VIDEO| ಟೋಲ್ ಗೇಟ್​ನಲ್ಲಿ ಧಗಧಗನೆ ಹೊತ್ತಿ ಉರಿದ ಲಾರಿ! ಬೆಚ್ಚಿಬಿದ್ದ ಜನತೆ

truck fire
Published on

ಕೊಪ್ಪಳ: ಕುಷ್ಟಗಿ ತಾಲೂಕಿನ ವಣಗೇರಿ ಟೋಲ್ ಗೇಟ್​ನಲ್ಲಿ ಸೋಮವಾರ ಲಾರಿಯೊಂದಕ್ಕೆ ಬೆಂಕಿಬಿದ್ದು ಹೊತ್ತಿಉರಿದಿದೆ.

ಕೊಪ್ಪಳ ತಾಲೂಕು ಗಿಣಗೇರದಿಂದ ಮಹಾರಾಷ್ಟ್ರದ ಸಾಂಗ್ಲಿಗೆ ಲಾರಿಯಲ್ಲಿ ಸಿಮೆಂಟ್ ತುಂಬಿಕೊಂಡು ಹೋಗಲಾಗುತ್ತಿತ್ತು. ಟೋಲ್​ಗೇಟ್​ನಲ್ಲಿ ನಿಲ್ಲುತ್ತಿದ್ದಂತೆ ಲಾರಿಗೆ ಬೆಂಕಿಯ ಕೆನ್ನಾಲಗೆ ವ್ಯಾಪಿಸಿ ಸಂಪೂರ್ಣ ಸುಟ್ಟುಕರಕಲಾಗಿದೆ. ಈ ದೃಶ್ಯ ಕಂಡ ಇತರ ವಾಹನ ಸವಾರರು ಮತ್ತು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಟೋಲ್ ಗೇಟ್​ನಲ್ಲಿದ್ದ ಹಣ ಸಂಗ್ರಹಿಸುವ ಕ್ಯಾಬಿನ್ ಕೂಡ ಬೆಂಕಿಗೆ ಆಹುತಿಯಾಗಿದೆ. ಸಿಸಿ ಕ್ಯಾಮರಾ ಕೂಡ ಸುಟ್ಟುಕರಕಲಾಗಿದೆ. ಬೆಂಕಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಕುಷ್ಟಗಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಅಷ್ಟರಲ್ಲಿ ಲಾರಿ ಸಂಪೂರ್ಣ ಹಾನಿಯಾಗಿತ್ತು.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಲಾರಿ ಚಾಲಕ ಮತ್ತು ಕ್ಲೀನರ್ ಕೆಳಗಿಳಿದು ಅಪಾಯದಿಂದ ಪಾರಾಗಿದ್ದಾರೆ. ಕುಷ್ಟಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net