More

    ‘ರಾಷ್ಟ್ರಧ್ವಜ’ ಆಯ್ತು…ಇದೀಗ ಮತ್ತೊಂದು ವಿವಾದ ಸೃಷ್ಟಿಸಿದ ಮೆಹಬೂಬಾ ಮುಫ್ತಿ

    ಶ್ರೀನಗರ: ಇತ್ತೀಚೆಗಷ್ಟೇ ರಾಷ್ಟ್ರಧ್ವಜದ ವಿಚಾರದಲ್ಲಿ ಬಹುದೊಡ್ಡ ವಿವಾದ ಸೃಷ್ಟಿಸಿದ್ದ ಪೀಪಲ್ಸ್​ ಡೆಮಾಕ್ರಟಿಕ್​ ಪಾರ್ಟಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಈಗ ಇನ್ನೊಂದು ಹೇಳಿಕೆಯ ಮೂಲಕ ವಿವಾದ ಹುಟ್ಟು ಹಾಕಿದ್ದಾರೆ.

    ಇಂದು ಸುದ್ದಿಗೋಷ್ಠಿ ನಡೆಸಿದ ಮುಫ್ತಿ, ಜಮ್ಮು-ಕಾಶ್ಮೀರದ ಯುವಕರಿಗೆ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳದೆ ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಯುವಜನತೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
    ಜಮ್ಮುಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಯಿತು. ಆದರೆ ಆ ಸಂದರ್ಭದಲ್ಲಿ ಭಯೋತ್ಪಾದನೆ ಹೆಚ್ಚಾಯಿತು. ಕಳೆದ ವರ್ಷ ಆರ್ಟಿಕಲ್​ 370ನ್ನು ರದ್ದುಗೊಳಿಸುವ ಮೂಲಕ ಜಮ್ಮು-ಕಾಶ್ಮೀರವನ್ನು ಇಬ್ಭಾಗ ಮಾಡಲಾಯಿತು. ಇಲ್ಲಿನ ಪ್ರತಿ ಹಳ್ಳಿಯಲ್ಲಿ 10-15 ಯುವಕರು ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಇದನ್ನೂ ಓದಿ: VIDEO| ಟೋಲ್ ಗೇಟ್​ನಲ್ಲಿ ಧಗಧಗನೆ ಹೊತ್ತಿ ಉರಿದ ಲಾರಿ! ಬೆಚ್ಚಿಬಿದ್ದ ಜನತೆ

    ಇಲ್ಲಿನ ಜನರ ಧ್ವನಿ ಅಡಗಿಸಲಾಗಿದೆ. ಹಾಗಾಗಿ ಇವರಿಗೆ ಬೇರೆ ಆಯ್ಕೆಗಳಿಲ್ಲ. ಇದೇ ಕಾರಣಕ್ಕೆ ಜಮ್ಮು-ಕಾಶ್ಮೀರದ ಯುವಕರು ತಾವು ಜೈಲಿಗೆ ಹೋದರೂ ಸರಿ, ಸತ್ತರೂ ಸರಿ ಎಂದು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಅವರಿಗೆ ಬೇರೆ ಆಯ್ಕೆ ಯಾವುದಿದೆ ಎಂದು ಮುಫ್ತಿ ಪ್ರಶ್ನಿಸಿದ್ದಾರೆ.

    ಇನ್ನು ಚೀನಾ ಮತ್ತು ಪಾಕಿಸ್ತಾನದೊಂದಿಗಿನ ಗಡಿ ವಿವಾದದ ಬಗ್ಗೆ ಮಾತನಾಡಿದ ಮುಫ್ತಿ, ನಾವು ಚೀನಾದೊಂದಿಗೆ ಮಾತುಕತೆ ನಡೆಸುತ್ತೇವೆ ಎಂದಾದ ಮೇಲೆ, ಪಾಕಿಸ್ತಾನದೊಂದಿಗೆ ಯಾಕೆ ಮಾತುಕತೆ ಸಾಧ್ಯವಿಲ್ಲ ಎಂದೂ ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)

    ಚಿಕನ್​ ಫಿಲ್ಲೆಟ್ಸ್​ ಹೆಸರು ಕೇಳುತ್ತಿದ್ದಂತೆಯೇ​ ಕೋಮಾದಿಂದ ಎದ್ದುಕುಳಿತ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts