More

    21 ವರ್ಷ ಮೇಲ್ಪಟ್ಟಿದ್ದರೆ ಮಾತ್ರ ಮದ್ಯಪಾನಕ್ಕೆ ಅವಕಾಶ! ಹೆಣ್ಣನ್ನು ಅಗೌರವಿಸಿದರೆ ಸಿಗುತ್ತೆ ಸರಿಯಾದ ಶಿಕ್ಷೆ

    ದುಬೈ: ಮೊದಲೆಲ್ಲ ಚಿಂತೆ, ಮಾನಸಿಕ ನೋವುಗಳನ್ನು ಮರೆಯಲೆಂದು ಮದ್ಯಪಾನ ಮಾಡುತ್ತಿದ್ದರಂತೆ. ಆದರೆ ಈಗ ಕಾಲ ಬದಲಾಗಿಬಿಟ್ಟಿದೆ. ಬರ್ತ್​ ಡೇ ಪಾರ್ಟಿಯಿಂದ ಹಿಡಿದು, ಯಾರದ್ದೋ ತಿಥಿಯವರೆಗೂ, 18 ದಾಟಿರದ ಪೋರರಿಂದ ಹಿಡಿದು ಇಳಿ ವಯಸ್ಸಿನವರವರೆಗೂ ಎಲ್ಲರಿಗೂ ಮದ್ಯಪಾನವೆನ್ನುವುದು ಮಾಮೂಲಿಯಾಗಿಬಿಟ್ಟಿದೆ. ಆದರೆ ಎಲ್ಲ ದೇಶಗಳಲ್ಲಿ ಹಾಗಿಲ್ಲ. ಕೆಲ ದೇಶಗಳಲ್ಲಿ ಮದ್ಯಪಾನಕ್ಕೆ ಕಠಿಣ ನಿರ್ಬಂಧಗಳಿವೆ. ಸರ್ಕಾರಿ ಪರವಾನಗಿ ಹೊಂದಿದವರು ಮಾತ್ರವೇ ಮದ್ಯಪಾನ ಮಾಡಬಹುದು ಎನ್ನುವಂತಹ ನಿಯಮಗಳೂ ಇವೆ.

    ಇದನ್ನೂ ಓದಿ: ‘ರಾಷ್ಟ್ರಧ್ವಜ’ ಆಯ್ತು…ಇದೀಗ ಮತ್ತೊಂದು ವಿವಾದ ಸೃಷ್ಟಿಸಿದ ಮೆಹಬೂಬಾ ಮುಫ್ತಿ

    ಇಂತಹ ಕಠಿಣ ನಿರ್ಬಂಧವಿರುವ ರಾಷ್ಟ್ರಗಳಲ್ಲಿ ಒಂದು ಅರಬ್​ ಸಂಯುಕ್ತ ಸಂಸ್ಥಾನ (ಯುಎಇ). ಇಲ್ಲಿ ಮದ್ಯಪಾನ ಮಾರಾಟ, ವರ್ಗಾವಣೆ ಮತ್ತು ಸೇವನೆಗೆ ಹಲವು ನಿಯಮಗಳಿವೆ. ಕಾನೂನು ಬಾಹಿರವಾಗಿ ಮದ್ಯಪಾನ ಮಾಡಿದರೆ, ನಿಮಗೆ ತಕ್ಕ ದಂಡ ಹಾಕಲಾಗುತ್ತದೆ. ಇಷ್ಟೊಂದು ಕಠಿಣ ನಿರ್ಬಂಧ ಪಾಲಿಸುತ್ತಿದ್ದ ಯುಎಇ ಇದೀಗ ಕೊಂಚ ನಿಯಮ ಸಡಿಲಿಕೆ ಮಾಡಿದೆ. 21 ವರ್ಷ ಮೇಲ್ಪಟ್ಟವರು ಮದ್ಯಪಾನ ಮಾಡುವುದಕ್ಕೆ ನಿಯಮಗಳನ್ನು ತೆಗೆದುಹಾಕಲಾಗಿದೆ. ಈ ಹಿಂದಿನ ನಿಯಮಗಳನ್ನು 21 ವರ್ಷ ಕೆಳಗಿನವರಿಗೆ ಮಾತ್ರವೇ ಮುಂದುವರಿಸುವುದಾಗಿ ಸರ್ಕಾರ ಹೇಳಿಕೊಂಡಿದೆ.

    ಇದನ್ನೂ ಓದಿ: ‘ಲವ್​ ಮಾಕ್ಟೇಲ್​ 2’ ಚಿತ್ರತಂಡದಿಂದ ಹೊರನಡೆದ ರಘು ದೀಕ್ಷಿತ್​

    ಕೇವಲ ಮದ್ಯಪಾನ ಮಾತ್ರವಲ್ಲ, ಅನೇಕ ವಿಚಾರಗಳಲ್ಲಿ ಸರ್ಕಾರ ನಿರ್ಬಂಧಗಳನ್ನು ತೆಗೆದುಹಾಕಿದೆ. ಧರ್ಮದ ಪಾಲನೆ ಮಾಡದೆ, ಅದಕ್ಕೆ ಧಕ್ಕೆ ತರುವ ಹೆಣ್ಣು ಮಕ್ಕಳಿಗೆ ಪುರುಷರು ಶಿಕ್ಷೆ ನೀಡುವುದು ಅಥವಾ ಕಿರುಕುಳ ನೀಡುವುದು ಅಲ್ಲಿಯ ಸಾಮಾನ್ಯ ಸಂಗತಿ. ಆದರೆ ಇನ್ನು ಮುಂದೆ ಹಾಗೆ ಮಾಡುವಂತಿಲ್ಲ. ಆ ರೀತಿ ಮಾಡಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಅಷ್ಟೇ ಅಲ್ಲ ಒಂದು ವೇಳೆ ನೀವು ಮಹಿಳೆಯರಿಗೆ ಬೀದಿಯಲ್ಲಿ ನಿಂತು ಚುಡಾಯಿಸುವುದು, ಕಿರುಕುಳ ನೀಡುವುದೇನಾದರು ಮಾಡಿದರೆ, ಅದಕ್ಕೂ ತಕ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ.

    ಇದನ್ನೂ ಓದಿ: VIDEO| ಟೋಲ್ ಗೇಟ್​ನಲ್ಲಿ ಧಗಧಗನೆ ಹೊತ್ತಿ ಉರಿದ ಲಾರಿ! ಬೆಚ್ಚಿಬಿದ್ದ ಜನತೆ

    ಮದುವೆಗೆ ಮೊದಲು ಪ್ರೀತಿಸುವವರು ಒಟ್ಟಿಗೆ ಬಾಳುವುದಕ್ಕೆ ಕೆಲ ದೇಶಗಳಲ್ಲಿ ನಿಷಿದ್ಧವಿದೆ. ಆ ನಿರ್ಬಂಧವನ್ನು ಇದುವರೆಗೆ ಪಾಲಿಸಿದ್ದ ಯುಎಇ ಇದೀಗ ನಿರ್ಬಂಧವನ್ನು ಕೈ ಬಿಟ್ಟಿದೆ. ದಂಪತಿ ಮದುವೆಗೂ ಮೊದಲೂ ಒಟ್ಟಿಗೆ ಬಾಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ಡ್ರಗ್ಸ್​ ಕೇಸ್​ನಲ್ಲಿ ಮಾಜಿ ಸಚಿವರ ಪುತ್ರ ಅರೆಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts