್ತಿದ್ದಾರೆ. ವಿಳಂಬದ ಹಿಂದೆ ರಾಜಕೀಯ ಹಿತಾಸಕ್ತಿ ಕಾಣುತ್ತಿದೆ ಎಂದು ಸ್ಥಳೀಯ ರಾಜಕಾರಣಿಗಳ ವಿರುದ್ಧ ಹರೀಶ್ ಗಂಭೀರ ಆರೋಪ ಮಾಡಿದ್ದಾರೆ. ಪಾಲಿಕೆ ಮಾಜಿಸದಸ್ಯ ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಅಪರಾಧ ನಡೆದ ಸ್ಥಳಕ್ಕೆ ಇನ್ನು ಇವರು ಬರಲಿದ್ದಾರೆ; ಇದು ದೇಶದಲ್ಲೇ ಮೊದಲು!

    ಎಲ್ಲರ ಬಾಯಲ್ಲೂ ಇಡ್ಲಿ!; ಯಾಕೆ ಯಾಕೆ ಅನ್ನೋದೇ ಹಲವರ ಪ್ರಶ್ನೆ!

    ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts